ಕೊಪ್ಪಳ, ಜ. 31 ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾರ್ಗಸೂಚಿಯನ್ವಯ ಹೈದರಾಬಾದ
ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಿದ್ದು, ಇಲಾಖೆಯ ನಿರ್ದೇಶಕರ ಸರ್ವಾಧಿಕಾರಿ
ಧೋರಣೆ, ಸಚಿವೆ ಉಮಾಶ್ರೀ ಅವರ ನಿರ್ಲಕ್ಷವನ್ನು ಖಂಡಿಸಿ ಕೊಪ್ಪಳದಲ್ಲಿ ಸಾಹಿತಿ,
ಕಲಾವಿದರ ಕನ್ನಡಪರ ಸಂಘಟನೆಗಳ ಸಾಂಸ್ಕøತಿಕ ಒಕ್ಕೂಟದ ಅಡಿಯಲ್ಲಿ ಇಂದು ಸಭೆ ಸೇರಿ
ಚರ್ಚಿಸಲಾಯಿತು.
ಸಭೆಯಲ್ಲಿ ಇಲಾಖೆಯ ಮಾರ್ಗಸೂಚಿ ಪ್ರಕಾರ ಕಳೆದ ಆಗಸ್ಟ್ ತಿಂಗಳಲ್ಲಿ ಆನ್ ಲೈನ್‍ನಲ್ಲಿ ಅರ್ಜಿ ಪಡೆದಿದ್ದರೂ 7 ತಿಂಳ ಕಾಲ ಸುಮ್ಮನಿದ್ದು, ಜನೆವರಿ ಅಂತ್ಯದಲ್ಲಿ ಇಲಾಖೆಯ ಎಲ್ಲ ಹಣ ಮುಗಿದು ಹೋದ ಮೇಲೆ ಕಾಟಾಚಾರವೆಂಬಂತೆ ಕಡಿಮೆ ಹಣದ ಧನ ಸಹಾಯವನ್ನು ಸಂಘ ಸಂಸ್ಥೆಗಳಿಗೆ ನೀಡಿ ಕರ್ತವ್ಯ ಲೋಪವೆಸಗಿದ್ದಾರೆ. ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಮಾರ್ಗಸೂಚಿ ಪ್ರಕಾರ ವಲಯವಾರು ಹಣವನ್ನು ಸಮನಾಗಿ ಹಂಚಬೇಕೆಂಬ ನಿಯಮವಿದ್ದರೂ ಪಾಲಿಸಿಲ್ಲ. ಈ ಭಾಗದ ಕಲಾವಿದರಿಗೆ ನಿರ್ದೇಶಕರು 371(ಜೆ) ಕಲಮಿನ ಸೌಲತ್ತುಗಳನ್ನು ನೀಡದೆ ವಂಚಿಸಿರುತ್ತಾರೆ. ಅಲ್ಲದೆ ಕಲಾವಿದರನ್ನು ಗೌರವದಿಂದ ಕಾಣದೆ ಕಳ್ಳರು ಎಂಬಂತೆ ನೋಡುತ್ತಾಯಿದ್ದಾರೆ. ಈ ಭಾಗದ ಕಲಾವಿದರಿಗೆ ಅದನ್ನೇ ನಂಬಿರುವ ವೃತ್ತಿಪರ ಕಲಾವಿದರಿಗೆ ಈ ವರ್ಷ ಕಾರ್ಯಕ್ರಮಗಳನ್ನು ಸಹ ನೀಡಿರುವುದಿಲ್ಲ. ಕೇವಲ ಬೆಂಗಳೂರು ನಗರಕ್ಕೆ ಇಲಾಖೆ ಇದ್ದಂತೆ ನಿರ್ದೇಶಕರು ಭಾವಿಸಿದಂತಿದೆ. ಈ ಕುರಿತು ಸ್ವತಃ ಕಲಾವಿದೆಯಾಗಿ ಸಚಿವೆಯಾಗಿರುವ ಉಮಾಶ್ರೀ ಅವರನಿರ್ಲಕ್ಷ ಧೋರಣೆ ಕುರಿತು ಸಭೆಯಲ್ಲಿ ಖಂಡಿಸಲಾಯಿತು.
ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶನಾಲಯದಿಂದ ಕಲಾವಿದರ ವಿರೋಧಿ ಧೊರಣೆ ಕುರಿತು ಶೀಘ್ರದಲ್ಲಿ ಸಾಂಸ್ಕøತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಲ್ಲದೆ ಜಾನಪದ ಸಂಘಟಕ ವೈ. ಬಿ. ಜೂಡಿ, ಸಾಹಿತಿ ಜಿ. ಎಸ್. ಗೋನಾಳ, ಸುಗಮ ಸಂಗೀತ ಕಲಾವಿದ ಪರಶುರಾಮ ಬಣ್ಣದ, ತತ್ವಪದ ಕಲಾವಿದ ಲಚ್ಚಣ್ಣ ಹಳಪೇಟಿ, ಸಾಂಸ್ಕøತಿಕ ಸಂಘಟಕ ಮಹೇಶಬಾಬು ಸುರ್ವೆ, ನೃತ್ಯ ನಿರ್ದೇಶಕ ರಿದಂ ಬಸವರಾಜ, ಭಜನಾ ಸಂಘದ ಜಗದಯ್ಯ ಸಾಲಿಮಠ, ಅಕ್ಕಮಹಾದೇವಿ ಮಹಿಳಾ ಮಂಡಳಿದ ಕೋಮಲಾ ಕುದರಿ ಮೋತಿ, ಬೀದಿ ನಾಟಕ ಕಲಾವಿದೆ ಲಲಿತಾ ಪೂಜಾರ, ಜನಪದ ಕಲಾ ತಂಡದ ಶಿವಮೂರ್ತಿ ಮೇಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೊಳಲು ವಾದಕ ಹನುಮಂತಕುಮಾರ ಮುಧೋಳ ಸೇರಿದಂತೆ ಮುಂತಾದವ ಕಲಾವಿದರು ಸಭೆಯಲ್ಲಿ ಆಲ್ಗೊಂಡಿದ್ದರು.

0 comments:
Post a Comment