PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-22- ಶ್ರೀಗವಿಮಠದಲ್ಲಿ ಸಂಜೆ ೬ಕ್ಕೆ ಬಸವ ಪಟ ಆರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಬಸವ ಪಟದಲ್ಲಿ ನಂದಿ, ಈಶ್ವರ,  ಸೂರ್ಯ, ಚಂದ್ರ , ವರುಣ,  ಪ್ರಣವ, ಗಿಡ-ಮರ ಬಳ್ಳಿ ಮುಂತಾದ ಪ್ರಕೃತೀಯ ಚಿತ್ರಣಗಳು ಅದರಲ್ಲಿ ಅಳವಡಿಸಲಾಗಿದೆ. ಬಸವ ಪಟವನ್ನು ಬಿದಿರಿನಿಂದ ನಿರ್ಮಿಸಿದ ಚೌಕಟ್ಟಿಗೆ ಕಟ್ಟಿಲಾಗಿತ್ತು. ಈ ಬಸವ ಪಟವನ್ನು ವಿಧಿ-ವಿಧಾನಗಳಿಂದ ಪೂಜೆಗೈದು ಮಂಗಳಾರತಿ ಎತ್ತಿ ಕತೃ ಗದ್ದುಗೆಗೆ ಪ್ರದಕ್ಷಣೆಗೈದು ತರುವಾಯದಲ್ಲಿ ಗದ್ದುಗೆಯ ಮುಂಬಾಗದಲ್ಲಿರುವ ಶಿಲಾ ಕಂಬಕ್ಕೆ ಕಟ್ಟುವುದರ ಮೂಲಕ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

0 comments:

Post a Comment

 
Top