ಕೊಪ್ಪಳ-22- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಂಜೆ ೫ ಕ್ಕೆ ಶ್ರೀಮಠದಲ್ಲಿರುವ ಅನ್ನಪೂರ್ಣೇಶ್ವರಿ ದೇವಿಗೆ ಹಾಗೂ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ ಅನೂಚಾನವಾಗಿ ನಡೆದುಬಂದ ಕಾರ್ಯಕ್ರಮ ಇಂದು ಸಹ ಜರುಗಿತು. ಅನ್ನಪೂಣೇಶ್ವರಿ ದೇವಿಯ ಮುಂದೆ ತಳಿರು ತೋರಣ ಬಾಳೆಕಂಬಗಳಿಂದ ಅಲಂಕೃತಗೊಂಡಿರುವ ಮಂಟಪದಡಿಯಲ್ಲಿ ತಾಯಂದಿರು ಉಡಿ ತುಂಬುವ ಕಾರ್ಯಕ್ರಮ ವಿಜೃಭಣೆಯಿಂದ ಜರುಗಿತು. ಜಾತ್ರಾ ಯಶಸ್ವಿಗೆ ಮಾತೆಯನ್ನು
ಪೂಜಿಸುವದು, ಭಕ್ತರು ಸುಖ,ಶಾಂತಿ,ಸಮೃದ್ಧಿಗಾಗಿ ಪ್ರಾರ್ಥಿಸುವದು, ವಿಶೇಷವಾಗಿ ಮಕ್ಕಳ
ಫಲಾಪೇಕ್ಷೆ ಉಳ್ಳವರು, ವಿವಾಹ ಅಪೇಕ್ಷಿತ ಸಹೋದರಿಯರು ಹೀಗೇ ಹತ್ತು ಹಲವಾರು ಸ್ವಯಂ
ಸಂಕಲ್ಪಗಳೊಂದಿಗೆ ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ನಿರತರಾಗಿರುವದು ಕಂಡುಬಂದಿತು.
ಮೊರದ ತುಂಬ ಅಕ್ಕಿ, ಕಣ, ಎಲೆ, ಅಡಿಕೆ, ಹಸಿರು ಬಳೆ, ಹೀಗೇ ಮಂಗಲದ್ರವ್ಯಗಳನ್ನು
ಅರ್ಪಿಸಿದರು. ಕೊಪ್ಪಳದ ಹಾಗೂ ಸುತ್ತಮುತ್ತಲಿನ ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು.
ಉಡಿ ತುಂಬಿಸಿಕೊಳ್ಳಲು ಭಕ್ತಿಭಾವದಿಂದ ಎಲ್ಲ ತಾಯಂದಿರು ಸಾಲು ಸಾಲಾಗಿ ನಿಂತು
ಕೊಂಡಿರುವದು ಕಂಡು ಬಂದಿತು.
Subscribe to:
Post Comments (Atom)
0 comments:
Post a Comment