ಕೊಪ್ಪಳ ಜ. ೨೧ (ಕ.ವಾ ) ಪ್ರಸಕ್ತ ಸಾಲಿನ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ವರ್ಷಾಂತ್ಯದ ಬಿಲ್ಲುಗಳನ್ನು ನಿಗದಿತ ಅವಧಿಯೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ ವಿ. ಹಳ್ಯಾಳ ಅವರು ಸೂಚನೆ ನೀಡಿದ್ದಾರೆ.
ಸರ್ಕಾರದ ಆದೇಶದನ್ವಯ ಇಎಪಿ, ಕೇಂದ್ರ ಪುರಸ್ಕೃತ ಹಾಗೂ ಕೇಂದ್ರ ಯೋಜನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅನುದಾನ ಬಿಡುಗಡೆ ಆದೇಶಗಳನ್ನು ಫೆ. ೧೬ ಒಳಗಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹೊರಡಿಸಬೇಕು. ಅಲ್ಲದೆ ಬಜೆಟ್ ಅಪ್ ಲೋಡಿಂಗ್ ಮತ್ತು ಬಿಲ್ಲುಗಳನ್ನು ಮಾ. ೧೬ ರೊಳಗಾಗಿ ಸಲ್ಲಿಸಬೇಕು. ದಿ: ೩೧-೦೧-೨೦೧೬ ರ ಹಾಗೂ ಅದಕ್ಕೂ ಮುಂಚಿತ ಅವಧಿಯ ಎಲ್ಲಾ ಪ್ರಯಾಣದ ಬಿಲ್ಲುಗಳು ಹಾಗೂ ಎಲ್ಲಾ ಸಾದಿಲ್ವಾರು ಬಿಲ್ಲುಗಳನ್ನು ಫೆ. ೨೯ ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು. ದಿ: ೩೧-೦೧-೨೦೧೬ ರ ನಂತರ ಭರಿಸಿದ ವೆಚ್ಚಗಳಿಗೆ ಸಂಬಂಧಿಸಿದ ಎಲ್ಲಾ ಸಾದಿಲ್ವಾರು / ಪ್ರಯಾಣ ಭತ್ಯೆ ಬಿಲ್ಲುಗಳು ಹಾಗೂ ಇತರೆ ಅನುದಾನಿತ ಬಿಲ್ಲುಗಳು, ಯಾವುದೇ ಅವಧಿಯ ವಿದ್ಯುಚ್ಛಕ್ತಿ, ದೂರವಾಣಿ ಹಾಗೂ ಕಟ್ಟಡ ಬಾಡಿಗೆಗೆ ಸಂಬಂಧಿಸಿದ ಬಿಲ್ಲುಗಳನ್ನು ಮಾರ್ಚ್ ೧೬ ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು. ಮಾರ್ಚ್ ೨೦೧೬ ರ ಒಳಗೆ ಪಾವತಿಸಲ್ಪಡುವ ಅನುದಾನಿತ ವೇತನ ಬಿಲ್ಲು ಹಾಗೂ ಇತರೆ ಅನುದಾನಿತ ಬಿಲ್ಲುಗಳು. ವೇತನ ಬಾಕಿ, ಹಬ್ಬದ ಮುಂಗಡ ಮುಂತಾದ ಬಿಲ್‌ಗಳನ್ನು ಮಾ. ೨೪ ರೊಳಗೆ ಸಲ್ಲಿಸಬೇಕು. ಎಲ್ಲಾ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು (ಎ.ಸಿ. ಬಿಲ್ಲು), ಇ.ಎ.ಪಿ. ಕೇಂದ್ರ ಪುರಸ್ಕೃತ ಹಾಗೂ ಕೇಂದ್ರ ಯೋಜನೆ ಬಿಲ್ಲುಗಳನ್ನು ಮಾ. ೩೦ ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು. ಏಪ್ರಿಲ್‌ನಲ್ಲಿ ಪಾವತಿಸಲಾಗುವ ಮಾರ್ಚ್ ತಿಂಗಳ ವೇತನ ಹಾಗೂ ಅನುದಾನಿತ ವೇತನ ಬಿಲ್ಲುಗಳನ್ನು ಮಾ. ೧೬ ರಿಂದ ಮಾ. ೨೧ ರೊಳಗೆ ಅಥವಾ ಏಪ್ರಿಲ್ ೦೨ ರ ನಂತರ ಖಜಾನೆಗೆ ಸಲ್ಲಿಸಬೇಕು. ಮಾ. ೩೧ ರ ಮಧ್ಯಾಹ್ನ ೨-೩೦ ರ ನಂತರ ಯಾವುದೇ ಬಿಲ್ಲುಗಳನ್ನು ಖಜಾನೆಯಲ್ಲಿ ಸ್ವೀಕರಿಸಲಾಗುವುದಿಲ್ಲ. ಎಲ್ಲಾ ಖಜಾನೆಗಳಲ್ಲಿ ಲೆಕ್ಕಗಳನ್ನು ಅಂತಿಮಗೊಳಿಸಲು ಅನುಕೂಲವಾಗುವಂತೆ ಏ. ೦೧ ರ ದಿನವನ್ನು ವ್ಯವಹಾರ ರಹಿತ ದಿನವನ್ನಾಗಿ ಘೋಷಿಸಲಾಗಿದೆ. ನಿಗದಿತ ದಿನಾಂಕಗಳ ನಂತರ ಬರುವ ಯಾವುದೇ ಬಿಲ್ಲುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ ವಿ ಹಳ್ಯಾಳ ಅವರು ತಿಳಿಸಿದ್ದಾರೆ.

0 comments:
Post a Comment