ಇಷ್ಠಲಿಂಗವು ಯಾವುದೇ ಜಾತಿಯವರಿಗೆ ಸೀಮಿತವಾಗಿದ್ದಲ್ಲ ದೇವರ ಹಂಬಲ ಯಾರಿಗೆ ಇದೆಯೋ ಅವರು ಇಷ್ಠಲಿಂಗ ಧಾರಣೆ ಮಾಡಿಕೊಳ್ಳಬಹುದು ಎಂದು ಕಿನ್ನಾಳ ರಸ್ತೆ ಗುರುಬಸವ ಮಹಾಮನೆಯಲ್ಲಿ ನಡೆದ ಇಷ್ಠಲಿಂಗಯೋಗ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಹೇಳಿದರು. ಮುಂದುವರೆದು ಹೇಳಿದ ಅವರು ಲಿಂಗಾಂಗ ಯೋಗದಿಂದ ವ್ಯಕ್ತಿಯು ತನ್ನ ಶಾರೀರಿಕ ದೌರ್ಬಲ್ಯಗಳನ್ನು ಕಳೆದುಕೊಂಡು ಸಾಧನೆ ಕಡೆಗೆ, ಗುರಿಯ ಕಡೆಗೆ ಸಾಗಲು ಸಾಧ್ಯವಿದೆ. ಹಣಗಳಿಸಬೇಕೆಂಬ ಈ ಜಾಗತಿಕರಣದ ಸಮಯದಲ್ಲಿ ಮಾನವ ಸುಖ-ಶಾಂತಿ-ಸಮೃದ್ಧಿ ಇಂದ ಇರಬೇಕಾದರೆ ಅಂತಹ ವ್ಯಕ್ತಿಗಳು ಇಷ್ಠಲಿಂಗ ಯೋಗ ಪ್ರಸ್ತುತ ಕಾಲಮಾನಕ್ಕೆ ಸೂಕ್ತ ಎಂದು ಹೇಳಿದರು. ಸುಮಾರು ೧೫ಕ್ಕೆ ಹೆಚ್ಚು ಜನರಿಗೆ ಲಿಂಗದೀಕ್ಷೆ ಪಡೆದರು. ಈ ಕಾರ್ಯಕ್ರಮದಲ್ಲಿ ಡಾ||ಬಸಯ್ಯ ಸಸಿಮಠ, ವಿಶ್ವಗುರು ಬಸವೇಶ್ವರ ಟ್ರಸ್ಟಿನ ಗೌರವ ಅಧ್ಯಕ್ಷ ಪಂಪಾಪತಿ ಹೊನ್ನಳ್ಳಿ, ಎಲ್.ಹೆಚ್. ಪಾಟೀಲ, ಕೆ. ಶರಣಪ್ಪ ಮಾಜಿ ಶಾಸಕರು ಕುಷ್ಟಗಿ, ವೀರಣ್ಣ ಚಾಕಲಬ್ಬಿ, ಹನುಮೇಶ ಕಲ್ಮಂಗಿ, ಗವಿಸಿದ್ದಪ್ಪ ಪಲ್ಲೆದ, ನಿಂಗಪ್ಪ ಸೋಮಸಾಗರ, ಶಿವು ಕುಕನೂರ, ಸುಮಂಗಲಾ ಅಕ್ಕಿ, ರಾಜೇಶ್ವರಿ ರೊಟ್ಟಿ, ಶರಣಮ್ಮ ಕಲ್ಮಂಗಿ, ಪಾಲಾಕ್ಷಮ್ಮ ಇನ್ನೂ ಮುಂತಾದವರು ಪಾಲ್ಗಿಂಡಿದ್ದರು.
Subscribe to:
Post Comments (Atom)
0 comments:
Post a Comment