PLEASE LOGIN TO KANNADANET.COM FOR REGULAR NEWS-UPDATES

ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾದ ಮಹತ್ತರ ಯೋಜನೆಗಳಾದ ಸಿಂಗಟಾಲೂರ ಏತನೀರಾವರಿ, ಕೃಷ್ಣಾ ಬಿ ಸ್ಕೀಮ್ ಯೋಜನೆ ಮಂಜೂರು ಮಾಡಿದರೂ ಕಾರ್ಯಗತಗೊಳಿಸಲು ನಿಗದಿತ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೆ ನಮ್ಮ ಸರಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನೆ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ಸರಕಾರಕ್ಕೆ ನಾಚಿಕೆಯಾಗುವುದಿಲ್ಲವೆ ಎಂದು ಕಾಂಗ್ರೆಸ್ ಸರಕಾರಕ್ಕೆ ಪ್ರಶ್ನಿಸಿದರು. ಮತ್ತು ಸರಕಾರದ ಬೊಕ್ಕಸವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ಸಿನ ಭ್ರಷ್ಟರಿಗೆ ಬಿಜೆಪಿ ಕಾರ್ಯಕರ್ತರು ಅಂಕುಶ ಹಾಕಬೇಕಾಗಿದೆ ಎಂದು ಸಂಸದರಾದ ಕರಡಿ ಸಂಗಣ್ಣ ಹೇಳಿದರು. ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಯಲಬುರ್ಗಾ ತಾಲೂಕಿನ ಕಾಂಗ್ರೆಸ್ ಮುಖಂಡರುಗಳ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಚಿತ ಪಡಿತರ ಅಕ್ಕಿಯನ್ನು ಕೊಡುತ್ತೇವೆ ಅಂತ ಭರವಸೆ ಕೊಟ್ಟು ಈಗ ಕಿತ್ತುಕೊಂಡು ಬಡವರಿಗೆ ವಂಚಿಸುತ್ತಿದ್ದಾರೆ. ರಾಜ್ಯ ಸರಕಾರ ರೈತರಿಗೆ ಸರಿಯಗಿ ವಿದ್ಯುತ್‌ನ್ನು ನೀಡದೆ ವಂಚಿಸುತ್ತಿದೆ ಮತ್ತು ರೈತರ ಸರಣಿ ಸಾವಿಗೆ ಸರಕಾರವೆ ಹೊಣೆ ಅದಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯರಾದ ಹಾಲಪ್ಪ ಆಚಾರ್ ಮಾತನಾಡಿ, ಬಿಜೆಪಿಯು ಸರಕಾರದ ಅವಧಿಯಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಿರೇಹಳ್ಳ ನಿರಾಶ್ರಿತ ಹಳ್ಳಿಗಳಾದ ವೀರಾಪೂರ, ಶಿರೂರ, ಮುತ್ತಾಳ ಮತ್ತು ಚಂಡೂರ ಗ್ರಾಮಗಳಲ್ಲಿ ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ವಿತರಿಸಿ ಅವರ ಸಂಕಷ್ಟವನ್ನು ಬಗೆಹರಿಸಿರುವುದು ನಮ್ಮ ಸರಕಾರದ ಹೆಮ್ಮೆಯ ವಿಷಯವಾಗಿದೆ. ಕೃಷ್ಣಾ ಬಿ ಸ್ಕೀಮ್ ೩ನೇ ಹಂತದ ಕಾಮಗಾರಿಗೆ ಈಗಿನ ಕಾಂಗ್ರೆಸ್ ಸರಕಾರವು ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್.ಡಿ.ಎ. ಸರಕಾರದ ಮಹತ್ತರವಾದ ಯೋಜನೆಗಳಾದ ಮುದ್ರಾ ಬ್ಯಾಂಕ್, ಜನ-ದನ್ ಯೋಜನೆ, ಅಟಲ್ ಪಿಂಚಣಿ ಯೋಜುನೆ, ಮುಂತಾದವುಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಕೊಡುಗೆ ಅಪಾರವಾಗಿದೆ. ಯೋಗ ದಿನಾಚರಣೆಯು ಈಡೀ ವಿಶ್ವವೇ ಭಾರತವನ್ನು ಅನುಕರುಣಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಮಾತನಾಡಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶರಣಗೌಡ ಪಾಟೀಲ್ ಮಾತನಾಡಿ ಯಲಬುರ್ಗಾ ಶಾಸಕರ ಕಾರ್ಯ ವೈಖರಿ ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷಭಾವದಿಂದ ನೋಡುವುದನ್ನು ವಿರೋದಿಸಿ ಅವರ ಹುಸಿ ಬರವಸೆಗಳಿಗೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಯ ತತ್ವ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿಗೆ ಯಾವುದೇ ಷರತ್ತುಗಳಿಲ್ಲದೆ ನನ್ನ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿದ್ದೇನೆಂದು ಹೇಳಿದರು. ಪಕ್ಷಕ್ಕೆ ಸೇರ್ಪಡೆಯಾದ ಯಲಬುರ್ಗಾದ ಕಾಂಗ್ರೆಸ್ ಮುಖಂಡರಾದ ಬೊಮ್ಮಯ್ಯ ಸೊಪ್ಪಿಮಠ, ಶರಣಪ್ಪ ಮೇಟಿ, ಕಾಸಯ್ಯ ಸೊಪ್ಪಿಮಠ, ಮಹಾಂತೇಶಗೌಡ ಹೊಸಮನಿ, ಕಳಕಪ್ಪ ಜಗಳೂರ, ಪರಸಪ್ಪ ಮ್ಯಾಗಳಮನಿ, ಹನುಮಪ್ಪ ನಡುವಲಮನಿ, ಶಂಕ್ರಪ್ಪ ಸಂದೀಮನಿ ಮತ್ತಿತರರು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವು ಬಾನಾಪೂರ, ಅಯ್ಯನಗೌಡ ಕೆಂಚಮ್ಮನವರ, ಈರಪ್ಪ ಕುಡಗುಂಟಿ, ಬಸವನಗೌಡ, ನೀಲಕಂಠಯ್ಯ ಹಿರೇಮಠ, ದೊಡ್ಡನಗೌಡ, ಹಾಲೇಶ ಕಂದಾರಿ,  ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top