ಕೊಪ್ಪಳ ಜ. ೦೧ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಆರ್. ರಾಮಚಂದ್ರನ್ ಅವರು ಶುಕ್ರವಾರದಂದು ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು. ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ
ಅಧಿಕಾರಿಯಾಗಿದ್ದ ಕೃಷ್ಣ ಉದಪುಡಿ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ
ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್ ಅವರನ್ನು ನೇಮಿಸಿ ಸರ್ಕಾರ ಗುರುವಾರದಂದು ಆದೇಶ
ಹೊರಡಿಸಿತ್ತು. ೨೦೧೨ ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಆರ್. ರಾಮಚಂದ್ರನ್ ಅವರು
ಬಿಎಸ್‌ಸಿ ಪದವಿಧರರು, ಮೂಲತಃ ತಮಿಳುನಾಡಿನವರಾಗಿದ್ದು, ಹಾಸನ ಜಿಲ್ಲೆಯಲ್ಲಿ
ಪ್ರೊಬೆಷನರಿ ಸೇವೆ ಹಾಗೂ ಕಳೆದ ೨೦೧೪ ರ ಸೆಪ್ಟಂಬರ್‌ನಿಂದ ಈವರೆಗೆ ಚಿಕ್ಕಮಗಳೂರು
ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲಾ
ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ
ಅವರು, ಜಿಲ್ಲೆಯ ಅಭಿವೃದ್ಧಿಗೆ ಅದರಲ್ಲೂ ಮುಖ್ಯವಾಗಿ ಸ್ವಚ್ಛಭಾರತ ಯೋಜನೆಯ ಪರಿಣಾಮಕಾರಿ
ಅನುಷ್ಠಾನಕ್ಕೆ ಶ್ರಮಿಸುವುದಾಗಿ ನುಡಿದರು. ಅಲ್ಲದೆ ಎಲ್ಲರಿಗೂ ಹೊಸ ವರ್ಷದ
ಶುಭಾಷಯವನ್ನು ಕೋರಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ.
ಪ್ರವೀಣಕುಮಾರ್ ಜಿ.ಎಸ್., ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ
ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ
ನಾಗರಾಜ ಜುಮ್ಮನ್ನವರ್ ಅವರು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶುಭ ಹಾರೈಸಿ
ಜಿಲ್ಲೆಗೆ ಸ್ವಾಗತ ಕೋರಿದರು.
Home
»
Koppal News
»
koppal organisations
» ಜಿಲ್ಲಾ ಪಂಚಾಯತಿ ನೂತನ ಸಿಇಓ ಆರ್. ರಾಮಚಂದ್ರನ್ ಅಧಿಕಾರ ಸ್ವೀಕಾರ.
Subscribe to:
Post Comments (Atom)
0 comments:
Post a Comment