PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೦೧ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡಾ ಶಾಲೆಗಳಿಗೆ ಕ್ರೀಡಾ ಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜ.೦೨ ರಿಂದ ಆರಂಭವಾಗಲಿದೆ.
     ಕ್ರೀಡಾ ಶಾಲೆಯ ಆಯ್ಕೆ ಪ್ರಕ್ರಿಯೆಯು ಜ.೦೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಷ್ಟಗಿಯ ತಾಲೂಕಾ ಕ್ರೀಡಾಂಗಣದಲ್ಲಿ ಹಾಗೂ ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.  ಜ.೦೩ ರಂದು ಯಲಬುರ್ಗಾದ ತಾಲೂಕಾ ಕ್ರೀಡಾಂಗಣದಲ್ಲಿ ಹಾಗೂ  ಮಂಗಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ. ಜ.೦೪ ರಂದು ಗಂಗಾವತಿಯ ತಾಲೂಕಾ ಕ್ರೀಡಾಂಗಣದಲ್ಲಿ ಹಾಗೂ  ಕಾರಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ.  ಜ.೦೫ ರಂದು ಕೊಪ್ಪಳ ತಾಲೂಕಿನ ಹಿರೇಸಿಂಧೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಾಗೂ  ಕಾತರಕಿ-ಗುಡ್ಲಾನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ.  ಮತ್ತು ಜ.೦೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.   
     ಕ್ರೀಡಾ ಪಟುಗಳಿಗೆ ಒಂದು ವೇಳೆ ಒಂದು ಕೇಂದ್ರದಲ್ಲಿ ಭಾಗವಹಿಸಲು ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ ಬೇರೆ ಕೇಂದ್ರದಲ್ಲಿ ಭಾಗವಹಿಸಲು ಅವಕಾಶವಿದೆ. ಅಂತಹ ಕ್ರೀಡಾಪಟುಗಳು ತಮ್ಮ ಶಾಲೆಯಿಂದ ಜನ್ಮ ದಿನಾಂಕ ಹಾಗೂ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೃಢೀಕರಣ ಪತ್ರದೊಂದಿಗೆ ಆಯ್ಕೆ ಪ್ರಕ್ರಿಯೆಗೆ ಸ್ವಂತ ಖರ್ಚಿನಲ್ಲಿ ಹಾಜರಾಗಬಹುದಾಗಿದೆ.
ಆಯ್ಕೆಗೆ ಅರ್ಹತೆ (ಕಿರಿಯರು):  ಕ್ರೀಡಾ ವಸತಿ ಶಾಲೆಗಳಿಗೆ ಆಯ್ಕೆ ಬಯಸುವವರು ೧೪ ವರ್ಷದ ಒಳಗಿನವರಾಗಿರಬೇಕು. (೨೦೦೨ರ ಜೂನ್೦೧ ನಂತರ ಜನಿಸಿದವರು) ಪ್ರಸ್ತುತ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ೨೦೧೬-೧೭ ನೇ ಶೈಕ್ಷಣಿಕ ವರ್ಷದಲ್ಲಿ ೮ ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು. (೭ ನೇ ತರಗತಿ ಉತ್ತಿರ್ಣರಾಗಿರಬೇಕು) ಕ್ರೀಡಾ ವಸತಿ ಶಾಲೆಗಳಿಗೆ ಕಿರಿಯರ ವಿಭಾಗದಲ್ಲಿ ಅಥ್ಲೇಟಿಕ್ಸ್, ವ್ಹಾಲಿಬಾಲ್, ಬಾಸ್ಕೆಟ್ ಬಾಲ್, ಕುಸ್ತಿ, ಸೈಕ್ಲಿಂಗ್, ಜೂಡೊ ಕ್ರೀಡೆಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. (ಹಿರಿಯರು): ಕ್ರೀಡಾ ವಸತಿ ಶಾಲೆಗಳಿಗೆ ಆಯ್ಕೆ ಬಯಸುವವರು ೧೮ ವರ್ಷದ ಒಳಗಿನವರಾಗಿರಬೇಕು. (೧೯೯೮ರ ಜೂನ್೦೧ ರ ನಂತರ ಜನಿಸಿದವರು) ಪ್ರಸ್ತುತ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ೨೦೧೬-೧೭ ನೇ ಶೈಕ್ಷಣೀಕ ವರ್ಷದಲ್ಲಿ      ಪಿ.ಯು.ಸಿ. ಗೆ ಸೇರಲು ಅರ್ಹತೆ ಹೊಂದಿರಬೇಕು. (೧೦ ನೇ ತರಗತಿ ಉತ್ತಿರ್ಣರಾಗಿರಬೇಕು) ಕ್ರೀಡಾ ವಸತಿ ಶಾಲೆಗಳಿಗೆ ಹಿರಿಯರ ವಿಭಾಗದಲ್ಲಿ ಅಥ್ಲೇಟಿಕ್ಸ್, ವ್ಹಾಲಿಬಾಲ್, ಬಾಸ್ಕೆಟ್‌ಬಾಲ್, ಕುಸ್ತಿ, ಸೈಕ್ಲಿಂಗ್, ಜೂಡೋ ಕ್ರೀಡೆಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು.
ವಿಶೇಷ ಸೂಚನೆ : ಹಿರಿಯರ ಹಾಗೂ ಕಿರಿಯರ ರಾಜ್ಯ ಮಟ್ಟದ ಕ್ರೀಡಾ ವಸತಿ ಶಾಲೆಯ ಆಯ್ಕೆಗಳು ಜ.೦೭ ಮತ್ತು ೦೮ ರಂದು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.  ಕಿರಿಯರಿಗೆ ಮಾತ್ರ ಜಿಲ್ಲಾ ಕೇಂದ್ರ ಸ್ಥಾನದಿಂದ ಬಳ್ಳಾರಿಗೆ ಹೋಗಿ ಬರುವ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಹಿರಿಯರಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.
     ಕ್ರೀಡಾ ಶಾಲೆಗೆ ವಾಲಿಬಾಲ್, ಬಾಸ್ಕೆಟ್‌ಬಾಲ್ ಕ್ರೀಡೆಗೆ ಬಾಲಕಿಯರು ಕನಿಷ್ಠ ೧೬೫ ಸೆಂ.ಮೀ ಹಾಗೂ ಬಾಲಕರು ೧೭೫ ಸೆಂ.ಮೀ ಎತ್ತರ ಹೊಂದಿರುವುದು ಕಡ್ಡಾಯ. ಕ್ರೀಡಾ ವಸತಿ ನಿಲಯಕ್ಕೆ ವಾಲಿಬಾಲ್, ಬಾಸ್ಕೆಟ್ ಬಾಲ್ ಕ್ರೀಡೆಗೆ ಬಾಲಕಿಯರು ಕನಿಷ್ಠ ೧೭೫ ಸೆಂ.ಮೀ ಎತ್ತರ ಹಾಗೂ ಬಾಲಕರು ಕನಿಷ್ಠ ೧೮೫ ಸೆಂ.ಮೀ ಎತ್ತರ ಹೊಂದಿರುವುದು ಕಡ್ಡಾಯವಾಗಿದೆ. ಆಯ್ಕೆಯ ನಾರ್ಮ್ಸ್‌ನಲ್ಲಿ ಶೇಕಡಾ ೫೦ ರಷ್ಟು ಮತ್ತು ಅದಕ್ಕೂ ಮೇಲ್ಪಟ್ಟು ಅಂಕಗಳಿಸಿದವರು ಮಾತ್ರ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ತಾಲೂಕು ಕೇಂದ್ರದ ಆಯ್ಕೆಗೆ ಬರುವ ಕ್ರೀಡಾ ಪಟುಗಳಿಗೆ ಯಾವುದೇ ದಿನಭತ್ಯೆ, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
       ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಗೆ ಅಥವಾ ಖೋ ಖೋ ತರಬೇತುದಾರ ಎ.ಎನ್.ಯತಿರಾಜ್, ಮೊ: ೯೪೪೮೬೩೩೧೪೬. ಅಥ್ಲೇಟಿಕ್ಸ್ ತರಬೇತುದಾರ ತಿಪ್ಪಣ ಮಾಳಿ, ಮೊ: ೮೭೪೬೯೩೩೯೨೧. ವಾಲಿಬಾಲ್ ತರಬೇತುದಾರ ಸುರೇಶ ಯಾದವ್, ಮೊ: ೯೯೦೧೫೨೭೩೩೩ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top