PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ಜ ೨೫- ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋಲು ಅನುಭವಿಸಿದ ರಾಜಶೇಖರ ಅಂಗಡಿ ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಅಜೀವ ಸದಸ್ಯರು ರಾಜಶೇಖರ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ  ಇಂದು ನಡೆದು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜಿಲ್ಲೆಯ ವಿವಿಧಡೆಯಿಂದ ಅಜೀವ ಸದಸ್ಯರೇ ದಂಡೆ ಆಗಮಿಸಿದ್ದು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಇಂದು ಕೊಪ್ಪಳದಲ್ಲಿ ರಾಜಶೇಖರ ಅಂಗಡಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡು ದಶಕಗಳ ಕಾಲ ಒಡನಾಡಿಯಾಗಿ ಕನ್ನಡ ನುಡಿ ಸೇವೆಯನ್ನು ಪ್ರಮಾಣಿಕವಾಗಿ ಮಾಡಿರುವ ರಾಜಶೇಖರ ಅಂಗಡಿ ಈ ಹಿಂದೆ ಸಮ್ಮೇಳನಗಳಿಗೆ ಅನುದಾನವಿಲ್ಲದಿದ್ದಾಗಲೂ ಉತ್ತಮವಾಗಿ ಸಂಘಟಿಸಿ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿಗೆ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಈ ಸೇವಕನಿಗೆ ಈ ಬಾರಿ ಜಿಲ್ಲೆಯ ಕಸಾಪ ಅಜೀವ ಸದಸ್ಯರು ಬೆಂಬಲಸುವ ವಿಶ್ವಾಸ ಅಧಿಕವಾಗಿದೆ ಎಂದು ಹೇಳಿದರು. ರಾಜಶೇಖರ ಅಂಗಡಿಯ ಬಗ್ಗೆ ಕೆಲವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದು ಈ ಅಪ್ರಚಾರಕ್ಕೆ ಅಜೀವ ಸದಸ್ಯರು ಕಿವಿಗೊಡುತ್ತಿಲ್ಲ. ರಾಜಶೇಖರ ಅಂಗಡಿ ಗೆಲುವ ನಿಶ್ಚಿತ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿಯ ಸುರೇಶ ಸಿಂಗನಾಳ ಕಳೆದ ಬಾರಿ ಸೋಲಿನ ಪರಾಮರ್ಶೆ ಮಾಡಿಕೊಂಡು ಈಗ ಗೆಲುವಿಗಾಗಿ ನಾವೆಲ್ಲರೂ ಪ್ರಯತ್ನಿಸೋಣ ಅಭ್ಯರ್ಥಿ ಆಯ್ಕೆ ಹಾಗು ಗೆಲುವಿನ ಹಾದಿಗೆ ಯಾವುದೆ ಗೊಂದಲವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಫಾಟೀಲ. ಸಂಘಟನಾ ಚತುರ ಹಾಗು ಎಲ್ಲರೊಂದಿಗೆ ಸಕ್ರೀಯವಾಗಿ ಆತ್ಮೀಯವಾಗಿ ಬೆರೆಯುವ ರಾಜಶೇಖರ ಬೆಂಬಲಕ್ಕೆ ಇಡೀ ಜಿಲ್ಲೆಯ ಕಸಾಪ ಅಜೀವ ಸದಸ್ಯರಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ತಾವು ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಹನುಮಂತಪ್ಪ ಅಂಡಗಿ ಇಂದು ಸ್ಪರ್ಧೆಯಿಂದ ಹಿಂದಕ್ಕೆ ಸರಿದು ರಾಜಶೇಖರ ಅಂಗಡಿ ಬೆಂಬಲಿಸುವುದಾಗಿ ಹೇಳಿದರು.
ಸಭೆಯಲ್ಲಿ ಈಶಪ್ಪ ಮಳಗಿ. ಸಂಗಮೇಶ ಡಂಬಳ, ವಾಯ್ ಜಿ ಪಾಟೀಲ, ಶಂಬುಲಿಂಗನಗೌಡ, ಬಸವರಾಜ ಬಿನ್ನಾಳ. ರಾಮಣ್ಣ ತಳವಾರ, ದೇವಪ್ಪ, ಮರ್ದಾನಸಾಬ ಕೊತ್ವಾಲ್, ಶರಣಪ್ಪ ವಡಗೇರಿ, ರವೀಂದ್ರ ಬಾಕಳೆ, ಶರಣಪ್ಪ ಮುಧೋಳ, ಮಹಿಬೂಬ ಹುಸೇನ ಕನಕಗಿರಿ , , ಫಕೀರಪ್ಪ ವಾಲ್ಮಿಕಿ ಮೊದಲಾದವರು ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಲಿಂಗಾರಡ್ಡಿ ಆಲೂರು. ವಿರೇಶ ಬಂಗಾರಶೆಟ್ರ, ಎಸ್ ಬಿ ಗೊಂಡಬಾಳ. ರಾಮಚಂದ್ರ ಗೊಂಡಬಾಳ, ಅಮರೇಶ ಮೈಲಾಪುರ, ಬಸವರಡ್ಡಿ ಆಡೂರ, ಶಿವು ಯಲಬುರ್ಗಿ, ಗಿರೀಶ ಪಾನಗಂಟಿ, ರಮೇಶ ತುಪ್ಪದ, ಶಿವರಾಜ ನುಗಡೋಣಿ, ಗವಿಸಿದ್ದಯ್ಯ ಹುಡೇಜಾಲಿ, ಮಂಜುನಾಥ ಭುಮ್ಮಕ್ಕನವರ, ಡಾ ಶ್ರೀನಿವಾಸ ಹ್ಯಾಟಿ. ಶಿವಲಿಂಗಪ್ಪ ಪಟ್ಟೇದ, ಹೇಮರಡ್ಡಿ ಶ್ಯಾಡಲಗಿ, ಗವಿಸಿದ್ದಪ್ಪ ಹಲಗೇರಿ ಸೇರಿದಂತೆ ನೂರಾರು ಜನರು ಇದ್ದರು. ಸಭೆಯ ನಂತರ ವಾಲ್ಮಿಕಿ ಭವನದಿಂದ ತಹಸೀಲ್ದಾರ ಕಛೇರಿಯವರೆಗೆ ಮೆರವಣಿಗೆಯಲ್ಲಿ ಹೋಗಿ ತಹಸೀಲ್ದಾರರಿಗೆ ರಾಜಶೇಖರ ಅಂಗಡಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ ಅಂಗಡಿ ನಾನು ನೆಪ ಮಾತ್ರಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ನನ್ನ ಗೆಲುವಿಗಾಗಿ ನಿಮ್ಮೆಲ್ಲರ ಪ್ರಯತ್ನ ನಿರಂತರವಾಗಿರುವದರಿಂದ ನಾನು ನಿಮಗೆ ಋಣಿಯಾಗಿದ್ದೇನೆ ಗೆಲುವಿನ ನಂತರ ನಾನು ನಿಮ್ಮ ಹಾಗು ಕನ್ನಡ ಸೇವೆಗೆ ಸದಾ ಸಿದ್ದವಾಗಿರುತ್ತೇನೆ ಎಂದು ಹೇಳಿದರು. ಶರಣಪ್ಪ ವಡಗೇರಿ ಪ್ರಾರ್ಥನೆ ಹಾಡಿದರು. ಫಕೀರಪ್ಪ ವಜ್ರಬಂಡಿ ಸ್ವಾಗತಿಸಿದರು. ಶರಣಪ್ಪ ಬಾಚಲಾಪುರ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಸಂತೋಷ ದೇಶಪಾಂಡೆ ವಂದಿಸಿದರು.

Advertisement

0 comments:

Post a Comment

 
Top