ಕೊಪ್ಪಳ-11- ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ದಲಿತ ಸಾಂಸ್ಕೃತಿಕ ವೆದಿಕೆ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಪರಿಶೀಷ್ಠ ಜಾತಿ/ ಪರಿಶೀಷ್ಠ ಪಂಗಡ ಕಾರ್ಯಕ್ರಮದಡಿ ದಿನಾಂಕ ೧೦/೦೬/೨೦೧೬ ರಂದು ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೋಚನಹಳ್ಳಿ ಗ್ರಾ.ಪಂ ಉಪಾಧ್ಯಕ್ಷರಾದ ಪರಸಪ್ಪ ಹುಲಕೋಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಣ್ಣ ಕಂದಾರಿ ಅಧ್ಯಕ್ಷರು ದಲಿತ ಸಾಂಸ್ಕೃತಿಕ ವೇದಿಕೆ ಕೊಪ್ಪಳ ಇವರು
ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ಶ್ರೀಮತಿ ಹುಲಿಗೆವ್ವ ಗಂಡ
ಪಂಪನಗೌಡ ಪೊಲೀಸಪಾಟೀಲ, ಬಸವರಾಜ ಶಂಕ್ರಪ್ಪ ಬೆಟಗೇರಿ, ಶ್ರೀಮತಿ ಗಂಗವ್ವ ಮರಿಯವ್ವ
ಮರಿಯಣ್ಣನವರ, ಅತಿಥಿಗಳಾಗಿ ದೇವೆಂದ್ರಗೌಡ ಪೊಲೀಸಪಾಟೀಲ ಅಧ್ಯಕ್ಷರು ಎಸ್.ಡಿ.ಎಮ್.ಸಿ
ಸ.ಪ್ರೌ.ಶಾಲೆ ಬೋಚನಹಳ್ಳಿ, ಗೋಣ್ಣೆಪ್ಪ ಬೆಟಗೇರಿ ಅಧ್ಯಕ್ಷರು ಎಸ್.ಡಿ.ಎಮ್.ಸಿ
ಸ.ಹಿ.ಪ್ರಾ.ಶಾಲೆ ಬೋಚನಹಳ್ಳಿ, ಗಿಡ್ಡಪ್ಪ ಯಲ್ಲಣ್ಣನವರ ಅಧ್ಯಕ್ಷರು ಮಾದಿಗ ದಂಡೂರು
ಗ್ರಾಮ ಶಾಖೆ ಬೋಚನಹಳ್ಳಿ ಹಾಗೂ ಶರಣಪ್ಪ ತುಮ್ಹರಗುದ್ದಿ ಸಮಾಜ ಸೇವಕರು ಕೊಪ್ಪಳ
ಇವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ.ಜಾತಿ ಕಾರ್ಯಕ್ರಮದಲ್ಲಿ ದುರಗಪ್ಪ ಕೆ ಯಲ್ಲಣ್ಣನವರ ಇವರಿಂದ ತತ್ವಪದ ಹಾಗೂ ಪ.ಪಂಗಡ ಕಾರ್ಯಕ್ರಮದಡಿ ನಾಗನಗೌಡ ಪೊ.ಪಾಟೀಲ ಇವರಿಂz ಸುಗಮ ಸಂಗೀತ ಕಾರ್ಯಕ್ರಮ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೆರಿತು.
ಪ.ಜಾತಿ ಕಾರ್ಯಕ್ರಮದಲ್ಲಿ ದುರಗಪ್ಪ ಕೆ ಯಲ್ಲಣ್ಣನವರ ಇವರಿಂದ ತತ್ವಪದ ಹಾಗೂ ಪ.ಪಂಗಡ ಕಾರ್ಯಕ್ರಮದಡಿ ನಾಗನಗೌಡ ಪೊ.ಪಾಟೀಲ ಇವರಿಂz ಸುಗಮ ಸಂಗೀತ ಕಾರ್ಯಕ್ರಮ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೆರಿತು.
0 comments:
Post a Comment