ಕೊಪ್ಪಳ, ಜ.೧೧ (ಕ ವಾ) ಒಳ್ಳೆಯ ಮನಸ್ಸನ್ನು ಹೊಂದಲು ದೇಹವನ್ನು ಸದೃಢಗೊಳಿಸುವುದು ಅವಶ್ಯಕವಾಗಿದೆ. ಅಂತೆಯೇ ಸದೃಢ ದೇಹವನ್ನು ಹೊಂದಲು ಮದ್ಯ ಮಾದಕಗಳಿಂದ ದೂರವಿರುವುದು ಕೂಡ ಅಷ್ಟೇ ಅವಶ್ಯಕವಾಗಿದೆ ಎಂದು ಕಿನ್ನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಮೀದ್‌ಸಾಬ್ ಎಫ್.ಸೂಡಿ ಅವರು ಹೇಳಿದರು.ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ ಗ್ರಾಮೀಣಾಭಿವೃದ್ಧಿ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಿನ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕೊಪ್ಪಳ ತಾಲೂಕಿನ ಕಿನ್ನಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುತೂಹಲಕ್ಕಾಗಿ, ಒತ್ತಡದ ಬದುಕಿನಿಂದ ತಾತ್ಪೂರ್ತಿಕವಾಗಿ ಹೊರಬರಲು ವ್ಯಸನಗಳನ್ನು ಆರಂಭಿಸಲಾಗುತ್ತದೆ. ಆದರೆ ಅವುಗಳು ಬರುಬರುತ್ತ ಅವಲಂಬಿಸುವ ಮಟ್ಟಕ್ಕೆ ಬೆಳೆದು ನಿಲ್ಲುತ್ತವೆ. ಅಲ್ಲದೇ ನಮ್ಮ ಎಲ್ಲಾ ದೈಹಿಕ, ಮಾನಸಿಕ ನೆಮ್ಮದಿಯನ್ನು ನಾಶಪಡಿಸುತ್ತವೆ. ಜೀವನದಲ್ಲಿ ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದುವ ಮೂಲಕ ಎಲ್ಲ ರಂಗಗಳಲ್ಲಿಯೂ ಯಶಸ್ಸು ಸಾಧಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ದೇಶದ ಯುವ ಜನಾಂಗ ಉತ್ತಮ ಆರೋಗ್ಯ ಹೊಂದಲು ಮದ್ಯ ಮಾದಕಗಳ ವ್ಯಸನಮುಕ್ತರಾಗಬೇಕಿದೆ. ವಿದ್ಯಾರ್ಥಿಗಳ ಸರ್ವಾಂಗೀರ್ಣ ಬೆಳವಣಿಗೆಗೆ ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯೋನ್ಮುಕ್ತವಾಗಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀಕಾಂತ್ ಸಜ್ಜನ್ ಮಾತನಾಡಿ, ಇಂದಿನ ಯುವಜನಾಂಗದ ಶಕ್ತಿಯನ್ನು ಮದ್ಯ ಮಾದಕಗಳು ಆಹ್ವಾಹನೆ ತೆಗೆದುಕೊಳ್ಳುತ್ತಿವೆ. ಮನುಷ್ಯ ಜೀವಿಯ ವೈಭವೋಪೇತ ಜೀವನದ ಕೊಡುಗೆಗಳಾಗಿರುವ ಈ ಮದ್ಯ, ಮಾದಕಗಳಿಗೆ ಹೆಚ್ಚಾನುಹೆಚ್ಚಾಗಿ ದೇಶದ ಯುವಜನತೆ ಬಲಿಯಾಗುತ್ತಿದ್ದಾರೆ. ಮದ್ಯ ಮತ್ತು ಮಾದಕಗಳು ಮಾನವ ನಿರ್ಮಿತ ವಿಕೋಪಗಳಲ್ಲಿ ಒಂದಾಗಿದ್ದು, ಇವುಗಳಿಂದ ಶಕ್ತಿಯ ಅಪವ್ಯಯವುಂಟಾಗುತ್ತದೆ. ಅಲ್ಲದೆ ವ್ಯಕ್ತಿಯು ಮಾನಸಿಕ, ದೈಹಿಕವಾಗಿ ಜರ್ಜರಿತನಾಗಿ ಅಪರಾಧಿ ಭಾವನೆ ಹೊಂದುತ್ತಾನೆ. ಆ ಮೂಲಕ ದೇಗುವಲದಂತಿರುವ ತನ್ನ ದೇಹವನ್ನು ಸ್ಮಶಾನವನ್ನಾಗಿ ಮಾರ್ಪಡಿಸಿಕೊಳ್ಳುತ್ತಾನೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳುವ ಅವಶ್ಯಕತೆ ಇದೆ. ದೇಶವನ್ನು
ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ದೇಶದ ಯುವ ಜನತೆ ಮದ್ಯ, ಮಾದಕಗಳಿಂದ ದೂರವಿರಬೇಕು
ಎಂದು ಅವರು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ವೋದಯ
ಗ್ರಾಮೀಣಾಭಿವೃದ್ಧಿ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆಯ ಸಂಯೋಜಕ ಶರಣಪ್ಪ
ಸಿಂಗನಾಳ ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಯೋಜನೆಯಡಿ
ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ೧೦೯೮ ನ್ನು ಆರಂಭಿಸಲಾಗಿದ್ದು, ಸಂಕಷ್ಠದಲ್ಲಿರುವ
ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮಕ್ಕಳ ಮೇಲೆ ನಡೆಯುವ
ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಮಕ್ಕಳ ಮೇಲಿನ ಲೈಗಿಂಕ
ದೌರ್ಜನ್ಯ ತಡೆ ಕಾಯ್ದೆ-೨೦೧೨ ನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಈ ಕಾಯ್ದೆಯಡಿ
ಈಗಾಗಲೇ ರಾಜ್ಯದಲ್ಲಿಯೇ ಅತೀ ಹೆಚ್ಚು, ಅಂದರೆ ಒಟ್ಟು ೬೨ ಪ್ರಕರಣಗಳನ್ನು
ದಾಖಲಿಸಲಾಗಿದೆ. ಯುವ ಜನಾಂಗ ವಿದ್ಯಾರ್ಥಿ ಜೀವನವನ್ನು ಆರೊಗ್ಯಯುತವಾಗಿ
ಅನುಭವಿಸಬೇಕಿದ್ದು, ಅದು ನಮ್ಮ ಯಶಸ್ಸಿಗೆ ಸಹಕರಿಸುವಂತಿದ್ದರೆ ಇನ್ನೂ ಉತ್ತಮ
ಎಂದರು.ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಅವಿನಾಶ,
ಸರ್ವೋದಯ ಗ್ರಾಮೀಣಾಭಿವೃದ್ಧಿ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆಯ ಶಾಂತಕುಮಾರ,
ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ
ಪ್ರತಿಭಾ ಪ್ರಾರ್ಥಿಸಿದರು. ಉಪನ್ಯಾಸಕ ವಾಸುದೇವ್ ವಂದನಾರ್ಪಣೆ ಸಲ್ಲಿಸಿದರು.
Home
»
Koppal News
»
koppal organisations
» ಸದೃಢ ದೇಹ ಹೊಂದಲು ಒಳ್ಳೆಯ ಮನಸ್ಸು ಅತ್ಯವಶ್ಯಕ ಹಮೀದ್ ಸಾಬ್ ಸೂಡಿ.
Subscribe to:
Post Comments (Atom)
0 comments:
Post a Comment