ರಾಯಚೂರು,ಡಿ.೩೦ (ಕ.ವಾ.) ರಾಯಚೂರು ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿ ಬಸವರಾಜ ಪಾಟೀಲ್ ಇಟಗಿ ಅವರು ಜಯಗಳಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಭಾರತೀಯ
ಜನತಾ ಪಕ್ಷದ ಅಭ್ಯರ್ಥಿ ಅವರಿಗಿಂತ ೩೨೮ ಹೆಚ್ಚು ಮತಗಳ ಅಂತರದಿಂದ ಗೆಲುವು
ಸಾಧಿಸಿದ್ದಾರೆ.
ರಾಯಚೂರು ಇನ್‌ಫೆಂಟ್ ಜೀಸಸ್ ಪ್ರೌಢ ಶಾಲೆಯಲ್ಲಿ ಬುಧವಾರ ಮತ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಭ್ಯರ್ಥಿಯ ಗೆಲುವನ್ನು ಚುನಾವಣಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಅವರು ಘೋಷಿಸಿದರು. ೬೭೪೭ ಮತಗಳು ಚಲಾವಣೆಯಾಗಿವೆ. ಇದರಲ್ಲಿ ೬೫೭೪ ಮತಗಳು ಪುರಸ್ಕೃತ, ೧೨ ನೋಟಾ ಮತಗಳು ಮತ್ತು ೧೬೧ ಮತಗಳು ತಿರಸ್ಕೃತಗೊಂಡಿವೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ: ಬಸವರಾಜ ಪಾಟೀಲ್ ಇಟಗಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-೩೪೪೧, ಸಿ.ವ್ಹಿ.ಚಂದ್ರಶೇಖರ (ಭಾರತೀಯ ಜನತಾ ಪಾರ್ಟಿ)-೩೧೧೩, ಸೈಯದ್ ಮುಜೀಬ್ (ಪಕ್ಷೇತರ)-೦೭, ಕೆ.ಪಿಡ್ಡಪ್ಪಗೌಡ (ಪಕ್ಷೇತರ)-೧೩ ಮತಗಳು.
ಮತಗಳ ಎಣಿಕೆ ಕಾರ್ಯ ಬೆಳಗಿನ ೮ ಗಂಟೆಗೆ ಪ್ರಾರಂಭವಾಗಿದ್ದು, ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಭಾರತ ಚುನಾವಣಾ ಆಯೋಗದ ಅನುಮತಿ ಬಂದ ಬಳಿಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿ ಬಸವರಾಜ ಪಾಟೀಲ್ ಇಟಗಿ ಅವರಿಗೆ ಪ್ರಮಾಣಪತ್ರ ವಿತರಿಸಿದರು.

0 comments:
Post a Comment