PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೩೦ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಜಯಶ್ರೀ ಗಂಡ ಸಂಗಯ್ಯ ಹಿರೇಮಠ (೨೮) ಎಂಬ ಮಹಿಳೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಮಹಿಳೆಯು ಕಳೆದ ಸುಮಾರು ೮ ರಿಂದ ೯ ತಿಂಗಳ ಹಿಂದೆ  ತನ್ನ ಇಚ್ಛೆಯಂತೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತಂತೆ ಕುಷ್ಟಗಿ, ಗಂಗಾವತಿ, ಕೊಪ್ಪಳ ಸೇರಿದಂತೆ ಸಂಬಂಧಿಕರಿರುವೆಡೆಯಲ್ಲ ಇಲ್ಲಿಯವರೆಗೂ ಹುಡುಕಾಡಿದರು ಮಹಿಳೆಯ ಬಗ್ಗೆ ಸುಳಿವು ಸಿಕ್ಕಿಲ್ಲ.        ಕಾಣೆಯಾದ ಮಹಿಳೆಯ ವಿವರ ಈ ಕೆಳಗಿನಂತಿದೆ: ಹೆಸರು: ಜಯಶ್ರೀ ಗಂಡ ಸಂಗಯ್ಯ ಹಿರೇಮಠ, ವಯಸ್ಸು: ೨೮, ಸಾ|| ಕೆ.ಬೋದೂರು, ತಾ||ಕುಷ್ಟಗಿ, ಜಿ||ಕೊಪ್ಪಳ, ತಾಯಿ: ಈರಮ್ಮ ಸಂಗನಬಸಯ್ಯ ಹಿರೇಮಠ, ಎತ್ತರ: ೫ ಫೀಟು, ವಿದ್ಯಾರ್ಹತೆ: ೭ನೇ ತರಗತಿ, ಕನ್ನಡ ಭಾಷೆ ಮಾತನಾಡುತ್ತಾಳೆ, ದಪ್ಪನೆಯ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ, ಮನೆಯಿಂದ ಹೊರಡುವಾಗ ಒಂದು ಗುಲಾಬಿ ಬಣ್ಣದ ನೈಟಿ ತೊಟ್ಟಿರುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ಮಹಿಳೆಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: ೦೮೫೩೬-೨೬೭೦೩೩, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೨೨೨ ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top