PLEASE LOGIN TO KANNADANET.COM FOR REGULAR NEWS-UPDATES

ಸಾರ್ವಜನಿಕ ಶಿಕ್ಷಣ ಇಲಾಖೆಯ ೨೦೧೫-೧೬ ನೇ ಸಾಲಿನ ಆರ್.ಎಮ್.ಎಸ್.ಎ. ಯೋಜನೆ ಅಡಿಯಲ್ಲಿ ಕೊಪ್ಪಳ ನಗರದ ಬಾ.ಸ.ಪ.ಪು.ಕಾ.ನ ಪ್ರೌಢ ಶಾಲಾ ವಿಧ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಪ್ರಾರಂಭ ಮಾಡಲಾಯಿತು ಉಪ ಪ್ರಾಚಾರ್ಯರಾದ ಏ.ಕೆ.ತುಪ್ಪದ ವಿಧ್ಯಾರ್ಥಿನಿಯರಾದ ರೇಮೂನ್ ನೀಸಾ ಮತ್ತು ಜಫ್ರೂನ್ ನಿಸಾ ಇವರಿಗೆ ಕರಾಟೆ ಅಸ್ತ್ರವಾದ ನಾನ್‌ಚೆಕ್ ಕೊಡುವದರ ಮೂಲಕ ಉದ್ಘಾಟಿಸಿದರು. ಈ ಶಾಲಾ ವಿಧ್ಯಾರ್ಥಿನಿಯರಿಗೆ ಭೂಮಿ ಪೌಂಡೇಶನ್‌ನ ಮುಖ್ಯಸ್ಥ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಎಸ್.ವಿ. ತರಬೇತಿಯನ್ನು ನೀಡುತ್ತಿದ್ದಾರೆ, ಈ ಸಂದರ್ಭದಲ್ಲಿ ವಿಧ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಈ ಕರಾಟೆ ಕಲೆ ಅತ್ಯಗತ್ಯವಿದ್ದು ಇದನ್ನು ಸದುಯುಪಯೋಗ ಮಾಡಿಕೊಳ್ಳಬೇಕೆಂದು ತರಬೇತು ದಾರ ತಿಳಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಎಚ್.ಪ್ರಾಣೇಶ, ಅಬ್ದುಲ್ ಕಯಿಮ್ ಸಾಬ, ಬಸವಂತಯ್ಯ ಹಿರೇಮಠ ಉಪಸ್ಥಿತರಿದ್ದರು.

Advertisement

0 comments:

Post a Comment

 
Top