ಕೊಪ್ಪಳ-೧೫- ಗಂಗಾವತಿ ತಾಲೂಕಿನ ಕಾರಟಗಿಯ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ ಸಂದೇಶ ಗ್ರಾಮೀಣಾಭಿವೃದ್ದಿ ಸಂಸ್ಥೆ ಮುನಿರಾಬಾದ್ ಇವರುಗಳ ಸಂಯುಕ್ತ ಆಶ್ರದಲ್ಲಿ ಬಾಲ್ಯ ವಿವಾಹ ನಿಷೇದ ಕುರಿತ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಕೃಷ್ಣಾ ನಾಯಕ ವಹಿಸಿದ್ದರು. ಉಪನ್ಯಾಸಕರಾದ ಮೆಹಬೂಬ್ ಹುಸೇನ್, ಅಂಗನವಾಡಿ ಮೇಲ್ವಿಚಾರಕಿಯಾದ ಶ್ರೀಮತಿ ನಾಗಮ್ಮ ಹಾಗೂ ಶ್ರೀಮತಿ
ಗೀತಾ ಮಾತನಾಡಿ ೧೮ ವರ್ಷದೊಳಗಿನ ಹೆಣ್ಣುಮಗು ೨೧ ವರ್ಷದೊಳಗಿನ ಗಂಡು ಮಗುವಿಗೆ
ಮದುವೆಯಾದರೆ ಅದು ಬಾಲ್ಯ ವಿವಾಹವಾಗುತ್ತದೆ. ಅದಕ್ಕಾಗಿ ಮಕ್ಕಳ ಸಹಾಯವಾಣಿಗೆ ಕರೆಮಾಡಿ
(೧೦೯೮) ತಿಳಿಸಬೇಕೆಂದರು.ಹೆಚ್.ಎಸ್. ಹೊನ್ನುಂಚಿ ವಿಕೇಂದ್ರಿಕೃತ ತರಬೇತಿ ಸಂಯೋಜಕರು
ಬಾಲ್ಯ ವಿವಾಹಕ್ಕೆ ಕಾರಣಗಳು ಬಾಲ್ಯ, ಬಾಲ್ಯ ವಿವಾಹದಿಂದಾದುಗುವ ದುಸ್ಪರಿಣಾಮಗಳು,
ದೈಹಿಕ ಮತ್ತು ಆರೋಗ್ಯದ ಮೇಲೆ ಬೀಳುವ ದುಸ್ಪರಿಣಾಮಗಳು, ಮಾನಸಿಕ ದುಸ್ಪರಿಣಾಮ ಹಾಗೂ
ಸಾಮಾಜಿಕ ದುಸ್ಪರಿಣಾಮ, ಬಾಲ್ಯ ವಿವಾಹನಿಷೇದ ಕಾಯ್ದೆ ೨೦೦೬, ಮತ್ತು ನಿಯಮ ವಾಳಿಗಳು
೨೦೦೮, ಬಗ್ಗೆ ಮಾಹಿತಿ ನೀಡಿದರು.ವಜೀರಸಾಬ್ ತಳಕಲ್ ಬಾಲ್ಯ ವಿವಾಹ ನಿಷೇದ ಕುರಿತು ಮಕ್ಕಳ
ಹಕ್ಕುಗಳು ಹಾಗೂ ಬಾಲ್ಯವಿವಾಹದಲ್ಲಿ ಈ ಕೆಳಗಿನವರು ತಪ್ಪಿಸ್ಥಸ್ತರಾಗಿರುತ್ತಾರೆ,
ಮಕ್ಕಳನ್ನುಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ ಬಾಲ್ಯ ವಿವಾಹ ಏರ್ಪಡಿಸುವ,
ನೆರವೇರಿಸುವ, ಕುಮ್ಮಕ್ಕು ನೀಡುವ, ಸಂಘ ಸಂಸ್ಥೆ, ಬಾಲ್ಯವಿವಾಹದಲ್ಲಿ
ಭಾಗವಹಿಸುವುದರಬಗ್ಗೆ ಮಾಹಿತಿ ನೀಡಿದರು. ಬಾಲ್ಯವಿವಾಹ ಅಪರಾದಕ್ಕೆ ನಿಗದಿಪಡಿಸಿದ
ಶಿಕ್ಷೆ ೨ ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಅಥವಾ ೧ ಕ್ಷ ದಂಡ ವಿದಿಸಲಾಗುವುದು ಎಂದು
ತಿಳಿಸಿದರು.
Home
»
Koppal News
»
koppal organisations
» ಬಾಲ್ಯ ವಿವಾಹ ನಿಷೇದ ಕುರಿತ ಪದವಿ ಪೂರ್ವ ಕಾಲೇಜ ವಿದೈಆರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ.
Subscribe to:
Post Comments (Atom)
0 comments:
Post a Comment