PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೩ (ಕ ವಾ) ರಾಜ್ಯದ ವಿವಿಧ ಜಾತಿ ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಆಯಾ ಸಮುದಾಯಗಳ ಮನವಿ ಅಹವಾಲುಗಳನ್ನು ಸ್ವೀಕರಿಸುವ ಕಾರ್ಯವನ್ನು ಕೈಗೊಂಡಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಹೇಳಿದರು.
     ವಿವಿಧ ಜಾತಿ, ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಅಥವಾ ತಿದ್ದುಪಡಿ ಕುರಿತಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಬಹಿರಂಗ ವಿಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಜಾತಿ ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಮತ್ತು ಕಾಗುಣಿತ ದೋಷ ತಿದ್ದುಪಡಿಗೆ ಸಂಬಂಧಿಸಿದಂತೆ ವಿವಿಧ ಸಮುದಾಯಗಳು, ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು ಬೆಂಗಳೂರಿನ ತನಕ ಬರುವುದು ಕಷ್ಟಕರ ಎಂಬುದನ್ನು ಪರಿಗಣಿಸಿ, ಆಯೋಗವೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ವಿವಿಧ ಸಮುದಾಯಗಳ ಅಹವಾಲುಗಳನ್ನು ಸ್ವೀಕರಿಸಿ, ಆಯಾ ಜಿಲ್ಲೆಯಲ್ಲಿಯೇ ವಿಚಾರಣೆ ಕೈಗೊಳ್ಳುವ ಕಾರ್ಯಕ್ರಮವನ್ನು ಹಮ್
     ನಂತರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ಜಾತಿ, ಜನಾಂಗಗಳ ಪ್ರತಿನಿಧಿಗಳ ಅಹವಾಲು ಸ್ವೀಕರಿಸಿ, ಬಹಿರಂಗ ವಿಚಾರಣೆ ನಡೆಸಲಾಯಿತು.  ಕೊಪ್ಪಳ ತಾಲೂಕು ಕುರುಬರ ಸಂಘ, ಕುಷ್ಟಗಿ ತಾಲೂಕು ಬಣಜಿಗ ಸಮಾಜ, ಕಲಾಲ್, ಲಾಳಗೊಂಡ, ಜೈನರು, ಗೊಂದಳಿ, ಜೋಗಿ, ಪಂಚಮಸಾಲಿ, ಗೌಳಿ, ಹಡಪದ ಸೇರಿದಂತೆ ಹಲವು ಜನಾಂಗಗಳಿಗೆ ಸಂಬಂಧಿಸಿದಂತೆ ಒಟ್ಟು ೧೫ ಅರ್ಜಿಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸಲಾಯಿತು.
     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರುಗಳಾದ ಪ್ರೊ. ಗುರುಲಿಂಗಯ್ಯ, ಎನ್.ಪಿ. ಧರ್ಮರಾಜ್, ಕೆ.ಎನ್. ಲಿಂಗಪ್ಪ, ಜಿ.ಡಿ. ಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಿಕೊಂಡಿದೆ.  ಈಗಾಗಲೆ ೧೬ ಜಿಲ್ಲೆಗಳಲ್ಲಿ ಈ ಕುರಿತು ಜಾತಿ, ಸಮುದಾಯಗಳವರ ಅಹವಾಲು ಸ್ವೀಕರಿಸಿ, ವಿಚಾರಣೆ ಕೈಗೊಳ್ಳಲಾಗಿದೆ.  ಎಲ್ಲ ಜಿಲ್ಲೆಗಳಲ್ಲಿ ವಿವಿಧ ಜಾತಿ, ಜನಾಂಗಗಳ ಅಹವಾಲು, ಮನವಿಗಳ ವಿಚಾರಣೆ ಕೈಗೊಂಡ ನಂತರ, ಸಂಬಂಧಪಟ್ಟ ಜಾತಿ, ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಮತ್ತು ಕಾಗುಣಿತ ದೋಷ ತಿದ್ದುಪಡಿ ಸೇರಿದಂತೆ ಸಮಗ್ರ ವರದಿಯನ್ನು ಆಯೋಗದ ವತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗುವುದು.  ಸರ್ಕಾರವು ಆಯೋಗದ ವರದಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಹೇಳಿದರು.

Advertisement

0 comments:

Post a Comment

 
Top