ಕೊಪ್ಪಳ-04- ಸಾಧನೆಯನ್ನು ಮಾಡುವವರಿಗೆ ಪ್ರೇರಣೆಯ ಅಗತ್ಯವಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಹೇಳಿದರು. ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಮನ್ವಯ ಶಿಕ್ಷಣದಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ವಿಕಲಚೇತನರು ಇಂದು ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ.ಅಂತವರು ಮಾಡುವ ಸಾಧನೆಗಳಿಗೆ ಪ್ರೇರಣೆಯ ಅಗತ್ಯವಿದೆ.ಪ್ರೇರಣೆಯಿಂದ ವ್ಯಕ್ತಿ ತಾನು ಮಾಡಿದ ಸಾಧನಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಸಹಾಯಕವಾಗುತ್ತ
ದೆ.ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನು ವಿಕಲಚೇತನರ ಬಗ್ಗೆ ಅನುಕಂಪ ಪಡುವುದರ ಬದಲು ಅವಕಾಶವನ್ನು ನೀಡುವಂತಹ ಕೆಲಸವಾಗಬೇಕು ಅಂದಾಗ ಮಾತ್ರ ಅವರಲ್ಲಿ ಇರುವ ಪ್ರತಿಭೆ ಹಾಗೂ ಸಾಮರ್ಥ್ಯ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ವಿಕಲಚೇತನರ ಮಕ್ಕಳ ವಿಶಿಷ್ಟವಾದ ಶಕ್ತಿಯು ಅಡಗಿರುತ್ತದೆ. ಅಂತಹ ವಿಶಿಷ್ಟ ಶಕ್ತಿ ಹೊರಬರಬೇಕಾದರೆ ವಿಶೇಷ ತರಬೇತಿ ಪಡೆದ ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ.ವಿಕಲಚೇತನರ ಅಭಿವೃದ್ದಿಗಾಗಿ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳ ಸರಿಯಾದ ಸದುಪಯೋಗವಾಗಬೇಕು.ವಿಕಲಚೇತನ ಮಕ್ಕಳ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಹಾಜರಾಗದಿರುವ ಕ್ರಮವನ್ನು ಖಂಡಿಸಿದರು.ರಾಜ್ಯದಲ್ಲಿ ಇರುವ ವಿವಿಧ ವಿಕಲಚೇತನರ ಸಮಗ್ರವಾದ ಸಮೀಕ್ಷೆಯಾಬೇಕು,ರಿಯಾಯತಿ ದರದ ನೀಡಲಾಗುವ ಬಸ್ಸ್ ಪಾಸಿನ ಮಿತಿಯನ್ನು ೧೦೦ಕಿ.ಮೀ ರದ್ದುಗೊಳಿಸಿ ಅದನ್ನು ರಾಜ್ಯಾಧ್ಯಂತ ನೀಡಬೇಕು,ತಾಲೂಕಿಗೆ ಒಬ್ಬರಂತೆ ವಿಕಲಚೇತನರ ಕಲ್ಯಾಣಾಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ವಿಕಲಚೇತನ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರಾಸ್ತಾವಿಕವಾಗಿ ಸಮನ್ವಯ ಶಿಕ್ಷಣದ ಶಿಕ್ಷಕರಾದ ಬಲರಾಮ ಪೂಜಾರ ಮಾತನಾಡಿದರು.
Subscribe to:
Post Comments (Atom)
0 comments:
Post a Comment