ಕೊಪ್ಪಳ-05-ಕನ್ನಡದಲ್ಲಿ ಬಾಂಡ್ ಚಿತ್ರ ನೋಡಿದಂತಾಯಿತು. ಸರಿ-ತಪ್ಪು ಅರಿವಾಗುವ ಮೊದಲೇ ಪಾಪಿಗಳ
ಲೋಕಕ್ಕೆ ಕಾಲಿರಿಸಿದ್ದಾನೆ ನಾಯಕ ವಿಷಯ ಏನು ಅಂತ ಗೊತ್ತಾಗುವುದರೊಳಗೆ ಮಾಸ್
ಮತ್ತಿನಲ್ಲಿ ಮುಳುಗುತ್ತಾನೆ ಪ್ರೇಕ್ಷಕ. ‘ರಥಾವರ’ ಸ್ಪೆಷಲ್ ಇದು. ಅನಗತ್ಯ ಪೀಠಿಕೆಗೆ
ಅವಕಾಶ ಕೊಡದೆ, ಟೈಟಲ್ ಕಾರ್ಡ್ನಿಂದಲೇ ನೋಡುಗನ ಮನಸು ಆವರಿಸಿಕೊಳ್ಳುತ್ತದೆ ನಿರೂಪಣೆ.
ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್ ಎಲ್ಲವೂ ಇಲ್ಲಿವೆ. ಮಾರಾಮಾರಿಯ ದೊಡ್ಡ
‘ರಥ’ದಲ್ಲಿ ಅವೆಲ್ಲ ಬಿಡಿಭಾಗಗಳಷ್ಟೇ. ಸ್ನೇಹಿತನಿಗೆ ನಾಯಕ ಕಣ್ಣು ಕೊಡುವ
ಸನ್ನಿವೇಶವೇ ಎಂಜಿನ್! ಹೊಡಿಬಡಿ ದೃಶ್ಯಗಳನ್ನು ಬಯಸುವವರಿಗೆ ಫುಲ್ ಮನರಂಜನೆ,
ಪಾಪ-ಪುಣ್ಯದ ಲೆಕ್ಕಾಚಾರ ಹಾಕುತ್ತ ಕೂತರೆ ಚಿತ್ರ ಹಿಡಿಸದೆಯೂ ಹೋಗಬಹುದು. ಅಷ್ಟೊಂದು
ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಶ್ರೀಮುರಳಿ. ಪದೇಪದೆ ಒಂದೇ ಡೈಲಾಗ್ ಹೊಡೆಯುವ ನಾಯಕಿ,
ಹಾದಿಯಲ್ಲಿ ಅಂಗಾಲಿಗೆ ಸಿಕ್ಕ ಮುಳ್ಳು! ಮಂಗಳಮುಖಿ ಅವತಾರದಲ್ಲಿ ‘ಭಜರಂಗಿ’ ಲೋಕಿ
ಬಲುಜೋರು. ರವಿ ಬಸ್ರೂರು ಹಿನ್ನೆಲೆ ಸಂಗೀತ ಅಗತ್ಯಕ್ಕಿಂತ ಅಬ್ಬರ. ಭುವನ್ ಗೌಡ
ಕ್ಯಾಮರಾ ಕೆಲಸ ಅಚ್ಚುಕಟ್ಟು. ನಾಯಕನಿಗೆ ಸ್ಪರ್ಧೆ ನೀಡುವಂತೆ ನಟಿಸಿದ್ದಾರೆ ರವಿಶಂಕರ್
ಮತ್ತು ಲೋಕಿ. ಮಾಮೂಲಿ ಕಥೆಯನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ‘ಉಗ್ರಂ’
ಸಿನಿಮಾವನ್ನು ‘ರಥಾವರ’ ನೆನಪು ಮಾಡಿಸುತ್ತದೆ. ಮೇಕಿಂಗ್, ಕ್ಯಾಮರಾ ಕೈಚಳಕ, ಹಾಡುಗಳು
ಮೆಚ್ಚುಗೆ ಗಳಿಸುತ್ತವೆ. ಮುರಳಿ ಕಂಠಸಿರಿಯ ಟಪ್ಪಾಂಗುಚ್ಚಿ ಹಾಡು ಮೆಲುಕು ಹಾಕುವಂತಿದೆ.
ರಥಾವರ ಚಿತ್ರ ಸೂಪರ್.
Subscribe to:
Post Comments (Atom)
0 comments:
Post a Comment