PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೩ (ಕ ವಾ) ರೈತರಲ್ಲಿ ಮಣ್ಣಿನ ಫಲವತ್ತತೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಡಿ. ೦೫ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ ಆವರಣದಲ್ಲಿ ವಿಶ್ವ ಮಣ್ಣು ದಿನಾಚರಣೆ ಹಾಗೂ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
     ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೆರವೇರಿಸುವರು.  ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ|| ಎಸ್ ಕೆ ಮೇಟಿ ಅವರು ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಭಾಗವಹಿಸಿ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಿದ್ದಾರೆ. ಡಾ|| ಎಸ್ ಎನ್ ಭಟ್, ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಹಾಗೂ ಡಾ|| ಎಂ ಬಿ ಪಾಟೀಲ್, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
     ಆಹಾರ ಭದ್ರತೆ, ಕೃಷಿ, ಹವಾಮಾನ ಬದಲಾವಣೆಯ ನಕಾರಾತ್ಮಕ ಪ್ರಭಾವ ಕಡಿಮೆಮಾಡಲು ಹಾಗೂ ಅದಕ್ಕೆ ಹೊಂದಿಕೊಳ್ಳಲು, ಬಡತನ ನಿವಾರಣೆ ಮತ್ತು ನಾಡಿನ ಸುಸ್ಥಿರ  ಅಭಿವೃದ್ದಿಯಲ್ಲಿ ಮಣ್ಣಿನ ಮಹತ್ವವನ್ನು ವಿಶ್ವಾದ್ಯಂತ ಜಾಗೃತಿಗೊಳಿಸಲು ಡಿಸೆಂಬರ್ ೨೦, ೨೦೧೩ ರಂದು  ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆಯಲ್ಲಿ ೨೦೧೫ ರ ಡಿಸೆಂಬರ್ ೫ ದಿನವನ್ನು ಮಣ್ಣಿನ ದಿನವೆಂದು ಹಾಗೂ ೨೦೧೫ನೇ ವರ್ಷವನ್ನು ಅಂತರಾಷ್ಟ್ರೀಯ ಮಣ್ಣಿನ ವರ್ಷವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
    ವಿಶ್ವ ಮಣ್ಣು ದಿನಾಚರಣೆಯನ್ನು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ರೈತ ಭಾಂದವರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ಆಯೋಜಿಸಿ, ಆ ಕಾಂiiಕ್ರಮದಲ್ಲಿ ಮಣ್ಣಿನ ಗುಣಧರ್ಮಗಳ ಬಗ್ಗೆ, ಮಣ್ಣಿನ ಫಲವತ್ತತೆ, ಮಣ್ಣಿನಲ್ಲಿನ ಪೋಷಕಾಂಶಗಳ ಕುರಿತು ಹಾಗೂ ಎರಡು ವರ್ಷಗಳಲ್ಲಿ ಎಲ್ಲಾ ರೈತ ಹಿಡುವಳಿದಾರರಿಗೆ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವುದರ ಔಚಿತ್ಯದ ಬಗ್ಗೆ ಹಾಗೂ ಆ ದಿನದಂದು ವಿಶೇಷವಾಗಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
      ಈ ಕಾರ್ಯಕ್ರಮವನ್ನು ಕೃಷಿ ವಿಶ್ವ ವಿಧ್ಯಾಲಯ, ರಾಯಚೂರು ಇವರ ಅಂಗ ಸಂಸ್ಥೆಗಳಾದ ಕೃಷಿ ಸಂಶೋಧನಾ ಕೇಂದ್ರ ಗಂಗಾವತಿ, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಹಾಗೂ ಕೃಷಿ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಡಾ|| ಜೆ.ವಿಶ್ವನಾಥ, ಮುಖ್ಯಸ್ಥರು, ಸವಳು ಮಣ್ಣು ಮತ್ತು ನೀರು ಯೋಜನೆ ಹಾಗೂ ಡಾ|| ಬಿ.ಜಿ. ಮಸ್ತಾನರೆಡ್ಡಿ, ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ ಇವರು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.
      ಈ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಜಂಟಿಕೃಷಿ ನಿರ್ದೇಶಕ ಎ ರಾಮದಾಸ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕಸಾಪ ಚುನಾವಣೆ ಮತದಾರರ ಪಟ್ಟಿ ಪ್ರಕಟ- ಆಕ್ಷೇಪಣೆ ಆಹ್ವಾನ.
ಕೊಪ್ಪಳ ಡಿ. ೦೩ (ಕ ವಾ) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ / ಕಾರ್ಯಕಾರಿ ಮಂಡಳಿ ಚುನಾವಣೆ ಸಂಬಂಧ ಮತದಾರರ ಕರಡು ಪಟ್ಟಿಯನ್ನು ಎಲ್ಲ ತಾಲೂಕು ತಹಸಿಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಮತದಾರರ ಪಟ್ಟಿ ಕುರಿತು ಯಾವುದೇ ಆಕ್ಷೇಪಣೆಗಳನ್ನು ಡಿ. ೧೯ ರ ಒಳಗಾಗಿ ಜಿಲ್ಲಾ ಕಸಾಪ ಚುನಾವಣಾಧಿಕಾರಿಗಳೂ ಆಗಿರುವ ಕೊಪ್ಪಳ ತಹಸಿಲ್ದಾರರಿಗೆ ಸಲ್ಲಿಸಬೇಕು.  ಮತದಾರರ ಅಂತಿಮ ಪಟ್ಟಿಯನ್ನು ಜನವರಿ ೧೧ ರಂದು ಪ್ರಕಟಿಸಲಾಗುವುದು.  ಚುನಾವಣಾ ವೇಳಾ ಪಟ್ಟಿಯನ್ನು ಈಗಾಗಲೆ ಜಿಲ್ಲಾ ಪಂಚಾಯತಿ, ಆಯಾ ತಾಲೂಕಾ ಪಂಚಾಯತಿ ಮತ್ತು ಕೊಪ್ಪಳ ನಗರಸಭೆ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

Advertisement

0 comments:

Post a Comment

 
Top