PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಡಿ,೨೬  ಪ್ರವಾದಿ ಮೊಹಮ್ಮದ್(ಸ) ಪೈಗಂಬರ್ ರವರ ಜಯಂತಿ ಅಂಗವಾಗಿ  ಜಶ್ನೆ ಈದ್ ಮೀಲಾದ ಕಾರ್ಯಕ್ರಮದ  ಪ್ರಯುಕ್ತ ನಗರದಲ್ಲಿ ಮುಸ್ಲಿಂ ಯುವ ಕಾರ್ಯಕರ್ತರು ಸೇರಿ ಎರ್ಪಡಿಸಿದ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಸೂಕ್ತ ಬಂದೋಬಸ್ತ ನೀಡಿ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸಹಕಾರ ನೀಡಿದ ಪೊಲೀಸ ಇಲಾಖೆಗೆ ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸಿ ನಗರ ಪೊಲೀಸ್ ಠಾಣೆಗೆ ತರಳಿ ಪೊಲೀಸ್ ಅಧಿಕ್ಷಕ ಸತೀಶ ಪಾಟೀಲ್ ಸನ್ಮಾನಿಸಿ ಸಿಹಿ ಹಂಚಿ ಅಭಿನಂದಿಸಿದರು. ಕೊಪ್ಪಳ ನಗರ ಸಾರ್ವಜನಿಕ ಮೈದಾನದಲ್ಲಿ ಜಶ್ನೆ ಈದ ಮೀಲಾದ ಪ್ರಯುಕ್ತ ಅನಾಥರಾಗಿ ವಾಸಿಸುತ್ತಿರುವ ಮಾನಸಿಕ ಅಸ್ವಸ್ಥರನ್ನು ಒಂದೆಡೆ ಸೇರಿಸಿ ಕ್ಷೌರ ಮಾಡಿಸಿ, ಜಳಕಮಾಡಿಸಿ ಹೊಸ ಬಟ್ಟೆ ಹಗೂ ಬೆಡ್ಸೀಟ್‌ಗಳನ್ನು ಕೊಟ್ಟು ಊಟ ಮಾಡಿಸಿ ಉಪಚರಿಸಿ ಕಳಿಸುವ ಕಾರ್ಯಕ್ರಮ ಸೇರಿದಂತೆ ರಕ್ತದಾನ ಶಿಬಿರ, ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಮೆಕ್ಕಾ ಮದೀನಾ ಸ್ತಬ್ದ ಚಿತ್ರಗಳ ಭವ್ಯ ಮೆರವಣಿಗೆ ಇತ್ಯಾದಿ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಮತ್ತು ಶಾಂತಿಯುತವಾಗಿ ಆಚರಣೆಗೆ ಸೂಕ್ತ ಪೊಲೀಸ ಬಮದೋಬಸ್ತ ನೀಡಿ ನಮ್ಮ ಕಾರ್ಯಕ್ರಮಗಳಿಗಾಗಿ ಹಗಲಿರುಳು ಶ್ರಮಿಸಿ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಗನೀಯವಾಗಿದೆ ನಿಮ್ಮ ಸೇವೆ ಸಲಹೆ ಸೂಚನೆ ನರೆವು ಸಹಕಾರ ಸದಾ ನಮ್ಮೊಂದಿಗೆ ಇರಲಿ ನಿಮ್ಮ ನಿರೀಕೆ ಮತ್ತು ನಿರ್ದೇಶನದಂತೆ ಕಾರ್ಯಕ್ರಮ ನಾವು ಮುಂದೆಯೂ ಸಹ ಶಾಂತಿಯುತವಾಗಿ ಅಚರಣೆ ಮಾಡಲು ಶ್ರಮಿಸುತ್ತೇವೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕ್ಷಕ ಸತೀಶ್ ಪಾಟೀಲ್ ರವರಿಗೆ ಅಭಿನಂದನಾ ಪತ್ರ ನೀಡಿ ಸಮಾಜದ ಪರವಾಗಿ ಅವರಿಗೆ ಸನ್ಮಾನಿಸಿ ಸಹಿ ತಿನಿಸಿ ಶುಭ ಹಾರೈಸಿದ ಈ ಸಂದರ್ಭದಲ್ಲಿ ಕೊಪ್ಪಳ ನಗರದ ನಿರ್ಮಿತಿ ಕೇಂದ್ರ ಬಡಾವಣೆಯ ಸಲೀಮ್ ಅಳವಂಡಿ, ಅಬ್ದುಲ್ ರಶೀದ್ ಚಿಕ್ಕಮಸೂತಿ, ಲಾಲ್‌ಷಾ ಮನಿಯಾರ್, ಹುಸೇನ ಬಾಷಾ ಮಾನವಿ, ಸಯ್ಯದ್ ಗೌಸ ಪಾಷಾ, ಟಿಪ್ಪು ಸುಲ್ತಾನ ಗಾಡಿವನ್, ಮಹಮ್ಮದ್ ಫಯಾಜ್, ಸರ್ದಾರಖಾನ್ ಕಪಾಲಿ ಓಣಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top