PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಡಿ. ೨೬ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು, ಸುಗಮ ಮತದಾನಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಮತದಾನ ಕೇಂದ್ರಗಳ ವಿವರ : ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು ೧೬೧ ಮತಗಟ್ಟೆಗಳಿವೆ.  ಕೊಪ್ಪಳ ಜಿಲ್ಲೆಯ ೧೫೨ ಗ್ರಾಮ ಪಂಚಾಯತಿ ಕಚೇರಿ, ೦೪- ತಾಲೂಕಾ ಪಂಚಾಯತಿ ಕಚೇರಿ, ೦೧-ಜಿ.ಪಂ. ಕಚೇರಿ ಹಾಗೂ ೦೪-ನಗರಸಭೆ/ಪುರಸಭೆ/ಪ.ಪಂಚಾಯತಿ ಕಚೇರಿಗಳಲ್ಲಿ ಸೇರಿದಂತೆ ಒಟ್ಟು ೧೬೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೩೮, ತಾಲೂಕಾ ಪಂಚಾಯತಿ-೦೧, ಜಿಲ್ಲಾ ಪಂಚಾಯತಿ-೦೧ ಮತ್ತು ಕೊಪ್ಪಳ ನಗರಸಭೆ-೦೧ ಸೇರಿದಂತೆ ಒಟ್ಟು ೪೧ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೪೨, ತಾಲೂಕಾ ಪಂಚಾಯತಿ-೦೧, ನಗರಸಭೆ-೦೧ ಕಚೇರಿ ಸೇರಿದಂತೆ ಒಟ್ಟು ೪೪ ಮತದಾನ ಕೇಂದ್ರಗಳು. ಯಲಬುರ್ಗಾ ತಾಲೂಕಿನಲ್ಲಿ  ಗ್ರಾಮ ಪಂಚಾಯತಿ-೩೬, ತಾಲೂಕಾ ಪಂಚಾಯತಿ-೦೧, ಪಟ್ಟಣ ಪಂಚಾಯತಿ-೦೧ ಕಚೇರಿಗಳು ಸೇರಿದಂತೆ ಒಟ್ಟು ೩೮ ಮತದಾನ ಕೇಂದ್ರಗಳನ್ನು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ-೩೬, ತಾಲೂಕಾ ಪಂಚಾಯತಿ-೦೧, ಪುರಸಭೆ-೦೧ ಕಚೇರಿ ಸೇರಿದಂತೆ ಒಟ್ಟು ೩೮ ಮತದಾನ ಕೇಂದ್ರಗಳಿವೆ.೪೧ ಸೂಕ್ಷ್ಮ, ೩೯ ಅತಿ ಸೂಕ್ಷ್ಮ : ಜಿಲ್ಲೆಯಲ್ಲಿನ ೧೬೧ ಮತಗಟ್ಟೆಗಳ ಪೈಕಿ ಒಟ್ಟು ೪೧ ಸೂಕ್ಷ್ಮ ಮತಗಟ್ಟೆಗಳು ಹಾಗೂ ೩೯ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತುಸಲಾಗಿದೆ.  ಸೂಕ್ಷ್ಮ ಮತಗಟ್ಟೆಗಳ ಪೈಕಿ ಕೊಪ್ಪಳ-೧೦, ಗಂಗಾವತಿ-೧೧, ಯಲಬುರ್ಗಾ-೧೦, ಕುಷ್ಟಗಿ-೧೦.  ಅತಿಸೂಕ್ಷ್ಮ ಮತಗಟ್ಟೆಗಳ ಪೈಕಿ ಕೊಪ್ಪಳ-೧೦, ಗಂಗಾವತಿ-೧೧, ಯಲಬುರ್ಗಾ ಮತ್ತು ಕುಷ್ಟಗಿ ತಲಾ ೦೯ ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಉಳಿದಂತೆ ೮೧ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ.ಮತದಾರರ ವಿವರ : ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಸದಸ್ಯರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಮತದಾರರಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೨೯೮೭ ಮತದಾರರಿದ್ದಾರೆ.ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೭೨೯, ತಾಲೂಕಾ ಪಂಚಾಯತಿ-೨೬, ಜಿಲ್ಲಾ ಪಂಚಾಯತಿ-೨೭, ನಗರಸಭೆ-೩೧, ಒಬ್ಬರು ಸಂಸದರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು ೮೧೫ ಜನ ಮತದಾರರು ಮತ ಚಲಾಯಿಸಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೭೯೭, ತಾಲೂಕಾ ಪಂಚಾಯತಿ-೩೧, ನಗರಸಭೆ-೩೪, ಇಬ್ಬರು ಶಾಸಕರು ಸೇರಿದಂತೆ ಒಟ್ಟು ೮೬೪ ಜನ ಮತದಾರರಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೫೯೫, ತಾಲೂಕಾ ಪಂಚಾಯತಿ-೨೩, ಪಟ್ಟಣ ಪಂಚಾಯತಿ-೧೪, ಒಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು ೬೩೪ ಜನ ಮತದಾರರಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-೬೨೩, ತಾಲೂಕಾ ಪಂಚಾಯತಿ-೨೨, ಪುರಸಭೆ-೨೮, ಒಬ್ಬರು ಶಾಸಕರು ಸೇರಿದಂತೆ ಒಟ್ಟು ೬೭೪ ಜನ ಮತದಾರರಿದ್ದಾರೆ.೪೮೩ ಸಿಬ್ಬಂದಿಗಳು : ಚುನಾವಣೆಯನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಒಟ್ಟು ೪೮೩ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕರು ಸೇರಿದಂತೆ ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಕೊಪ್ಪಳ-೧೨೩, ಗಂಗಾವತಿ-೧೩೨, ಯಲಬುರ್ಗಾ-೧೧೪, ಕುಷ್ಟಗಿ-೧೧೪ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.  ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ಇದರ ಜೊತೆಗೆ ಜಿಲ್ಲೆಯಲ್ಲಿ ಒಟ್ಟು ೩೦ ಸೆಕ್ಟರಲ್ ಮ್ಯಾಜಿಸ್ಟ್ರೇಟ್ಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಮೈಕ್ರೋ ಅಬ್ಸರ್ವರ್‍ಸ್ ನೇಮಕ : ಜಿಲ್ಲೆಯಲ್ಲಿ ಪ್ರತಿ ಮತಗಟ್ಟೆಗೆ ಒಬ್ಬರು ಅಧಿಕಾರಿಗಳಂತೆ ಒಟ್ಟು ೧೬೧ ಮೈಕ್ರೋ ಅಬ್ಸರ್ವರ್‍ಸ್‌ಗಳನ್ನು ನೇಮಿಸಲಾಗಿದ್ದು, ಕೊಪ್ಪಳ-೪೧, ಗಂಗಾವತಿ-೪೪, ಯಲಬುರ್ಗಾ-೩೮, ಕುಷ್ಟಗಿ-೩೮ ಮೈಕ್ರೋ ಅಬ್ಸರ್ವರ್‍ಸ್ ಕಾರ್ಯ ನಿರ್ವಹಿಸುವರು.  ನೀತಿ ಸಂಹಿತೆ ಕುರಿತು ನಿಗಾ ವಹಿಸಲು ಪ್ರತಿ ತಾಲೂಕಿಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ತಲಾ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿ, ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಒಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಇರುತ್ತಾರೆ.  ಜಿಲ್ಲೆಗೆ ಒಟ್ಟು ೧೨ ಎಂ.ಸಿ.ಸಿ. ತಂಡಗಳನ್ನು ನೇಮಿಸಲಾಗಿದೆ.೯೧ ವಾಹನಗಳು : ಚುನಾವಣಾ ಕಾರ್ಯಕ್ಕಾಗಿ ಒಟ್ಟು ೯೧ ವಾಹನಗಳನ್ನು ಬಳಸಲಾಗುತ್ತಿದ್ದು, ಕೊಪ್ಪಳ-೨೬, ಗಂಗಾವತಿ-೩೨, ಯಲಬುರ್ಗಾ-೧೩ ಮತ್ತು ಕುಷ್ಟಗಿ ತಾಲೂಕಿನಲ್ಲಿ ೨೦ ವಾಹನಗಳನ್ನು ಬಳಸಲಾಗುತ್ತಿದೆ.೭೪೧ ಅನಕ್ಷರಸ್ಥ ಮತದಾರರು : ಜಿಲ್ಲೆಯಲ್ಲಿ ಡಿ. ೨೭ ರಂದು ಜರುಗುವ ವಿಧಾನಪರಿಷತ್ ಚುನಾವಣೆಯಲ್ಲಿ ೭೪೧ ಅನಕ್ಷರಸ್ಥ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.   ಮತದಾರರು ಒಂದು ವೇಳೆ ಅನಕ್ಷರಸ್ಥ, ಕುರುಡ ಹಾಗೂ ದುರ್ಬಲನಾಗಿದ್ದರೆ ಚುನಾವಣೆ ನಿಯಮಗಳನ್ವಯ ಇಂತಹ ವ್ಯಕ್ತಿಗಳು ಸಹಾಯಕ್ಕಾಗಿ ಒಬ್ಬ ಸಂಗಡಿಗನನ್ನು ಮತಗಟ್ಟೆಗೆ ಕರೆದುಕೊಂಡು ಹೋಗಬಹುದಾಗಿದೆ. ಆದರೆ ಸಂಗಡಿಗನು ೧೮ ವರ್ಷ ವಯಸ್ಸಿನ ಒಳಗಿನವನಾಗಿರಬಾರದು ಮತ್ತು ಆತನು ಓದಲು ಹಾಗೂ ಮತದಾರನ ಇಚ್ಛೆಯಂತೆ ಮತದಾರನ ಪರವಾಗಿ ಮತಪತ್ರದ ಮೇಲೆ ಮತ ದಾಖಲಿಸಲು ಶಕ್ತನಾಗಿರಬೇಕು.  ಒಬ್ಬ ಸಂಗಡಿಗನು ಒಬ್ಬ ಮತದಾರನಿಗಿಂತ ಹೆಚ್ಚಿನ ಮತದಾರರಿಗೆ ಸಂಗಡಿಗನಾಗಲು ಬರುವುದಿಲ್ಲ. ಅಲ್ಲದೆ, ಸಂಗಡಿಗನು ಮತದಾನದ ರಹಸ್ಯ ಗೌಪ್ಯತೆಯನ್ನು ಕಾಪಾಡುವುದಾಗಿ ಮತ್ತು ಇನ್ನೊಬ್ಬ ಮತದಾರನಿಗೆ ಸಂಗಡಿಗನಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮತದಾನ ಕೇಂದ್ರದ ಅಧಿಕಾರಿಯ ಮುಂದೆ ಘೋಷಣೆ ಮಾಡಿ, ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿಯ ಅನುಮತಿ ಪಡೆಯಬೇಕು. ಮತದಾನ ತಪ್ಪಾದಲ್ಲಿ ಎರಡನೇ ಮತಪತ್ರವನ್ನು ನೀಡುವ ಅವಕಾಶ ಚುನಾವಣೆಯಲ್ಲಿ ಇರುವುದಿಲ್ಲ.ಡಿ. ೨೭ ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಸುಗಮವಾಗಿ, ಶಾಂತಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top