ಬಳ್ಳಾರಿ ನ. ೩೦- ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ ಎಂದು ಪತ್ರಕರ್ತ ಶಶಿಧರ ಮೇಟಿ ಅವರು ಹೇಳಿದರು. ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ತೊಗಲುಗೊಂಬೆ ಸಾಂಸ್ಕೃತಿಕ ಉತ್ಸವ-೨೦೧೫ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಅಭಿವೃದ್ಧಿಯಲ್ಲಿ ನೈತಿಕ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಬರೀ ಶಿಕ್ಷಣ ಪಡೆದುಕೊಂಡರೆ ಸಾಲದು. ಜೀವನದಲ್ಲಿ ಉತ್ತಮ ಸಂಸ್ಕಾರ, ಮೌಲ್ಯ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ನೈತಿಕ ಶಿಕ್ಷಣ ಕಡ್ಡಾಯವಾಗಿ ಪಡೆದುಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳ ವೈಭವೀಕರಣ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು. ಸಾಹಿತ್ಯ, ಕಲೆ, ಸಂಸ್ಕೃತಿ ನಶಿಸಿ ಹೋಗುತ್ತಿದೆ ಎಂದರೆ ಸಮಾಜ ದಾರಿ ತಪ್ಪುತ್ತಿದೆ ಎಂದರ್ಥ. ಸಾಂಸ್ಕೃತಿಕ ಉತ್ಸವಗಳು, ಸಾಹಿತ್ಯ ಚಟುವಟಿಕೆಗಳ ಮೂಲಕ ಸಮಾಜವನ್ನು ಸರಿ ದಾರಿಗೆ ಒಯ್ಯಲು ಸಾಧ್ಯ ಎಂದು ತಿಳಿಸಿದರು. ರಂಗ ಕರ್ಮಿ ಕೆ ಜಗದೀಶ ಅವರು ಮಾತನಾಡಿ, ಪುರಾತನ ಕಲೆಯಾದ ತೊಗಲುಗೊಂಬೆ ಆಟದತ್ತ ಜನರನ್ನು ಆಕರ್ಷಿಸಲು ತೊಗಲು ಗೊಂಬೆ ಕಲಾವಿದರು, ಸಂಘಟಕರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಹೊಸ ಪ್ರಯೋಗಗಳ ಮೂಲಕ ತೊಗಲು ಗೊಂಬೆ ಕಲೆಗೆ ನವೀನ ಸ್ಪರ್ಶ ನೀಡುವ ಅಗತ್ಯ ಇದೆ ಎಂದು ಹೇಳಿದರು. ಸಾಂಸ್ಕೃತಿಕ ಸಂಘಟಕ, ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ ಉತ್ತರ ಕರ್ನಾಟಕದ ಹೆಮ್ಮೆಯ ಜನಪದ ಕಲೆಯಾದ ಬಯಲಾಟದ ಪುನಶ್ಚೇತನಕ್ಕೆ ಉನ್ನತ ಶಿಕ್ಷಣ ಪಡೆದವರು, ಗಣ್ಯರು, ಯುವ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ. ಯಕ್ಷಗಾನ ವಿಶ್ವ ಪ್ರಸಿದ್ಧಿಯಾಗಲು ಕರಾವಳಿ ಭಾಗದ ಎಲ್ಲಾ ವರ್ಗದ ಜನತೆ, ಶ್ರೀಮಂತರು ಬಡವರು ಎನ್ನದೇ ವೈದ್ಯರು, ವಕೀಲರು, ಪ್ರಾಧ್ಯಾಪಕರು, ಇಂಜನಿಯರುಗಳು ಬಣ್ಣ ಹಚ್ಚಿ ಹಾಡಿ ಕುಣಿಯುವುದು ಪ್ರಮುಖ ಕಾರಣ ಎಂದು ತಿಳಿಸಿದರು. ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ, ಸಾಂಸ್ಕೃತಿಕ ಸಂಘಟನೆ ಸುಲುಭವಲ್ಲ. ಸಂಘಟನೆ ಆರ್ಥಿಕ ಸಂಪನ್ಮೂ;ಲ, ಹೆಚ್ಚು ಸಮಯ, ಪರಿಶ್ರ
ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಪಿ. ಗಾದೆಪ್ಪ, ಹಿರಿಯ ರಂಗ ಕಲಾವಿದ ಕೋಗಳಿ ಪಂಪಣ್ಣ ಮತ್ತಿತರರು ಮಾತನಾಡಿದರು. ಶ್ರೀ ಡಾ. ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘದ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ ನಿಂಗಪ್ಪ, ಶಿವ ಶಂಕರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಅನುಮಪ ಸೇವೆ ಸಲ್ಲಿಸುತ್ತಿರುವ ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ, ಪತ್ರಕರ್ತ ಸಿ. ಮಂಜುನಾಥ, ಹಿರಿಯ ರಂಗಕಲಾವಿದ ಕೋಗಳಿ ಪಂಪಣ್ಣ, ರಂಗ ನಿರ್ದೇಶಕ ಕೆ. ಜಗದೀಶ್, ನೃತ್ಯ ನಿರ್ದೇಶಕ ಹೆಚ್ ಕೆ ಆರ್ ಜಿಲಾನಿ ಭಾಷ, ರಂಗ ಕಲಾವಿದರಾದ ಹಡಗಲಿಯ ಮಂಜುನಾಥ ಪಾಟೀಲ್, ಬಳ್ಳಾರಿಯ ಕರಡಕಲ್ ವೀರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ: ಲಕ್ಷ್ಮಿ ಕಲಾ ತಂಡದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಹಿಂದುಸ್ತಾನಿ ಗಾಯಕ ದೊಡ್ಡ ಬಸವ ಗವಾಯಿ ಅವರಿಂದ ವಚನ ಸಂಗೀತ ಹಾಗೂ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ದಶಕಂಠ ರಾವಣ- ಶಿವನ ಆತ್ಮಲಿಂಗ ತೊಗಲುಗೊಂಬೆ ಕಥಾ ರೂಪಕ ಪ್ರದರ್ಶನ ಸಭಿಕರ ಮನಸೂರೆಗೊಂಡವು. ಕಲಾ ತಂಡದ ಅಧ್ಯಕ್ಷ ಕೆ. ಹೊನ್ನೂರು ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಬಸವರಾಜ ಅಮಾತಿ ಪ್ರಾರ್ಥಿಸಿ ನಿರೂಪಿಸಿದರು. ಟಿ ಎಂ ಪಂಪಾಪತಿ ವಂದಿಸಿದರು.
ಮ ಬೇಡುತ್ತದೆ. ಸಮಾಝ ಮುಖಿ ಸಂಘಟನೆಗಳ ಕಾರ್ಯಗಳಿಗೆ ದಾನಿಗಳು, ಸಂಘ ಸಂಸ್ಥೆ, ಸರಕಾರ ಅಗತ್ಯ ನೆರವನ್ನು ನೀಡಬೇಕು ಎಂದು ಕೋರಿದರು.ಸಮಾಜದ ಅಭಿವೃದ್ಧಿಯಲ್ಲಿ ನೈತಿಕ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಬರೀ ಶಿಕ್ಷಣ ಪಡೆದುಕೊಂಡರೆ ಸಾಲದು. ಜೀವನದಲ್ಲಿ ಉತ್ತಮ ಸಂಸ್ಕಾರ, ಮೌಲ್ಯ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ನೈತಿಕ ಶಿಕ್ಷಣ ಕಡ್ಡಾಯವಾಗಿ ಪಡೆದುಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳ ವೈಭವೀಕರಣ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು. ಸಾಹಿತ್ಯ, ಕಲೆ, ಸಂಸ್ಕೃತಿ ನಶಿಸಿ ಹೋಗುತ್ತಿದೆ ಎಂದರೆ ಸಮಾಜ ದಾರಿ ತಪ್ಪುತ್ತಿದೆ ಎಂದರ್ಥ. ಸಾಂಸ್ಕೃತಿಕ ಉತ್ಸವಗಳು, ಸಾಹಿತ್ಯ ಚಟುವಟಿಕೆಗಳ ಮೂಲಕ ಸಮಾಜವನ್ನು ಸರಿ ದಾರಿಗೆ ಒಯ್ಯಲು ಸಾಧ್ಯ ಎಂದು ತಿಳಿಸಿದರು. ರಂಗ ಕರ್ಮಿ ಕೆ ಜಗದೀಶ ಅವರು ಮಾತನಾಡಿ, ಪುರಾತನ ಕಲೆಯಾದ ತೊಗಲುಗೊಂಬೆ ಆಟದತ್ತ ಜನರನ್ನು ಆಕರ್ಷಿಸಲು ತೊಗಲು ಗೊಂಬೆ ಕಲಾವಿದರು, ಸಂಘಟಕರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಹೊಸ ಪ್ರಯೋಗಗಳ ಮೂಲಕ ತೊಗಲು ಗೊಂಬೆ ಕಲೆಗೆ ನವೀನ ಸ್ಪರ್ಶ ನೀಡುವ ಅಗತ್ಯ ಇದೆ ಎಂದು ಹೇಳಿದರು. ಸಾಂಸ್ಕೃತಿಕ ಸಂಘಟಕ, ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ ಉತ್ತರ ಕರ್ನಾಟಕದ ಹೆಮ್ಮೆಯ ಜನಪದ ಕಲೆಯಾದ ಬಯಲಾಟದ ಪುನಶ್ಚೇತನಕ್ಕೆ ಉನ್ನತ ಶಿಕ್ಷಣ ಪಡೆದವರು, ಗಣ್ಯರು, ಯುವ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ. ಯಕ್ಷಗಾನ ವಿಶ್ವ ಪ್ರಸಿದ್ಧಿಯಾಗಲು ಕರಾವಳಿ ಭಾಗದ ಎಲ್ಲಾ ವರ್ಗದ ಜನತೆ, ಶ್ರೀಮಂತರು ಬಡವರು ಎನ್ನದೇ ವೈದ್ಯರು, ವಕೀಲರು, ಪ್ರಾಧ್ಯಾಪಕರು, ಇಂಜನಿಯರುಗಳು ಬಣ್ಣ ಹಚ್ಚಿ ಹಾಡಿ ಕುಣಿಯುವುದು ಪ್ರಮುಖ ಕಾರಣ ಎಂದು ತಿಳಿಸಿದರು. ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ, ಸಾಂಸ್ಕೃತಿಕ ಸಂಘಟನೆ ಸುಲುಭವಲ್ಲ. ಸಂಘಟನೆ ಆರ್ಥಿಕ ಸಂಪನ್ಮೂ;ಲ, ಹೆಚ್ಚು ಸಮಯ, ಪರಿಶ್ರ
ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಪಿ. ಗಾದೆಪ್ಪ, ಹಿರಿಯ ರಂಗ ಕಲಾವಿದ ಕೋಗಳಿ ಪಂಪಣ್ಣ ಮತ್ತಿತರರು ಮಾತನಾಡಿದರು. ಶ್ರೀ ಡಾ. ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘದ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ ನಿಂಗಪ್ಪ, ಶಿವ ಶಂಕರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಅನುಮಪ ಸೇವೆ ಸಲ್ಲಿಸುತ್ತಿರುವ ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ, ಪತ್ರಕರ್ತ ಸಿ. ಮಂಜುನಾಥ, ಹಿರಿಯ ರಂಗಕಲಾವಿದ ಕೋಗಳಿ ಪಂಪಣ್ಣ, ರಂಗ ನಿರ್ದೇಶಕ ಕೆ. ಜಗದೀಶ್, ನೃತ್ಯ ನಿರ್ದೇಶಕ ಹೆಚ್ ಕೆ ಆರ್ ಜಿಲಾನಿ ಭಾಷ, ರಂಗ ಕಲಾವಿದರಾದ ಹಡಗಲಿಯ ಮಂಜುನಾಥ ಪಾಟೀಲ್, ಬಳ್ಳಾರಿಯ ಕರಡಕಲ್ ವೀರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ: ಲಕ್ಷ್ಮಿ ಕಲಾ ತಂಡದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಹಿಂದುಸ್ತಾನಿ ಗಾಯಕ ದೊಡ್ಡ ಬಸವ ಗವಾಯಿ ಅವರಿಂದ ವಚನ ಸಂಗೀತ ಹಾಗೂ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ದಶಕಂಠ ರಾವಣ- ಶಿವನ ಆತ್ಮಲಿಂಗ ತೊಗಲುಗೊಂಬೆ ಕಥಾ ರೂಪಕ ಪ್ರದರ್ಶನ ಸಭಿಕರ ಮನಸೂರೆಗೊಂಡವು. ಕಲಾ ತಂಡದ ಅಧ್ಯಕ್ಷ ಕೆ. ಹೊನ್ನೂರು ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಬಸವರಾಜ ಅಮಾತಿ ಪ್ರಾರ್ಥಿಸಿ ನಿರೂಪಿಸಿದರು. ಟಿ ಎಂ ಪಂಪಾಪತಿ ವಂದಿಸಿದರು.
0 comments:
Post a Comment