PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ೨೬ರಂದು  ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಬಳಗದವರು ಕನ್ನಡ ಜಾತ್ರೆಯನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಶಂಭುಲಿಂಗನಗೌಡ ವಿ ಪಾಟೀಲರವರು  ನೆರವೇರಿಸಿ ಕನ್ನಡ ಭಾಷಾ ಚರಿತ್ರೆಯನ್ನು ತಿಳಿಸುತ್ತಾ ಇಂದಿನ ಭಾಷಾ ಸ್ಥಿತಿಗತಿಯನ್ನು ತಿಳಿಸುತ್ತಾ ಕನ್ನಡಿಗರಾದ ನಾವು ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯ ವನ್ನು ಉಳಿಸಿಬೆಳೆಸುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು ನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ ಕಲಾವಿದರಾದ ಸಿ.ವಿ.ಜಡಿಯವರ್ ಗ್ರಾಮೀಣ ಪ್ರದೇಶದ ಜಾನಪದ ಸೊಗಡಿನಜನರ ಮನದಾಳದಲ್ಲಿ ಉಳಿಯುವಂತ ಮೂಲ ಜಾನಪದ ಗೀತೆಗಳನ್ನಾಡಿ ಜನರನ್ನು ಜಾನಪದ ಲೋಕಕ್ಕೆ ಕೊಂಡೊಯ್ದರು. ನ್ಯಾಯವಾದಿಗಳಾದ ಶರಣಪ್ಪಗೌಡ ಪಾಟೀಲ್ ರವರು ಹಾಸ್ಯದ ಮಿಮಿಕ್ರಿ ಮಾಡುವದರಮೂಲಕ
ಜನರನ್ನು ನಗೆಗಡಲಲ್ಲಿ ತೇಲಿಸಿದರು.ಹಿರಿಯ ಪತ್ರಕರ್ತರಾದ ಜಿ.ಎಸ್.ಗೋನಾಳ್ ರವರು ಮಾತನಾಡುತ್ತಾ ಹಲಗೇರಿ ಕಲೆಯ ತವರೂರು ಎಂದು ಬಣ್ಣಿಸಿದರು, ೨೦೧೪-೨೦೧೫ ನೇ ಸಾಲಿನಲ್ಲಿ ನಡೆದ ೧೦ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡದ ವಿಧ್ಯಾರ್ಥಿನಿಯಾದ ಜ್ಯೋತಿ ಬಿ ಆರೇರ್ ಹಾಗೂ ಪಿ.ಯು.ಸಿ. ಯಲ್ಲಿ ೧೦೦ಕ್ಕೆ ೯೯ ಅಂಕ ಪಡೆದ ಉಮಾ ಮೋರಗೇರಿ ವಿಧ್ಯಾರ್ಥಿನಿಗೆ ವರ್ಷದ ಕನ್ನಡತಿ ಎಂದು ಸನ್ಮಾನಿಸಲಾಯ್ತು. ಹಾಗೆಯೇ ನಿವೃತ್ತ ಶಿಕ್ಷಕರಾದ ದೇವೇಂದ್ರಪ್ಪ ಬಡಿಗೇರ, ಸಿ.ವಿ ಜಡಿಯವರ್, ರಾಜಶೇಖರ್ ಅಂಗಡಿ, ಜಿ.ಎಸ್. ಗೋನಾಳ್, ಬಸನಗೌಡ ಪಾಟೀಲ, ಶರಣಪ್ಪಗೌಡ ಪಾಟಿಲ್, ದೇವಣ್ಣ ಓಜಿನಳ್ಳಿಯವರನ್ನು ಕೂಡಾ ಸನ್ಮಾನಿಸಲಾಯ್ತು. ನಂತರ ಸಂಘದ ಅಧ್ಯಕ್ಷರಾದ ಪರಮೇಶ ಚಿಂತಾಮಣಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವನಗೌಡ ಪಾಟೀಲ್, ಕರಿಯಪ್ಪ ಹಳ್ಳಿಕೇರಿ, ವೀರನಗೌಡ ಪಾಟೀಲ್, ಪರಮೇಶ್ವರಗೌಡ ಪಾಟೀಲ್, ಪತ್ರಕರ್ತ ರಾದ ಉಮೇಶ ಅಬ್ಬಿಗೇರಿ, ಹನುಮಂತ ಹಳ್ಳಿಕೇರಿ, ಗ್ರಾ.ಪಂ. ಅಧ್ಯಕ್ಷರು, ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಮೇಶಗೌಡ ಹಳೇಮನಿ ಯವರು ನಿರೂಪಿಸಿದರು, ಬಸವರಾಜ ಬಾರಕೇರ್ ಸ್ವಾಗತಿಸಿದರು, ರೇವಣಪ್ಪ ಗುಡ್ಲಾನೂರವರು ವಂದಿಸುವದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

Advertisement

0 comments:

Post a Comment

 
Top