PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ. ನ. ೨೬. ನಗರದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವಾರ್ಷಿಕೋತ್ಸವ ನಿಮಿತ್ಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕುರಿತು ಉಚಿತ ಬೃಹತ್ ಆರೋಗ್ಯ ಶಿಬಿರ ನಡೆಯಲಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಶನಿವಾರ ನವೆಂಬರ್ ೨೮ ರಂದು, ನಗರದ ಹಳೇ ಜಿಲ್ಲಾ ಆಸ್ಪತ್ರೆ ಹತ್ತಿರ ವಿದ್ಯಾನಗರ ಕ್ರಾಸ್‌ನಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಶಿಬಿರದಲ್ಲಿ ಮೇಲಿನ ರೋಗ ಲಕ್ಷಣವಿರುವವರು ಭಾಗವಹಿಸಿ ಉಚಿತ ಚಿಕಿತ್ಸೆ ಪಡೆಯಬಹುದು. ಹೃದಯಕ್ಕೆ ಸಂಬಂಧಿಸಿದ ಇಸಿಜಿ, ಎಕೋ, ಶುಗರ್ ಮುಂತಾದ ಸುಮಾರು ಹದಿನೈದು ನೂರು ರುಪಾಯಿಗಳ ವೆಚ್ಚದ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವದು.
ಮುದ್ರಾ ರಹಸ್ಯ, ಮುದ್ರಾ ಮಂತ್ರ ಖ್ಯಾತಿಯ ಮುದ್ರಾ ಗುರೂಜಿ ಶ್ರೀ ಲಕ್ಷ್ಮೀ ಶ್ರೀನಿವಾಸರವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು, ಇದೇ ವೇಳೆ ಮುದ್ರಾ ರಹಸ್ಯ ಹಾಗೂ ಜ್ಯೋತಿಷ್ಯದ ಕುರಿತು ಮಾಹಿತಿ ಮಾರ್ಗದರ್ಶನ ನೀಡುವರು.
     ನಾರಾಯಣ ಹೃದಯಾಲಯದ ವೈದ್ಯ ಡಾ|| ಮಂಜುನಾಥ ಎಂ.ಬಿ., ಕೀಲು ಮೂಳೆ ವೈದ್ಯ ಡಾ|| ವಿಜಯೆಂದ್ರ ಶಹಪೂರ, ಮಧುಮೇಹ ಮತ್ತು ಪಂಚಕರ್ಮ ವೈದ್ಯ ಡಾ|| ಸುನೀಲ ಅರಳಿ, ಸ್ತ್ರೀರೋಗ ವೈದ್ಯರಾದ ಡಾ||ಸಾಯಿ ಶೈಲಾ ಮತ್ತು ಡಾ|| ರಾಧಿಕಾ ಅರಳಿ, ಸಾಮಾನ್ಯ ರೋಗಗಳ ವೈದ್ಯರಾದ ಡಾ|| ಮಹಮ್ಮದ್ ಮೀರಾಜ್ ಹಾಗೂ ಡಾ|| ಶಿವಕುಮಾರ ಅರಳಿ ಹಾಗೂ ಹೊಮಿಯೋಪಥಿ ವ್ಯದ್ಯ ಡಾ|| ಎಸ್. ಕೆ. ರಾಜೂರ ಆಗಮಿಸಿ ಚಿಕಿತ್ಸೆ ನೀಡುವರು. ರಾಜ್ಯದ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯರು ಇದರಲ್ಲಿ ಪಾಲ್ಗೊಳ್ಳುವರು. ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಸುವರು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಈ ಸಂದರ್ಭದಲ್ಲಿಯೇ ಮಾಹಿತಿ ನೀಡಲಾಗುವದು, ಯಸಸ್ವಿನಿ, ಬಿಪಿಎಲ್ ಕಾರ್ಡ ಹೊಂದಿದವರಿಗೆ ಉಚಿತವಾಗಿ ಸೇವೆ ಇದ್ದು ಅದನ್ನು ತಿಳಿಸಿಕೊಡಲಾಗುವದು. ಕಾರ್ಯಕ್ರಮಕ್ಕೆ ಯುವಚೇತನ ಶಿವರಾಜ ತಂಗಡಗಿ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗ ನೀಡಿದೆ. ಕೊಪ್ಪಳ ಜಿಲ್ಲೆಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಆಸಕ್ತರು ನವೆಂಬರ್ ೨೮ ರ ಬೆಳಿಗ್ಗೆ ೯ ರೊಳಗೆ ಬಂದು ತಮ್ಮ ಹೆಸರನ್ನು ಕಲಾವತಿ ಮುನಿರಾಬಾದ್ ಮೊ: ೯೮೮೦೯೫೪೮೧೩, ನರಸಿಂಹಮೂರ್ತಿ ಮೊ : ೯೪೮೦೩೩೯೯೮೧ ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.

Advertisement

0 comments:

Post a Comment

 
Top