PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೨೬ (ಕ ವಾ) ಯುನಿಸೆಫ್‌ನ ದೆಹಲಿ ಮತ್ತು ಹೈದ್ರಾಬಾದಿನ ಅಧಿಕಾರಿಗಳ ತಂಡ ಕೊಪ್ಪಳ ತಾಲೂಕಿನ ಕಲ್‌ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಯ ಮೇಲೆ ನಿರ್ಮಿಸಲಾಗಿರುವ ಶೌಚಾಲಯ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
     ಯುನಿಸೆಫ್‌ನ ದೆಹಲಿ ಪ್ರತಿನಿಧಿ ಫಾರೂಖ್, ದೀಪಕ್, ಹೈದ್ರಾಬಾದಿನ ಯುನಿಸೆಫ್ ಮುಖ್ಯಸ್ಥೆ ರೂಥ್, ಎಸ್.ಆರ್. ನಲ್ಲಿ, ಬೆಂಗಳೂರಿನ ಯುನಿಸೆಫ್ ಅಧಿಕಾರಿ ರಾಮಸ್ವಾಮಿ ಕೃಷ್ಣನ್ ಅವರು ತಾಲೂಕಿನ ಕಲ್‌ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಗಳ ಮೇಲೆ ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ವಯಕ್ತಿಕ ಶೌಚಾಲಯಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿತು.  ಅಲ್ಲಿನ ಇದೇ ಗ್ರಾ.ಪಂ. ವ್ಯಾಪ್ತಿಯ ಕೆಂಚನಡೋಣಿ ಗ್
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಜಿಲ್ಲೆಯಲ್ಲಿ ವಯಕ್ತಿಕ ಶೌಚಾಲಯಗಳ ಪ್ರಗತಿ ಹಾಗೂ ಕಾರ್ಯ ಸಾಧನೆಗೆ ಅನುಸರಿಸಿದ ಕ್ರಮಗಳ ಕುರಿತು ವಿವರಣೆ ನೀಡಿ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಾಧಿಸಲು ನೆರವಾಯಿತು.  ಈಗಾಗಲೆ ಜಿಲ್ಲೆಯಲ್ಲಿ ೩೯ ಗ್ರಾಮಗಳು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಅಧಿಕೃತವಾಗಿ ಘೋಷಣೆಯಾಗಿದೆ.  ಇನ್ನೂ ೧೦೦ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲಾಗಿದ್ದು, ಅಧಿಕೃತವಾಗಿ ಘೋಷಣೆಯಾಗುವುದು ಬಾಕಿ ಇದೆ ಎಂದು ಯುನಿಸೆಫ್ ತಂಡಕ್ಕೆ ವಿವರಣೆ ನೀಡಿದರು.     ಕಲ್ ತಾವರಗೇರಾ ಗ್ರಾ.ಪಂ. ಅಧ್ಯಕ್ಷ ಬಂಡೆಪ್ಪ ಕತ್ತಿ, ಜಿ.ಪಂ. ಯೋಜನಾ ನಿರ್ದೇಶಕ ಹಾಗೂ ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ, ಪಿಡಿಓ ಶರಣಯ್ಯ ಸಸಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಮಕ್ಕೂ ಭೇಟಿ ನೀಡಿದ ಯುನಿಸೆಫ್ ತಂಡ, ಸ್ವಚ್ಛ ಭಾರತ ಮಿಷನ್ ಅಡಿ, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಕೆಂಚನಡೋಣಿ ಘೋಷಣೆಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.  ನಂತರ ಕಲ್‌ತಾವರಗೇರಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿದರು.

Advertisement

0 comments:

Post a Comment

 
Top