ಕೊಪ್ಪಳ ನ. ೨೫. ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ ಸೇವಾ ಮನೋಭಾವದಿಂದಲೇ ಸಾಗಬೇಕು ಅದು ಬಲವಂತದಿಂದ ಬರುವಂತಹದಲ್ಲ ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ತಾಲೂಕ ಸ್ಥಳಿಯ ಸಂಸ್ಥೆ ವತಿಯಿಂದು ಜರುಗಿದ ಕೊಪ್ಪಳ ತಾಲೂಕ ಮಟ್ಟದ ಸ್ಕೌಟರ್‍ಸ್ ಗೈಡರ್‍ಸ್ ಸಮಾವೇಶವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸ್ಕೌಟಿಂಗ್ ಚಳುವಳಿ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಬೇಕು, ಇದು ಸೇವೆಯ ಪ್ರಮುಖ ಭಾಗವೆಂದರು.ಅಧ್ಯಕ್ಷತೆವಹಿಸಿಕೊಂಡಿದ್ದ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕೆಲವೇ ತಿಂಗಳಲ್ಲಿ ಕೊಪ್ಪಳ ಜಿಲ್ಲೆ ಮತ್ತು ತಾಲೂಕ ರಾಜ್ಯಕ್ಕೆ ಮಾದರಿಯಾಗುವಂತೆ ಶಿಕ್ಷಕರು ಶ್ರಮಿಸಬೇಕು, ಸರಕಾರ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಆರಂಭಿಸುವದನ್ನು ಕಡ್ಡಾಯ ಮಾಡಿ ಆದೇಶ ನೀಡಿ ೫ ವರ್ಷಗಳಾದವು ಆದರೂ ಪ್ರಗತಿ ಕಂಡಿಲ್ಲ, ಇನ್ನಾದರೂ ವೇಗವಾಗಿ ಘಟಕ ಆರಂಭಿಸಬೇಕು ಎಂದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್. ಎಸ್. ಪಾಟೀಲ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಹೆಚ್. ಎಂ. ಸಿದ್ರಾಮಸ್ವಾಮಿ, ರಾಜ್ಯ ಮಕ್ಕಳ ಕಲ್ಯಾಣ ಕ್ಷೇತ್ರದ ಪ್ರಶಸ್ತಿ ಪುರಸ್ಕೃತ ಮೆಹಬೂಬ ಕಿಲ್ಲೆದಾರ, ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಪ್ಪ ಕೊಟ್ನೆಕಲ್‌ರವರಿಗೆ ಸನ್ಮಾನಿಸಲಾಯಿತು. ಅದೇ ರೀತಿ ಶಿಕ್ಷಕರಾದ ಟಿ.ಆರ್.ಬೆಲ್ಲದ ಮತ್ತು ಶ್ರೀಮತಿ ವೈದ್ಯರಿಗೆ ಗುರುವಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಸರ್ವ ಶಿಕ್ಷಣ ಅಭಿಯಾನದ ಉಪಸಮನ್ವಯಾಧಿಕಾರಿ ವೆಂಕಟೇಶ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುದರ್ಶನ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಿಮಠ ತಾಲೂಕ ಉಪಾಧ್ಯಕ್ಷೆ ಗಂಗಮ್ಮ ಹಟ್ಟಿ ಮುಂತಾದವರು ಇದ್ದರು.
ತರಬೇತಿ ಆಯುಕ್ತ ಯರಿಯಣ್ಣ ಮತ್ತು ಜಿಲ್ಲಾ ಸಂಘಟನಾ ಆಯುಕ್ತ ಶಿವಕುಮಾರ ತರಬೇತಿ ನೀಡಿದರು, ತಾಲೂಕ ಕಾರ್ಯದರ್ಶಿ ಎಂ. ಕೆ. ಹಿರೇಮಠ ಸ್ವಾಗತಿಸಿದರು, ಉಮೇಶ ಸುರ್ವೆ ನಿರೂಪಿಸಿದರು ಕೊನೆಯಲ್ಲಿ ಪ್ರಭಾಕರ ವಂದಿಸಿದರು.

0 comments:
Post a Comment