PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-20-  ರಾಜ್ಯದಲ್ಲಿ  ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ರಾಜ್ಯದಲ್ಲಿ ಭೀಕರ ಬರಗಾಲ ಇದೆ ಆದರೆ ಅದರ ತಕ್ಕಂತೆ ನಿರ್ವಹಣೆ ಮಾಡುವ ಕಾರ್ಯ ಇಲ್ಲದಂತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದರು.
    ಅವರು ಗುರುವಾರ ಸಂಜೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ತೋಟದ ಮನೆ ಆವರಣದಲ್ಲಿ ಏರ್ಪಡಿಸಿದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಯಚೂರು ಕೊಪ್ಪಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು. ಈಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿದೇರ್ಶಕನಾಗಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈ ಭಾಗದ ಜನರಿಗೆ ಚಿರಪರಿಚಿತ ವ್ಯಕ್ತಿಯಾಗಿರುವ ಸಿವಿ ಚಂದ್ರಶೇಖರರವರು ನಮ್ಮ ರಾಯಚೂರು ಕೊಪ್ಪಳ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಪಕ್ಷದ ಅದಿಕೃತ ಅಭ್ಯರ್ಥಿಯಗಿದ್ದು ಎಲ್ಲರಿಗೆ ಸಂತೋಷವನ್ನುಂಟುಮಾಡಿದೆ, ಅವರ ಗೆಲುವು ಖಚಿತ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಎಂದು ರಾಯಚೂರು ಕೊಪ್ಪಳ ವಿಧಾನ ಪರಿಷತ್ತಿನ ನಿಯೋಜಿತ ಬಿ.ಜೆ.ಪಿ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಹೇಳಿದರು.
  ಗ್ರಾಮ ಅಭಿವೃದ್ದಿಯಾರೆ ದೇಶ ಅಭಿವೃದ್ದಿಯಾದೀತು ಈ ಚುನಾವಣೇಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ಸಾಧನೆ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮನವರಿಕೆಮಾಡಿ ಈ ಚುನಾವಣೆಯಲ್ಲಿ ಮತ ಕೇಳುವುದಾಗಿ ಹೇಳಿದ ಅವರು ಮುಂಬರುವ ಎಲ್ಲಾ ಚುನಾವಣೆಯಲ್ಲಿ ಬಿ
ಜೆಪಿ ಗೆಲ್ಲಲಿದೆ ಎಂದು ಹೇಳಿದ ಅವರು ಜಿಲ್ಲೆಯ ಸಿಂಗಟಾಲೂರು ಏತ ನೀರಾವರಿ, ಕೃಷ್ಣಾ ಬಿ.ಸ್ಕೀಂ ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರ್ಳಕ್ಷ್ಯ ದೋರಣೇ ತಾಳಿದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಪ್ರಾರಂಭ ಗೊಂಡಿರುವುದು ನಮ್ಮ ಬಿಜೆಪಿ ಸರ್ಕಾರದ ಕೊಡುಗೆ ಜಿಲ್ಲೆಯಲ್ಲಿ ಕಾಂಗ್ರೆಸದ ಸಚಿವರು ಮತ್ತು ಶಾಸಕರು ಮರಳು ಮಾಫೀಯಾ ದಂಧೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಜನg ಹಿತ ಬೇಕಾಗಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಟೀಕಿಸಿದರು. ಬಿಜೆಪಿ ನಿಯೋಜಿತ ಅಭ್ಯರ್ಥಿ ಸಿವಿ ಚಂದಶೇಖರ  ಮಾತನಾಡಿ ತಮಗೆ ಬೆಂಬಲಿಸಿ ಗೆಲುವು ತಂದುಕೊಡುವಂತೆ ಮನವಿಮಾಡಿಕೊಂಡರು. ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಕವಲೂರು. ವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮುಖಂಡರಾದ ಸಂಗಪ್ಪ ಒಕ್ಕಳದ, ವೀರಪಾಕ್ಷಪ್ಪ ಅಗಡಿ, ನಾಗನಗೌಡ ಡಂಬರಹಳ್ಳಿ, ಗವಿಸಿದ್ದಪ್ಪ, ಕಂದಾರಿ, ಮಾರುತೆಪ್ಪ ಹಲಗೇರಿ, ಪೀರಾಹುಸೇನ ಹೋಸಹಳ್ಳಿ, ವಿ.ಎಂ. ಭೂಸನೂರಮಠ, ರಾಘವೇಂದ್ರ ಪಾನಗಂಟಿ, ಅಪ್ಪಣ್ಣ ಪದಕಿ, ತೋಟಪ್ಪ ಕಾಮನೂರು  ವಕ್ತಾರ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ಮಲ್ಲಪ್ಪ ಬೇಲೆರಿ, ಕರಿಯಪ್ಪ ಮೇಟಿ, ಮಲ್ಲಣ್ಣ ಡಿ. ಖಾಜಾವಲಿ, ಬೆಟ್ಟದಪ್ಪ ರಾಯಚೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top