PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನ. ೨೪, ೨೦೧೬ ನೇ ಫೇಬ್ರುವರಿ ತಿಂಗಳಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ನಾನು ಸ್ಪರ್ಧಿಸಲಿದ್ದು ನನ್ನ ನಿರ್ಧಾರ ಅಚಲ, ಯಾರ ಮುಲಾಜಿಗೂ, ಮತ್ತು ಒತ್ತಡಕ್ಕೆ ಮಣಿಯುವದಿಲ್ಲ. ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ನಾನು ಮಾಡಿದ ಅಲ್ಪಸ್ವಲ್ಪ ಕೆಲಸಗಳನ್ನು ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ದಿಸುವ ಸದಾಸೆಯದೊಂದಿಗೆ ಕಳೆದ ವಾರ ಪತ್ರಿಕಾ ಗೋಷ್ಠಿಮಾಡಿ ಸ್ಪರ್ದಿಸುವುದಾಗಿ ಹೇಳಿಕೆ ನೀಡಿದ್ಧೆ.
ಆದಾಗ್ಯೂ ಸಾಹಿತ್ಯ ಬಳಗದ ಹೆಸರಿನಲ್ಲಿ ಹೇಳಿಕೆ ನೀಡಿರುವ ಶೇಖರಗೌಡ ಮಾಲಿಪಾಟೀಲ ಮತ್ತು ವಿಠ್ಠಪ್ಪ ಗೋರಂಟ್ಲಿಯವರು ತಮ್ಮ ಪೂರ್ವ ನಿರ್ಧಾರಿತ ನಿರ್ಣಯವನ್ನು ತರಾತುರಿಯಲ್ಲಿ ಸಭೆಯ ನೆಪದಲ್ಲಿ ಒಮ್ಮತ ಅಭ್ಯರ್ಥಿಎಂದು ಬಿಂಬಿಸಿದ್ದು, ಸಭೆಯಲ್ಲಿ ಭಾಗವಹಿಸಿದ ಇನ್ನಿತರರ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ ಸರ್ವಾದಿಕಾರಿ ದೋರಣೆಯನ್ನು ತಾಳಿ ಈ ಧ್ವಂದ ನಿರ್ಣಯವನ್ನು ಕೈಗೊಂಡಿದ್ದು ಎಷ್ಟು ಸರಿ? ಸಭೆಯನ್ನು ಕರೆದಿದ್ದು ಅಭ್ಯರ್ಥಿ


ಯ ಆಯ್ಕೆಗಾಗಿಯೇ? ಎಂದು ಸಭೆಗೆ ಆಹ್ವಾನಿಸಿದವರಿಗೆ ಯಾಕೆ ತಿಳಿಸಲಿಲ್ಲ? ನಿಮ್ಮ ಆತ್ಮವನ್ನು ಪ್ರಶ್ನಿಸಿಕೊಳ್ಳಿ. ಆದರೆ ನಾಯಕರ ಹೆಸರಿನಲ್ಲಿ ತಾವು ಭಾಗವಹಿಸಿದ ಜಿಲ್ಲೆಯ ನಾಲ್ಕು ತಾಲೂಕಿನ ೬೦ ಕ್ಕೂ ಹೆಚ್ಚು ಕಸಾಪ ಗೌರವಾನ್ವಿತ ಸದಸ್ಯರ ನಿರ್ದಾರವನ್ನು ಪರಿಗಣಿಸಿಲ್ಲ. ತರಾತುರಿಯಲ್ಲಿ ಜಿ.ಎಸ್. ಗೋನಾಳವರನ್ನು ಮನ ಒಲಿಸುವ ಪ್ರಸ್ತಾಪವನ್ನು ಪ್ರಸ್ತಾಪಿಸಿದ್ದು ಎಷ್ಟು ಸರಿ? ನಿಮಗೆ ಒಮ್ಮತದ ಅಭ್ಯರ್ಥಿಎಂದು ಮೊದಲೇ ನಿರ್ಣಯಿಸಿಕೊಂಡವರು ನಡೆದುಕೊಳ್ಳುವ ರೀತಿ ಇದೇನಾ? ಸೌಜನ್ಯಕ್ಕಾದರೂ ಜಿ.ಎಸ್. ಗೋನಾಳರ ಅಭಿಪ್ರಾಯ ಕೇಳಬೇಕಿತ್ತಲ್ಲವೇ? ಎಲ್ಲಿತ್ತು ನಿಮ್ಮ ದೊಡ್ಡತನ? ದೊಡ್ಡವರು ಆಡುವ ಪರಿ ಇದೇನಾ? ನಾನೊಬ್ಬ ಸ್ಪರ್ದಾಳು ಎಂಬುದು ನಿಮಗೆ ಗೊತ್ತಿರಲಿ. ಕಸಾಪದ ಅಜೀವ ಸದಸ್ಯರ, ಹಿರಿಯ ಯುವ ಬರಹಗಾರರು ಮತ್ತು ಕನ್ನಡ ಪರ ಹೋರಾಟಗಾರರ, ಶಿಕ್ಷಕರ, ಮಹಿಳೆಯರ, ಚಿಂತಕರ, ಬುದ್ದಿಜೀವಿಗಳ, ಪತ್ರಕರ್ತರ, ಗ್ರಾಮೀಣ ಭಾಗದ ಸಾಹಿತ್ಯಾಸಕ್ತರ ಮತ್ತು ಕಲಾವಿದರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ವಂಚಿತರ ದ್ವನಿಯಾಗಿ ಈ ಬಾರಿ ನಾನು ಚುನಾವಣೆಗೆ ಸ್ಪರ್ದಿಸುತ್ತೇನೆ. ಯಾವುದೇ ಕಾರಣಕ್ಕೂ ಮತ್ತು ಯಾರ ಒತ್ತಡಕ್ಕೂ ನನ್ನ ನಿರ್ಧಾರದಲ್ಲಿ ಬದಲಾಣೆ ಇಲ್ಲ ಎಂದು ಜಿ.ಎಸ್. ಗೋನಾಳ ತಿಳಿಸಿದ್ದಾರೆ.    

Advertisement

0 comments:

Post a Comment

 
Top