PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-೨೬- ಸೋಮವಾರ ತುಂಗಭದ್ರಾ ನದಿ ನೀರು ಕಲುಷಿತಗೊಂಡಿದ್ದು ಅದನ್ನು ಕೊಪ್ಪಳ ಜನತೆಗೆ ಪೂರೈಸುತ್ತಿರುವ ನಗರಸಭೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿರುದ್ಧ ಇಂದು ಗಡಿಯಾರ ಕಂಬದಲ್ಲಿ (ಜವಾಹರ ರಸ್ತೆ) ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
 ಕೊಪ್ಪಳ ಜಿಲ್ಲಾ ಕೇಂದ್ರವಾಗಿ ಎರಡು ದಶಕಗಳು ಉರುಳಿದರೂ ಸಹ ಕೊಪ್ಪಳ ನಗರದಲ್ಲಿ ಇಂದಿಗೂ ಮೂಲ ಸೌಲಭ್ಯಗಳ ಕೊರತೆ ಕಾಣಬಹುದು. ಉತ್ತಮ ರಸ್ತೆಗಳಿಲ್ಲ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಇಲ್ಲ, ಎಲ್ಲಾ ಕೊರತೆಗಳಾಗಿಯೇ ಉಳಿದಿವೆ. ಮಿಗಿಲಾಗಿ ಅತ್ಯಂತ ಮೂಲ ಅವಶ್ಯಕತೆಯಾದ ಶುದ್ಧ ಕುಡಿಯುವ ನೀರು ಪೊರೈಕೆಯಾಗದೆ ಜನರು ನಿತ್ಯವು ನಗರ ಸಭೆಗೆ ಹಿಡಿ ಶಾಪ ಹಾಕುವಂತಾಗಿದೆ. ಕಳೆದ ೨೦ ದಿನಗಳಿಂದ ಕೊಪ್ಪಳ ನಗರಕ್ಕೆ ಅತ್ಯಂತ ಕಲುಷಿತ ಹಾಗೂ ವಾಸನೆಯುಳ್ಳ ನೀರು ಸರಬರಾಜು ಮಾಡುತ್ತಿರುವುದು, ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ತರುವಂತಹ ನೀರನ್ನು ನಗರ ಸಭೆಯವರು ಪೋರೈಸುತ್ತಿದ್ದಾರೆ. ಈ ನೀರು ಸ್ಥಾನ ಮಾಡುವುದಕ್ಕಾಗಲಿ ಅಡುಗೆ ಮಾಡುವುದಕ್ಕಾಗಲಿ ಯೋಗ್ಯಕರ ವಾಗಿಲ್ಲ.
ಈ ಬಗ್ಗೆ ನಗರಸಭೆ ಅಧ್ಯಕ್ಷರಿಗಾಗಲಿ, ಸದಸ್ಯರಿಗಾಗಲಿ, ಪೌರಾಯುಕ್ತರಿಗಾಗಲಿ ಮತ್ತು ಜಿಲ್ಲಾಡಳಿತಕ್ಕಾಗಲಿ ಕೀಂಚಿತ್ತು ಕಾಳಜಿ ಇಲ್ಲ. ನೀರು ಶುದ್ಧಿಕರಿಸಲು ಲಕ್ಷಂತರ ರೂಪಾಯಿ ಅನುದಾನ ಬಂದರೂ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತವಾಗಲಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಕೂಡಲೆ ಶುದ್ದ ಕುಡಿಯುವ ನೀರಿಗಾಗಿ ಉಗ್ರ ಹೋರಾಟವನ್ನು  ಹಮ್ಮಿಕೊಳ್ಳಲಾಗುತ್ತದೆ  ಎಂದು ರಾಜ್ಯ ಸಂಚಾಲಕರಾದ ವಿಜಯಕುಮಾರ ಕವಲೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಮೇಶ ಪಟ್ಟೇದಾರ ರವರು, ಲಿಖಿತ ರೂಪದಲ್ಲಿ ೧ ವಾರದಲ್ಲಿ ಸ್ವಚ್ಚ ನೀರನ್ನು ಪೋರೈಸಲಾಗುವದೆಂದು ಲಿಖಿತ ವಾಗಿ ಬರೆದುಕೊಟ್ಟಿರುತ್ತಾರೆ.
ಈ  ಸಂದರ್ಭದಲ್ಲಿ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ, ಜಿಲ್ಲಾಧ್ಯಕ್ಷ ಪೂರಖಾನ್ ಶೇಖ್, ಆನಂದ ಮಡಿವಾಳರ, ಬಶೀರ ಅಹ್ಮದ್ ಪಲ್ಟನ್, ಎಸ್.ಜಿ,.ಎಮ್ ಹುಸೇನ್, ರವಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top