ಕೊಪ್ಪಳ ೨೬
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷರಾದ ಎನ್. ತಿಪ್ಪಣ್ಣನವರು ವೀರಶೈವ/ಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಧರ್ಮವಾಗಿದೆ. ದ್ವೇಷಕ್ಕೆ ನಮ್ಮ ಧರ್ಮದಲ್ಲಿ ಸ್ಥಾನವಿಲ್ಲ. ದಯೆ ಮಾತ್ರ ನಮ್ಮ ಮೂಲಮಂತ್ರ. ಬಸವಣ್ಣನವರ ತತ್ವಗಳನ್ನು ಅನುಷ್ಠಾನಗೊಳ್ಳಲು ಸಕಲರೂ ಪ್ರಯತ್ನಿಸಬೇಕಾಗಿದೆ. ರಾಜ್ಯದಾದ್ಯಂತ ವೀರಶೈವ/ಲಿಂಗಾಯತ ಪ್ರತಿಭೆಗಳಿಗೆ ಸೂಕ್ತ ಪುರಸ್ಕಾರ, ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕಾಗಿ ೧ ಕೋಟಿಯಷ್ಟು ಹಣವನ್ನು ವಿನಿಯೋಗಿಸಿ, ಪ್ರತಿಭೆಗಳಿಗೆ ಹಂಚಲಾಗುತ್ತಿದೆ. ಮಕ್ಕಳು ಅಹಂಕಾರ ಬೆಳೆಸಿಕೊಳ್ಳದೇ, ತಂದೆ-ತಾಯಿ, ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಮಕ್ಕಳಿಗೆ ನೈತಿಕ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣವೂ ಅನಿವಾರ್ಯವಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ನಡುವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಮಹಾಸಭೆಯು ಹಮ್ಮಿಕೊಂಡ ಈ ಪ್ರತಿಭಾ ಪುರಸ್ಕಾರ ಸ್ವಾಗತಾರ್ಹವೆಂದು ಹೇಳಿದರಲ್ಲದೇ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ನಮಗೆ ಕಪ್ಪುಚುಕ್ಕೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪರಣ್ಣ ಮುನವಳ್ಳಿಯವರು ಮಾತನಾಡಿ ಶೈಕ್ಷಣಿಕ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ವೀರಶೈವ/ಲಿಂಗಾಯತ ಧರ್ಮದ ಕೊಡುಗೆ ಅಪಾರವಾಗಿದೆ. ಕೆ.ಎಲ್.ಇ.ಯಂತಹ ಸಂಸ್ಥೆ ನಮಗೆಲ್ಲರಿಗೂ ಹೆಮ್ಮೆ ತರುವಂತಹ ಸಂಸ್ಥೆ. ಎನ್. ತಿಪ್ಪಣ್ಣನವರ ಸಮಾಜಮುಖಿ ಕಾರ್ಯಗಳಿಂದ ನಮ್ಮ ಧರ್ಮ ಮತ್ತು ಸಮಾಜ ಎತ್ತರಕ್ಕೆ ಬೆಳೆಯುತ್ತಿದೆ. ಮಹಾಸಭೆಯ ಸದಸ್ಯತ್ವ ಅಭಿಯಾನ ಕೊಪ್ಪಳ ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಆಗಲು ನಾನು ಶ್ರಮಿಸುತ್ತೇನೆ ಎಂದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ದ್ವಿತೀಯ ಪರೀಕ್ಷೆಗಳಲ್ಲಿ ಶೇ. ೯೦ ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ೨೨ ವಿದ್ಯಾರ್ಥಿಗಳಿಗೆ ನಗದು ಹಣ, ಪ್ರಶಸ್ತಿ ಪತ್ರ ಸೇರಿದಂತೆ ಪುರಸ್ಕಾರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಾಸಭೆಯ ಕೊಪ್ಪಳ ತಾಲೂಕಾ ಹಾಗೂ ಜಿಲ್ಲಾ ಘಟಕಗಳ ವತಿಯಿಂದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಮತ್ತು ರಾಷ್ಟ್ರೀಯ ಯುವ ಘಟಕದ ಕಾರ್ಯದರ್ಶಿ ಇಂದ್ರೇಶ ಮತ್ತು ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಇವರನ್ನು ಬಸವರಾಜ ಬಳ್ಳೊಳ್ಳಿ, ಗುರುರಾಜ ಹಲಗೇರಿ, ಪರಣ್ಣ ಮುನವಳ್ಳಿಯವರು ಸನ್ಮಾನಿಸಿದರು.
ಆರಂಭದಲ್ಲಿ ಕು. ವಚನಶ್ರೀ ವಚನ ಪ್ರಾರ್ಥನೆ ನೆರವೇರಿಸಿದರು. ಮಹಾಸಭೆಯ ಕೊಪ್ಪಳ ತಾಲೂಕಾ ಘಟಕದ ಅಧ್ಯಕ್ಷ ಗುರುರಾಜ ಹಲಗೇರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಹಾಸಭೆಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ. ಐಗೋಳ ಮಾತನಾಡಿದರು. ಮಹೇಶ ಬಳ್ಳಾರಿ ಮತ್ತು ವೀರೇಶ ಕೊಪ್ಪಳ ನಿರೂಪಿಸಿದರು. ಕೊನೆಯಲ್ಲಿ ರಾಜೇಶ ಸಸಿಮಠ ವಂದಿಸಿದರು.
ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆ (ರಿ) ಬೆಂಗಳೂರು ಆಶ್ರಯದಲ್ಲಿ, ಕೊಪ್ಪಳ ಜಿಲ್ಲಾ ಮತ್ತು ತಾಲೂಕಾ ಘಟಕಗಳ ಸಂಯೋಗದಲ್ಲಿ ವೀರಶೈವ/ಲಿಂಗಾಯತ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ದ್ವಿತೀಯ ಪರೀಕ್ಷೆಗಳಲ್ಲಿ ಶೇ. ೯೦ ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷರಾದ ಎನ್. ತಿಪ್ಪಣ್ಣನವರು ವೀರಶೈವ/ಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಧರ್ಮವಾಗಿದೆ. ದ್ವೇಷಕ್ಕೆ ನಮ್ಮ ಧರ್ಮದಲ್ಲಿ ಸ್ಥಾನವಿಲ್ಲ. ದಯೆ ಮಾತ್ರ ನಮ್ಮ ಮೂಲಮಂತ್ರ. ಬಸವಣ್ಣನವರ ತತ್ವಗಳನ್ನು ಅನುಷ್ಠಾನಗೊಳ್ಳಲು ಸಕಲರೂ ಪ್ರಯತ್ನಿಸಬೇಕಾಗಿದೆ. ರಾಜ್ಯದಾದ್ಯಂತ ವೀರಶೈವ/ಲಿಂಗಾಯತ ಪ್ರತಿಭೆಗಳಿಗೆ ಸೂಕ್ತ ಪುರಸ್ಕಾರ, ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕಾಗಿ ೧ ಕೋಟಿಯಷ್ಟು ಹಣವನ್ನು ವಿನಿಯೋಗಿಸಿ, ಪ್ರತಿಭೆಗಳಿಗೆ ಹಂಚಲಾಗುತ್ತಿದೆ. ಮಕ್ಕಳು ಅಹಂಕಾರ ಬೆಳೆಸಿಕೊಳ್ಳದೇ, ತಂದೆ-ತಾಯಿ, ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಮಕ್ಕಳಿಗೆ ನೈತಿಕ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣವೂ ಅನಿವಾರ್ಯವಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ನಡುವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಮಹಾಸಭೆಯು ಹಮ್ಮಿಕೊಂಡ ಈ ಪ್ರತಿಭಾ ಪುರಸ್ಕಾರ ಸ್ವಾಗತಾರ್ಹವೆಂದು ಹೇಳಿದರಲ್ಲದೇ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ನಮಗೆ ಕಪ್ಪುಚುಕ್ಕೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪರಣ್ಣ ಮುನವಳ್ಳಿಯವರು ಮಾತನಾಡಿ ಶೈಕ್ಷಣಿಕ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ವೀರಶೈವ/ಲಿಂಗಾಯತ ಧರ್ಮದ ಕೊಡುಗೆ ಅಪಾರವಾಗಿದೆ. ಕೆ.ಎಲ್.ಇ.ಯಂತಹ ಸಂಸ್ಥೆ ನಮಗೆಲ್ಲರಿಗೂ ಹೆಮ್ಮೆ ತರುವಂತಹ ಸಂಸ್ಥೆ. ಎನ್. ತಿಪ್ಪಣ್ಣನವರ ಸಮಾಜಮುಖಿ ಕಾರ್ಯಗಳಿಂದ ನಮ್ಮ ಧರ್ಮ ಮತ್ತು ಸಮಾಜ ಎತ್ತರಕ್ಕೆ ಬೆಳೆಯುತ್ತಿದೆ. ಮಹಾಸಭೆಯ ಸದಸ್ಯತ್ವ ಅಭಿಯಾನ ಕೊಪ್ಪಳ ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಆಗಲು ನಾನು ಶ್ರಮಿಸುತ್ತೇನೆ ಎಂದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ದ್ವಿತೀಯ ಪರೀಕ್ಷೆಗಳಲ್ಲಿ ಶೇ. ೯೦ ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ೨೨ ವಿದ್ಯಾರ್ಥಿಗಳಿಗೆ ನಗದು ಹಣ, ಪ್ರಶಸ್ತಿ ಪತ್ರ ಸೇರಿದಂತೆ ಪುರಸ್ಕಾರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಾಸಭೆಯ ಕೊಪ್ಪಳ ತಾಲೂಕಾ ಹಾಗೂ ಜಿಲ್ಲಾ ಘಟಕಗಳ ವತಿಯಿಂದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಮತ್ತು ರಾಷ್ಟ್ರೀಯ ಯುವ ಘಟಕದ ಕಾರ್ಯದರ್ಶಿ ಇಂದ್ರೇಶ ಮತ್ತು ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಇವರನ್ನು ಬಸವರಾಜ ಬಳ್ಳೊಳ್ಳಿ, ಗುರುರಾಜ ಹಲಗೇರಿ, ಪರಣ್ಣ ಮುನವಳ್ಳಿಯವರು ಸನ್ಮಾನಿಸಿದರು.
ಆರಂಭದಲ್ಲಿ ಕು. ವಚನಶ್ರೀ ವಚನ ಪ್ರಾರ್ಥನೆ ನೆರವೇರಿಸಿದರು. ಮಹಾಸಭೆಯ ಕೊಪ್ಪಳ ತಾಲೂಕಾ ಘಟಕದ ಅಧ್ಯಕ್ಷ ಗುರುರಾಜ ಹಲಗೇರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಹಾಸಭೆಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ. ಐಗೋಳ ಮಾತನಾಡಿದರು. ಮಹೇಶ ಬಳ್ಳಾರಿ ಮತ್ತು ವೀರೇಶ ಕೊಪ್ಪಳ ನಿರೂಪಿಸಿದರು. ಕೊನೆಯಲ್ಲಿ ರಾಜೇಶ ಸಸಿಮಠ ವಂದಿಸಿದರು.
0 comments:
Post a Comment