PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-26- ನಗರಕ್ಕೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿರುವ ತುಂಗಭದ್ರಾ ನೀರು ಮುಂಡರಗಿ ಬಳಿ ಇರುವ ಕಾರ್ಖಾನೆಗಳ ತ್ಯಾಜ್ಯದಿಂದ ನದಿ ನೀರು ಕಲುಷಿತವಾಗುತ್ತಿದ್ದು, ತುಂಗಭದ್ರ ನೀರು ಸಂಪೂu ಹಸಿರು ಬಣ್ಣಕ್ಕೆ ತಿರುಗಿದೆ. ದುರ್ವಾಸನೆ ಯಿಂದ ಕೂಡಿದೆ. ನಲ್ಲಿಗಳಲ್ಲಿ ಬರುವ ನೀರು ಚರಂಡಿ ನೀ
    ನದಿಯಲ್ಲಿ ನೀರು ಹಸಿರಾಗಿದ್ದು ಜಿಲ್ಲಾ ಆಡಳಿತ ಮತ್ತು ಸಂಬಂದ ಪಟ್ಟ ಅಧಿಕಾರಿಗಳು ನಗರಸಭೆ ಆರೋಗ್ಯ ಮತ್ತು ಪರಿಸರ ಮಾಲಿನ್ಯ ಇಲಾಖೆ ತಕ್ಷಣವೇ ತುಂಗಭದ್ರಾ ನದಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕು. ಕೊಪ್ಪಳ ಜನತೆಯ ಆರೋಗ್ಯ ಕಾಪಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕ ಆಗ್ರಹಿಸುತ್ತದೆ.
    ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್, ಸಂಘಟನಾ ಕಾರ್ಯದರ್ಶಿ ಮಹ್ಮದ್ ಅಲೀಮುದ್ದೀನ್, ನಜೀರ್ ಮೊಹಮ್ಮದ್, ಮೆಹಬೂಬ್ ಮುನ್ನಾರ್, ನಜೀರ್ ಹುಡಾ, ನಾಸೀರ್ ಮಾಳೆಕೊಪ್ಪ, ಮೌಲಾಹುಸೇನ್ , ಗೌಸಸಾಬ್ ಕಿಲ್ಲೆದಾರ್, ಮಾರ್ದಾನ್ ಅಲಿ ಮಂಡಲಗೇರಿ ಮುಂತಾದವರು ಉಪಸ್ಥಿತರಿದ್ದರು.
ರಿನಂತಿದ್ದು, ಶುದ್ಧಿಕರಿಸಿದರೂ ದುರ್ವಾಸನೆ ತೊಲಗುತ್ತಿಲ್ಲ, ತುಂಗಭದ್ರಾ ನೀರನ್ನ ಬಳಸಿ ಬೇಸಯಿಸಿದ ಆಹಾರವೂ ಕೆಟ್ಟ ವಾಸನೆ ಬರುತ್ತದೆ. ನದಿಯಲ್ಲಿ ಮೀನುಗಳು ಸಾಯುತ್ತಿವೆ. ಈ ನೀರು ಕುಡಿದ ಅದೇಷ್ಟೋ ಜನರು ನಾನಾ ರೋಗಗಳಿಂದ ಬಳಲುತ್ತಿದ್ದಾರೆ.

Advertisement

0 comments:

Post a Comment

 
Top