PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೩೧ (ಕರ್ನಾಟಕ ವಾರ್ತೆ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೨ ರಲ್ಲಿ (ಕಬಡ್ಡಿ,ಖೋಖೋ, ಟೇಬಲ್ ಟೆನ್ನಿಸ್)  ಕ್ರೀಡೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ನ. ೧೩ ಮತ್ತು ೧೪ ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಗುಂಪು ಸ್ಪರ್ದೆಯಲ್ಲಿ  ಪ್ರಥಮ ಸ್ಥಾನ ಪqದು ವಿಜೇತರಾದಂತಂಹ ಕ್ರೀಡಾ ಪಟುಗಳು ಮಾತ್ರ ಭಾಗವಹಿಸಲು ಅವಕಾಶ ವಿರುತ್ತದೆ.
     ಈ ಸ್ಪರ್ದೆಯಲ್ಲಿ ಭಾಗವಹಿಸುವ ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳು ನ. ೧೩ ರಂದು ಬೆಳಿಗ್ಗೆ ೧೧.೦೦ ಗಂಟೆಯೊಳಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಕ್ರೀಡಾ ಪಟುಗಳು ತಮ್ಮ ಜಿಲ್ಲಾ ತಂಡದ ಧ್ವಜದೊಂದಿಗೆ ಸಂಜೆ ೪.೩೦ ಘಂಟೆಗೆ ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಮತ್ತು ಭಾಗವಹಿಸುವ ಕ್ರೀಡಾ ಪಟುಗಳು ನಿಗದಿತ ನಮೂನೆಯಲ್ಲಿ ತಮ್ಮ ಜನ್ಮ ದಿನಾಂಕ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾ ಪಟುಗಳಿಗೆ ಕಾರವಾರ ತಾಲ್ಲೂಕಿನಲ್ಲಿ ಸಾಮಾನ್ಯ ವಸತಿ ಮತ್ತು ಊಟೋಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುವು ಐ.ಡಿ ಕಾರ್ಡ ಮತ್ತು ತಮ್ಮ ಬ್ಯಾಂಕ ಖಾತೆಯ ನಂಬರ ಮತ್ತು ವಿಳಾಸದೊಂದಿಗೆ ಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು.
     ಜಿಲ್ಲೆಯಿಂದ ಭಾಗವಹಿಸುವ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಕೊಪ್ಪಳ ದಿಂದ ಕಾರವಾರ ತಾಲ್ಲೂಕಿನವರೆಗೆ ಹೋಗಿ ಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಈ ವೆಚ್ಚವನ್ನು ಕ್ರೀಡಾಕೂಟ ಮುಕ್ತಾಯವಾದ ದಿನದಂದು ಜಿಲ್ಲೆಯ ಮೇಲ್ಚಿಚಾರಕರಿಂದ ಪಾವತಿಸುವ ವ್ಯವಸ್ಥೆ ಮಾಡಲಾಗುವುದೆಂದು, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ :೦೮೫೩೯-೨೦೧೪೦೦ ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ.
ರಾಜ್ಯೋತ್ಸವ ಕನ್ನಡ ಚಲನಚಿತ್ರ ಕಡ್ಡಾಯ ಪ್ರದರ್ಶನಕ್ಕೆ ಡಿ.ಸಿ. ಸೂಚನೆ.
ಕೊಪ್ಪಳ ಅ. ೩೧ (ಕ ವಾ) ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ನವೆಂಬರ್ ತಿಂಗಳಲ್ಲಿ ಒಂದು ವಾರ ಕಾಲ ಕಡ್ಡಾಯವಾಗಿ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸೂಚನೆ ನೀಡಿದ್ದಾರೆ.
     ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಲ್ಲಿ ನ. ೦೧ ರಿಂದ ೦೭ ರವರೆಗೆ ಜಿಲ್ಲೆಯ ಎಲ್ಲ ಚಿತ್ರಮಂದಿರಗಳು ಹಾಗೂ ವಿಡಿಯೋ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು.  ಅಲ್ಲದೆ ಸರ್ಕಾರದ ಆದೇಶದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ಬಾರಿಸು ಕನ್ನಡ ಡಿಂಡಿಮವ ವಿಡಿಯೋ ಹಾಡನ್ನು ನವೆಂಬರ್ ತಿಂಗಳು ಪೂರ್ತಿ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಪ್ರದರ್ಶನ ಮಾಡುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಸೀಮೆಎಣ್ಣೆ ಸುರಿದು ಪತ್ನಿ ಕೊಲೆ : ಆರೋಪಿ ಪತಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ ಅ. ೩೧ (ಕ ವಾ) ಪತ್ನಿಯ ಮೈಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಸಾಯಿಸಿದ ಆರೋಪಿ ಪತಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
     ಗಂಗಾವತಿಯ ವಿರುಪಾಪುರ ನಗರದ ಗಾಳೆಪ್ಪ ತಂದೆ ದೊಡ್ಡ ಗಾಳೆಪ್ಪ ಎಂಬಾತನೆ, ತನ್ನ ಪತ್ನಿ ಗಿರಿಜಮ್ಮ ಅವರ ಮೈಮೇಲೆ ಸೀಮೆಎಣ್ಣೆ ಸುರಿದು ಸಾಯಿಸಿ, ಇದೀಗ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.  ಕಳೆದ ೨೦೧೪ ರ ಮಾರ್ಚ್ ೧೮ ರಂದು ರಾತ್ರಿ ಮನೆಗೆ ಬಂದ ಗಾಳೆಪ್ಪ, ತನ್ನ ಪತ್ನಿ ಗಿರಿಜಮ್ಮಳೊಂದಿಗೆ ಜಗಳಕ್ಕಿಳಿದು, ನಂತರ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ.  ಸುಟ್ಟ ಗಾಯಗಳಿಂದ ಚೇತರಿಸಿಕೊಳ್ಳದೆ, ಗಿರಿಜಮ್ಮ ಒಂದು ತಿಂಗಳ ನಂತರ ಮೃತಪಟ್ಟಳು.  ಗಂಗಾವತಿ ನಗರ ಠಾಣೆಯ ಹೆಡ್‌ಕಾನ್ಸ್‌ಟೆಬಲ್ ಬಸವರಾಜ ಅವರು ಮೃತಳ ಮರಣಪೂರ್ವ ಹೇಳಿಕೆ ಪಡೆದಿದ್ದರು.  ನಗರಠಾಣೆ ಕಾಳಿಕೃಷ್ಣ ಅವರು ಪ್ರಕರಣದ ತನಿಖೆ ಕೈಗೊಂಡು, ಆರೋಪಿ ಗಾಳೆಪ್ಪನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು, ಆರೋಪಿಯ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಭಾ.ದಂ.ಸಂ. ಕಲಂ ೩೦೨ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ೧೦ ಸಾವಿರ ರೂ. ದಂಡ.  ಭಾ.ದಂ.ಸಂ. ಕಲಂ ೪೯೮(ಎ) ಅಪರಾಧಕ್ಕಾಗಿ ೨ ವರ್ಷ ಸಾದಾ ಶಿಕ್ಷೆ ಹಾಗೂ ೦೨ ಸಾವಿರ ರೂ.ಗಳ ದಂಡ ವಿಧಿಸಿದ್ದು, ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಅವರು ಸರ್ಕಾರದ ಪರವಾಗಿ ವಾದಿಸಿದ್ದರು.

Advertisement

0 comments:

Post a Comment

 
Top