PLEASE LOGIN TO KANNADANET.COM FOR REGULAR NEWS-UPDATES

ಸರ್ದಾರ ವಲ್ಲಬಾಯಿ ಪಟೇಲರ ಜನ್ಮದಿನವನ್ನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಭಾರತ ಸ್ವತಂತ್ರಗೊಂಡಾಗ ಅನೇಕ ಪ್ರಾಂತಗಳಿಂದ ಕೂಡಿತ್ತು ಅಂತಹ ಸಂಧರ್ಭದಲ್ಲಿ ರಾಷ್ಟ್ರವನ್ನು ಒಗ್ಗೂಡಿಸಿ ಹಿರಿಮೆ ಸರ್ದಾರವಲ್ಲಬಾಯಿ ಪಟೇಲರಿಗೆ ಸಲ್ಲುತ್ತದೆ ಎಂದು ಹಿರಿಯ ಉಪನ್ಯಾಸಕ ಕೆ.ನಾಗಬಸಯ್ಯ ಹೇಳಿದರು.
ಅವರು ಸ್ಥಳಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮಹಾವಿದ್ಯಾಲಯದಲ್ಲಿ ನೆಡದ ರಾಷ್ಟ್ರೀಯ ಏಕತಾ ದಿನಾಚರಣೆ ಯನ್ನು ಸ್ಥಳಿಯ ಸಂಸ್ಥೆಗಳಾದ ನೆಹರು ಯುವ ಕೇಂದ್ರ ಕೊಪ್ಪಳ ಹಾಗೂ ವಂದೇಮಾತರಂ ಸೇವಾ ಸಂಘ,ಪ್ರೇರಣಾ ಯುವತಿ ಸಾಂಸ್ಕೃತಿಕ ಶಿಕ್ಷಣ ಸೇವಾ ಸಂಸ್ಥೆ ಕೊಪ್ಪಳ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತ ಆಶ್ರಯದಲ್ಲಿ ನೆಡದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು ಹೈದ್ರಬಾದ ಕರ್ನಾಟಕವು ಕೂಡ ನಿಜಾಂನ ಆಳ್ವಿಕಿಯಿಂದ ಮುಕ್ತಿಗೊಂಡ ಸಂಧರ್ಭದಲ್ಲಿ ಈ ಭಾಗವನ್ನು ನಿಜಾಂನು ಪಾಕಿಸ್ತಾನಕ್ಕೆ ಸೇರಿಸುವ ಹುನ್ನಾರ ನೇಡಸಿದ್ದ ಆ ಸಂಧರ್ಭದಲ್ಲಿ ದೇಶದ ಗೃಹಮಂತ್ರಿಯಾಗಿದ್ದ ಪಟೇಲರು ಸೈನಿಕರನ್ನು ಕರೆತಂದು ಈ ಭಾಗಕ್ಕೆ ಸ್ವತಂತ್ರವನ್ನು ತಂದುಕೊಟ್ಟರು ಅಂತಹ ಮಹಾನ ವ್ಯಕ್ತಿಗಳ ಆದರ್ಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದ ಸಂಪಾದಕ ರುದ್ರಪ್ಪ ಮಾತನಾಡಿ ಸರ್ದಾರವಲ್ಲಭಾಯಿ ಪಟೇಲರು ದೇಶದ ಏಕತೆಗೆ ಶ್ರಮಿಸಿದ ಮಹಾನ ವ್ಯಕ್ತಿ ಅವರು ದೇಶದ ಅಭಿವೃದ್ದಿಗೆ
ನಂತರ ಮಾತನಾಡಿದ ಉಪನ್ಯಾಸಕರು ಆದ ಎಸ್.ಎಂ.ಪಾಟೀಲ ಮಾತನಾಡಿ ಗಾಂಧಿಜೀಯಂತೆ ದೇಶದ ಸೇವೆಯನ್ನು ಸರ್ದಾರ ವಲ್ಲಭಾಯಿ ಪಟೇರು ದೇಶಕ್ಕೆ ಸೇವೆಯನ್ನು ಮಾಡಿದ್ದಾರೆ ಅವರ ಜೀವನ ಸಾಧನೆಯನ್ನು ಸರಕಾರ ಜನರಿಗೆ ತಿಳಿಯುವ ಹಾಗೆ ಮಾಡುವದು ಸರಕಾರದ ಕರ್ತವ್ಯವಾಗಿದೆ ಎಂದರು.
ಪ್ರಸ್ತಾವಿಕವಾಗಿ  ವಂದೇ ಮಾತರಂ ಸೇವಾ ಸಂಘದ ಅಧ್ಯಕ್ಷ ರಾಕೇಶ್ ಕಾಂಬ್ಳೇಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮುಖ್ಯಾಧಿಕಾರಿ ಹಾಗೂ ಉಪನ್ಯಾಸಕ ಬಸವರಾಜ ಎಸ್.ಎಂ ,ಉಪನ್ಯಾಸಕಿ ಉಷಾದೇವಿ ಹಿರೇಮಠ,ಉಪನ್ಯಾಸಕ ಸೈಯದ ಅವರು ಸೇರಿದಂತೆ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾಥಿನೀಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ಗೀರಿಜಾ ಸಂಘಡಿಗರು ಮಾಡಿದರು ಸ್ವಾಗತವನ್ನು ವಿದ್ಯಾರ್ಥಿ ಗಂಗನಗೌಡ ಭರಮಗೌಡ್ರ ಮಾಡಿದರು,ಪುಸ್ಪಾರಣೆಯನ್ನು ಮಂಜುನಾಥ ಅರಕೇರಿ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ವಾಯ್.ಜಿ.ಕಬ್ಬಣವರ್ ಮಾಡಿದರು.
ಪ್ರಮಾಣಿಕವಾಗಿ ಸೇವೆ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟ ಮಾಡುವದರ ಮುಖಾಂತರ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.

Advertisement

0 comments:

Post a Comment

 
Top