ಕೊಪ್ಪಳ,ಅ.೦೫ ನಗರದ ಕೋಟೆ ರಸ್ತೆ ಸೈಲಾನ್ ಪುರ ಮತ್ತು ಗೌರಿ ಅಂಗಳ ಓಣಿ ಬಳಿ ಇರುವ ಹಜರತ್ ಖಾಜಾ ;ಸೈಯದ್ ಶಾಹ ಸಾನಿ ದರ್ವೇಶ ಅಲಿ ಅಲಾ ಮಹ್ಮದ ಮಹ್ಮದುಲ್ ಹುಸೇನಿ ಚಿಷ್ತಿ ಉಲ್‌ಖಾದ್ರಿ ಲಿಂಗ ಬಂದ್ ಜಗದ್ಗುರು ಜಾಗಿರ್ದಾರ್, ಅಲ್ ಮಾರೂಫ್ ಖಾದರ್ ಲಿಂಗಾ ಖಾದರವಲಿ (ರ.ಅ) ಕೊಪ್ಪಳ ರವರ ಉರುಸೆ ಶರೀಫ್ ಆಚರಣೆ ಮೂರು ದಿನಗಳ ಕಾಲ ಸಂಭ್ರಮದಿಂz ಕೌತಾಳಂ ದರ್ಗಾದ ಜಗದ್ಗುರು ಖಾದರಲಿಂಗಾ ಬಾಬಾ ಪೀರ ಸಾಹೇಬ್ ನೇತೃತ್ವದಲ್ಲಿ ಉರುಸ್ ಆಚರಣೆ ಜರುಗಿತು. ರವಿವಾರ ರಾತ್ರಿ ೮.೩೦ಕ್ಕೆ ಗಂಧ, ಸೋಮುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಉರುಸೆ ಶರೀಫ್ ಆಚರಣೆ ಜರುಗಿತು. ನಾಳೆ ಮಂಗಳವಾರ ಬೆಳಗಿನ ಜಾವ ಸಮಯದಲ್ಲಿ ಜಿಯಾರತ್ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ಕೊಪ್ಪಳ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಆಂಧ್ರ ಪ್ರದೇಶದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಕೌತಾಳ ದರ್ಗಾದ ಕೌತಾಳಂ ದರ್ಗಾದ ಪೀಠಾಧಿಪತಿ ಹಜರತ್ ಖಾಜಾ,ಸೈಯದ್ ಶಾಹ ಸಾನಿ ದರ್ವೇಶ ಅಲಿ ಅಲಾ ಮಹ್ಮದ ಮಹ್ಮದುಲ್ ಹುಸೇನಿ ಚಿಷ್ತಿ ಉಲ್‌ಖಾದ್ರಿ ಲಿಂಗ ಬಂದ್ ಜಗದ್ಗುರು ಜಾಗಿರ್ದಾರ್, ಅಲ್ ಮಾರೂಫ್ ಖಾದರ್ ಲಿಂಗಾ ಬಾಬಾ ಸಾಹೇಬ್ ಪೀರ್‌ರವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಸಾಹೇಬ್ ಪೀರ್ ರವರ ಆಶಿರ್ವಾದ ಪಡೆದುಕೊಂಡ ಈ ಉರುಸ್ ಆಚರಣೆಯಲ್ಲಿ ಕೌತಾಳಂ ದರ್ಗಾದ ಜಗದ್ಗುರು ಪೀಠಾಧಿಪತಿ ರವರ ಸುಪುತ್ರ ಹಜರತ್ ಖಾಜಾ,ಸೈಯದ್ ಶಾಹ ಸಾನಿ ದರ್ವೇಶ ಅಲಿ ಅಲಾ ಮಹ್ಮದ ಮಹ್ಮದುಲ್ ಹುಸೇನಿ ಚಿಷ್ತಿ ಉಲ್‌ಖಾದ್ರಿ ಲಿಂಗ ಬಂದ್ ಖಾಜಾ ಮೈನುದ್ದೀನ್ ಸಾಹೇಬ್, ಮೌಲಾನಾ ಮೊಹಮ್ಮದ್ ನೂರುಲ್ಲಾ ತಹಶೀನ್ ತಸ್ಕೀನ್, ಕೆ.ಎಂ.ಸಯ್ಯದ್, ಪೀರಾ ಹುಸೇನ್ ಹೊಸಳ್ಳಿ, ಜಿಲಾನ್ ಸಾಬ್ ಕೌತಾಳ, ಸಯ್ಯದ್ ನಿಜಾಮುದ್ದೀನ್ ಕೊಪ್ಪಳ, ಅಬ್ದುಲ್ ಅಜೀಜ್, ಸೀರಾಜ್ ಮನಿಯಾರ, ಖಾಜಾವಲಿ ಮನಿಯಾರ್ ಸೇರಿದಂತೆ ಕೊಪ್ಪಳ ಮತ್ತು ಸುತ್ತಮುತ್ತಲಿನ ಭಕ್ತ ಸಮೂಹ ಉರುಸ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹಾಗೂ ವಿಶೇಷ ಸಾಮೂಹಿಕ ಪ್ರಾರ್ಥನೆ,
ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮ ಜರುಗಿ ಭಕ್ತರು ಶ್ರೀಗಳವರ ಆಶೀರ್ವಾದ ಪಡೆದರು.
0 comments:
Post a Comment