ಕೊಪ್ಪಳ-05- ಕೊಪ್ಪಳ ಜಿಲ್ಲೆಯಲ್ಲಿ ಕನಿಷ್ಠ ೨೫ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದುವರೆಗೆ ಕೇವಲ ಇಬ್ಬರಿಗೆ ಮಾತ್ರ ಪರಿಹಾರ ಕೊಟ್ಟಿರುವುದನ್ನು ನೋಡಿದರೆ ಜಿಲ್ಲ ಆಡಳಿತ ಜನರ ಪಾಲಿಗೆ ಇದ್ದರು ಸತ್ತಂತೆ ಎಂದು ಯುವ ಬರಹಗಾರ ಸ.ಶರಣಪ್ಪ ಪಾಟೀಲ ಕರಮುಡಿ ಆಪಾದಿಸಿದ್ದಾರೆ. ಇಂದು ನಮ್ಮ ಜಿಲ್ಲೆಯಲ್ಲಿ ತೀವ್ರ ಬರಗಾಲ ಬಿದ್ದಿದ್ದು ಮುಖ್ಯವಾಗಿ ಇಲ್ಲಿಯ ಜನರು ಸದಾ ಮಳೇಯಾದಾರಿತ ಪ್ರದೇಶದಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದು ಸಾಲಸೂಲ ಮಾಡಿ ಬೇಸಾಯ ಮಾಡಿ ಬೆಳೆ ಬಾರದೆ ಸಾಲದ ಸುಳಿಗೆ ಸಿಲುಕಿಕೊಂಡು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು ಜಿಲ್ಲೆಯಲ್ಲಿ ವಾರಕ್ಕೊಬ್ಬರಂತೆ ರೈತರು ತಮ್ಮ ಅಮೂಲ್ಯವಾದ ಜೀವಕ್ಕೆ ತಾವೇ ತಿಲಾಂಜಲಿ ಕೊಟ್ಟುಕೊಳ್ಳುತ್ತಿದ್ದು ಇಂತಹ ಸಂದಿಗ್ದ ಪರಸ್ಥಿತಿ ಜಿಲ್ಲೆಯ ಜನರಿಗೆ ಒದಗಿ ಬಂದಿದ್ದು ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸರಕಾರದ ಮೇಲೆ ಒತ್ತಡ ತಂದು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಲ್ಲಿ ವಿಫಲವಾಗಿದ್ದು ಇಂತಹ ಜನಪ್ರತಿನಿಧಿಗಳು ಇರುವುದು ಜಿಲ್ಲೆಯ ಜನತೆಯ ಘೋರ ದುರಂತವಾಗಿದ್ದು ವಿಷಾದಕರ ಇನ್ನು ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಇಲ್ಲದಿರುವುದು ಜಿಲ್ಲೆಯ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು ಹಿಗಾಗಿ ಜಿಲ್ಲೆಯಲ್ಲಿ ಹೇಳುವರು ಕೇಳುವರು ಯಾರು ಇಲ್ಲದಂತಾಗಿದ್ದು ಇನು ಜಿಲ್ಲೆಯಲ್ಲಿ ಆಡಳಿತ ಪಕ್ಷದ ವೈಪಲ್ಯಗಳ ವಿರುದ್ದ ದ್ವನಿ ಎತ್ತಬೇಕಾಗಿದ್ದ ವಿರೋಧ ಪಕ್ಷಗಳು ಗಾಢ ನಿದ್ರೇಯಲ್ಲಿ ಇರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜಿಡಿಯಸ್, ಪಕ್ಷಗಳ ನಾಯಕರುಗಳ ನಡುವೆ ಬವಿಷ್ಯ ಮಿಲಾಫಿ ರಾಜಕೀಯ ನಡೆದಿರಬಹುದು ಎಂಬ ಅನುಮಾನ ಜಿಲ್ಲೆಯ ಜನರದ್ದಾಗಿದೆ. ಒಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆಡಿಳಿತ ವರ್ಗದ ನಿರ್ಲಕ್ಷ ಮುಂದುವರೆದರೆ ಮುಂಬರುವ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಯುವ ಬರಹಗಾರ ಸ. ಶರಣಪ್ಪ ಪಾಟೀಲ್ ಕರಮುಡಿ ಎಚ್ಚರಿಸಿದ್ದಾರೆ.
Subscribe to:
Post Comments (Atom)
0 comments:
Post a Comment