PLEASE LOGIN TO KANNADANET.COM FOR REGULAR NEWS-UPDATES

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ದಿನಾಂಕ ೦೭-೦೯-೨೦೧೫ ರಂದು ೨೦೧೫-೧೬ನೇ ಸಾಲಿನ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ ಜರುಗಿತು.
ಪ್ರಸ್ತುತ ವರ್ಷದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತ ನಿವೃತ್ತ ಪ್ರಾಚಾರ್ಯರರಾದ ಶ್ರೀಯುತ ಸಿ.ವಿ.ಜಡಿಯವರು, ವಿದ್ಯಾರ್ಥಿಗಳು ವಿದ್ಯಾರ್ಥಿಯ ಜೀವನದಲ್ಲಿಯೇ ಭವಿಷ್ಯದ ಬದುಕಿಗೆ ಬೇಕಾಗುವ ದೈಹಿಕ, ಬೌದ್ಧಿಕ ಹಾಗೂ ನೈತಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಜಾನಪದ ಸಾಹಿತ್ಯದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ನೈತಿಕ, ಸಾಂಸ್ಕೃತಿಕ ಅಂಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವಕ್ಕೆ ವಿಶೇಷ ಮೆರಗು ಬರುತ್ತದೆ. ಭಾರತ ಜಾನಪದ ಸಾಂಸ್ಕೃತಿಯ ದೃಷ್ಠಿಯಿಂದ ಸಮೃದ್ಧವಾಗಿರುವುದಿರಂದ ಆ ಎಲ್ಲಾ ಜಾನಪದ ಸಾಂಸ್ಕೃತಿಗಳನ್ನು ಮುನ್ನೆಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳಲ್ಲಿ  ನೈತಿಕ ಮತ್ತು ಸಾಂಸ್ಕೃತಿಕ ಅಂಶಗಳು ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದ್ದು ಇತ್ತೀಚಿನ ಪಾಶ್ಚೀಮಾತ್ಯ ಅನುಕರಣೆಯಿಂದ ವಿದ್ಯಾರ್ಥಿಗಳು ಎಲ್ಲಾ ದೃಷ್ಠಿಯಿಂದ ನಿಶಕ್ತರಾಗುತ್ತಿದ್ದಾರೆ ಎಂದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಮೆರಿಟ್ ಆಧಾರಿತ ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ಆಯ್ಕೆಮಾಡಿ ವರ್ಗ ಪ್ರತಿನಿಧಿಗಳನ್ನಾಗಿ ಪ್ರತಿಜ್ಞಾ ವಿಧಿಯ
ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಶ್ರೀ ಶಂಕರ ಬಿದರಿಯವರು ಕಾಣಿಕೆ ಕೊಟ್ಟ ಪುಸ್ತಕಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಲೆಂದು ವಿತರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಸ್ತುತ ವರ್ಷದ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಪ್ರೊ.ಎನ್.ಪ್ರತಾಪ ಬಾಬುರಾವ್, ಒಕ್ಕೂಟದ ರಚನೆ, ಧ್ಯೇಯಗಳು ಹಾಗೂ ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಂ.ಎಸ್.ದಾದ್ಮಿಯವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಲಘುವಾಗಿ ಪರಿಗಣಿಸದೇ ಗಂಭೀರವಾಗಿ ಪರಿಗಣಿಸಿಕೊಂಡು ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯವು ಒದಗಿಸಿದ ಬಹುವಿಧದ ಅವಕಾಶಗಳನ್ನು, ಸೇವೆಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ.ಅರುಣ ಕರಮರಕರ ನಿರ್ವಹಿಸಿದರೇ ವಂದನಾರ್ಪಣೆಯನ್ನು ಪ್ರೊ. ಬಿ.ಡಿ.ಕೇಶವನ್ ನಿರ್ವಹಿಸಿದರು.

ನ್ನು ಮಾನ್ಯ ಪ್ರಾಚಾರ್ಯರು ಬೋಧಿಸಿದರು.

Advertisement

0 comments:

Post a Comment

 
Top