PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ-07 ತಾಲೂಕಿನ ಮಂಗಳೂರಿನ ಅಂಬೇಡ್ಕರ್ ನಗರ ಸ.ಹಿ.ಪ್ರಾ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಯಮನೂರಪ್ಪ ಭಜಂತ್ರಿ ಶಾಲೆಗೆ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ಜುಲೈನಿಂದ ಅಗಷ್ಟ ೮ ನೇ ತಾರೀಖನವರೆಗೂ ಇಲಾಖೆ ಅನುಮತಿ ಪಡೆಯದೇ ಗಳಿಕೆ ರಜೆ ಹಾಕಿದ್ದಾರೆ. ಶಾಲೆಯ ಬಗ್ಗೆ ಸಂಪೂರ್ಣ ಬೇಜವಾಬ್ದಾರಿ ಹೊಂದಿದ್ದಾರೆ ಎಂದು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ (ಎಸ್) ಬಣ ಪತ್ರಿಕಾ ಪ್ರಕಟಣೆಯಲ್ಲಿ ದೂರಿದೆ. ಅನುಮತಿ ಪಡೆಯದೇ ಯಮನೂರಪ್ಪ ಭಜಂತ್ರಿ ಪದೇ ಪದೇ ಗೈರು ಹಾಜರಿ ಕುರಿತು ಮಾನ್ಯ ಇ.ಸಿ.ಒ.(ಶಿಕ್ಷಣ ಸಂಯೋಜಕ) ಸಿ.ಆರ್.ಪಿ. (ಸಮೂಹ ಸಂಪನ್ಮೂಲ ವ್ಯಕ್ತಿಗಳು) ಇವರು ಶಾಲೆಗೆ ಭೇಟಿ ನೀಡಿ ದಿನಾಂಕ: ೧೬-೦೭-೨೦೧೫ ರಂದು ವರದಿ ಸೂಕ್ತ ಕ್ರಮಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಯಲಬುರ್ಗಾ ಇವರಿಗೆ ವರದಿ ಸಲ್ಲಿಸಿದರು ಇದುವರೆಗೂ ಯಾವುದೇ ಕ್ರಮ ಗೊಂಡಿರುವುದಿಲ್ಲ.
ಅಲ್ಲದೇ ಇವರು ೨೦೧೩ ರಲ್ಲಿ ಕಟ್ಟಿಸಿದ ೨ ಶಾಲಾ ಕೊಠಡಿಗಳು ಸಂಪೂರ್ಣ ಕಳಪೆಮಟ್ಟದ್ದಾಗಿವೆ. ಈಗಾಗಲೇ ಆ ಕೊಠಡಿಗಳ ಕಿಟಕಿ ಮತ್ತು ಬಾಗಿಲುಗಳು ಕಿತ್ತು ಹೋಗಿವೆ. ಕೆಲವು ಮುರಿದು ಹೋಗಿವೆ. ೨೦೧೨ ರಿಂದ ಇದುವರೆಗೂ ಬಿಡುಗಡೆಯಾದ ಶಾಲಾ ಅನುದಾನ ಇತ್ಯಾದಿಗಳನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ.  ಶಾಲೆಯ ಶೌಚಾಲಯವಂತೂ ನೋಡ ತೀರದು. ಸಂಪೂರ್ಣ ಗಬ್ಬುನಾರುತ್ತಿದೆ. ಇಲ್ಲಿನ ೧ರಿಂದ ೭ ನೇ ತರಗತಿಯವರೆಗೆ ೧೬೦ ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಶೌಚಾಲಯ ತೊಂದರೆಯಿಂದ  ವಿದ್ಯಾರ್ಥಿನಿಯರು ತೀವ್ರ ಸಂಕಷ್ಟ ಎದುರಿ

ಸುತ್ತಿದ್ದಾರೆ. ಇದುವರೆಗೆ ಒಂದು ಸಾರಿಯೂ ಶೌಚಾಲಯ ದುರಸ್ಥಿ ಕಾಯ್ ಮಾಡಿಸಿಲ್ಲ. ಹಾಗೂ ಸ್ವಚ್ಛಗೊಳಿಸಿಲ್ಲ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮಾಡಲು ತಟ್ಟೆ ತರುವುದಕ್ಕಾಗಿ ಗ್ರಾಮದ ಶಿಕ್ಷಣ ಪ್ರೇಮಿಗಳು ೧ ವರ್ಷದ ಹಿಂದೆ ಕೊಟ್ಟ ದೇಣಿಗೆಯ ೫೦೦೦=೦೦ ಹಣವನ್ನು ತಟ್ಟೆ ತರದೇ ಸಂಪೂರ್ಣ ನುಂಗಿ ಹಾಕಿದ್ದಾರೆ. ಶಾಲಾ ಕಪ್ಪು ಹಲಗೆಗಳಿಗೆ ಬಣ್ಣ ಹಚ್ಚಿಸಿಲ್ಲ. ನಲಿಕಲಿ ಕೊಠಡಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲ. ಬಣ್ಣದಿಂದ ತಟ್ಟೆ ಹಾಕಿಸಿಲ್ಲ. ಬೇಕಾದ ಸಾಮಗ್ರಿ ಕೋಡಿಸಿಲ್ಲ. ಹೀಗಾಗಿ ನಲಿಕಲಿ ಕೇಂದ್ರಗಳು ಹಾಳು ಹಾಳು ಹೊಡೆಯುತ್ತಿವೆ. ಮಕ್ಕಳ ಕಲಿಕಾ ಪ್ರಗತಿಗೆ ತಡೆ ಉಂಟಾಗುತ್ತಿದೆ. ಇಂತಹ ಬೇಜವಾಬ್ದಾರಿಯುಳ್ಳ ಶಿಕ್ಷಕರು ನಮ್ಮ ಊರಿಗೆ ಬೇಡ ಕೂಲಡೆ ಅವರನ್ನು ಅಮಾನತ್ತುಗೊಳಿಸಿ ಇವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆಂದು ತಿಳಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ (ಎಸ್) ಬಣದ ಮಂಜುನಾಥ ಸಿದ್ದನಳ್ಳಿಮ ಮುತ್ತುರಾಜ ತಳವಾರ, ವಿರೇಂದ್ರ ಈಳಿಗೇರ, ಉಮೇಶ ಕಲ್ಲೂರ, ಮಂಜುನಾಥ ಬೇವಿನಾಳ ಎಚ್ಚರಿಸಿದ್ದಾರೆ.

Advertisement

0 comments:

Post a Comment

 
Top