PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-05- ಶಿಕ್ಷಕ ಸಂಬಳಕ್ಕಾಗಿ ದುಡಿಯದೇ ಅದನ್ನು ಪೂಜೆಯೆಂದು ಪರಿಗಣಿಸಬೇಕು. ಶಿಕ್ಷಕನ ಕೆಲಸ ಪೂಜೆಯಂತೆ. ವಿದ್ಯಾರ್ಥಿಗಳನ್ನು ಮತ್ತು ವಿಷಯಗಳನ್ನು ಪ್ರೀತಿಸಿ. ಇದರಿಂದ ವಿದ್ಯಾರ್ಥಿಗಳ ಪ್ರೀತಿ ಗೌರವದ ಜೊತೆಗೆ ವಿಷಯದಲ್ಲಿ ಗಟ್ಟಿತನ ಸಿಗುತ್ತದೆ  ಎಂದು ಹಿರಿಯ ಕತೆಗಾರ, ಸಾಹಿತಿ  ಅಬ್ಬಾಸ್ ಮೇಲಿನಮನಿ ಹೇಳಿದರು. ಅವರಿಂದು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಎಸ್.ರಾಧಾಕೃಷ್ಣರ ಭಾವಚಿತ್ರಕ್ಕೆ ಪುಷ್ಪಾರ್ಪಣೇ ಮಾಡುವ ಮೂಲಕ ಉದ್ಘಾಟಿಸಿ
 ಇನ್ನೋರ್ವ ಅತಿಥಿ ಪತ್ರಕರ್ತ ಎನ್.ಎಂ.ದೊಡ್ಡಮನಿ ಮಾತನಾಡಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪವಿದ್ದಂತೆ, ನಿತ್ಯ ಕಲಿಕೆಯೇ ನಿರಂತರ ಜ್ಞಾನದ ಮೂಲ. ಶಿಕ್ಷಕರು ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಶರತ್ ಹೆಗಡೆ   ಶಾಲೆ ಎಂಬುವುದು ಹಕ್ಕಿಯ ಗೂಡು ಅದನ್ನು ಬೆಳಗಿಸುವರು ವಿದ್ಯಾರ್ಥಿಗಳಾಗಬೇಕು. ಅದಕ್ಕೆ ದಾರಿದೀಪವಾಗಿ ಶಿಕ್ಷಕರಿರುತ್ತಾರೆ. ಮೊದಲು ಗುರು ತಾಯಿ ನಂತರದಲ್ಲಿ ಸಮಾಜದ ಒಬ್ಬ ಒಬ್ಬ ಸಮರ್ಥ ಮೇದಾವಿ ಪ್ರಜೆಯನ್ನಾಗಿ ಮಾಡುವವರು ಶಿಕ್ಷಕರು ಎಂದು ಹೇಳಿದರು. ವೇದಿಕೆಯ ಮೇಲೆ ನಗರಸಭಾ ಸದಸ್ಯರಾದ ಮಲ್ಲಪ್ಪ ಕವಲೂರ, ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರ ಹಾಗೂ ಶಾಲೆಯ ಸರ್ವ ಶಿಕ್ಷಕರು  ಉಪಸ್ಥಿತರಿದ್ದರು ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮಾತನಾಡಿದರು. ಸ್ವಾಗತವನ್ನು ಸಂಗೀತಾ ಹೊಳಗುಂದಿ, ವಂದನಾರ್ಪಣೆಯನ್ನುಉ ಮೇಘನಾ ಮಾಡಿದರು.  ಆಶಾ ಅತ್ತನೂರ  ಕಾರ್ಯಕ್ರಮ ನಿರೂಪಿಸಿದರು.

ದ ಅಬ್ಬಾಸ್ ಮೇಲಿನಮನಿಯವರು  ಶಿಕ್ಷಣವು ಮೌಲ್ಯಮಾಪನವಾಗಿರದೇ ಅದು ಮಾರ್ಗದರ್ಶನವಾಗಿರಬೇಕು ಅದು ಮಕ್ಕಳ ಭವಿಷ್ಯವನ್ನು ಕಟ್ಟುವಂತಿರಬೇಕು ಎಂದು ಹೇಳಿದರು.

Advertisement

0 comments:

Post a Comment

 
Top