PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಸೆ. ೦೮ ಜಗತ್ತಿನಲ್ಲಿ ಅಧರ್ಮವನ್ನು ತೊಡೆದುಹಾಕಿ, ಧರ್ಮವನ್ನು ಸ್ಥಾಪಿಸಲು ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಕೈಗೊಂಡ ರಾಜತಾಂತ್ರಿಕ ನಡೆ ಹಾಗೂ ಚಾಣಾಕ್ಷ ನೀತಿ ಸರ್ವ ಯುಗಕ್ಕೂ ಪ್ರಸ್ತುತವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
     ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ರಾಜನೀತಿಯ ನಿಪುಣನಾಗಿದ್ದ ಶ್ರೀ ಕೃಷ್ಣ, ದ್ವಾಪರ ಯುಗದಲ್ಲಿ ತಾಂಡವವಾಡುತ್ತಿದ್ದ ಅಧರ್ಮವನ್ನು ನಾಶಮಾಡಿ, ಜಗತ್ತಿನಲ್ಲಿ ಧರ್ಮ ಸ್ಥಾಪಿಸುವುದಕ್ಕೆಂದೇ ಅವತಾರವನ್ನೆತ್ತಿದ್ದ.  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾಯಕ ಮಾಡುವುದಷ್ಟೇ ಮನುಷ್ಯನ ಧರ್ಮವಾಗಿದ್ದು, ಅನ್ಯಾಯ ಕಂಡುಬಂದಾಗ, ಅದನ್ನು ನಿರ್ಭೀತಿಯಿಂದ ಎದುರಿಸಬೇಕು ಎನ್ನುವ ತತ್ವವನ್ನು ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವ ನೀತಿಯನ್ನು ಸಾರಿದ್ದನು.  ಶ್ರೀಕೃಷ್ಣನನ್ನು ಪರಿಚಯಿಸುವುದೆಂದರೆ ಸೂರ್ಯನನ್ನು ಜಗತ್ತಿಗೆ ಪರಿಚಯಿಸಿದಂತೆಯೇ ಸರಿ.  ಯುಗಪುರುಷನಾದ ಶ್ರೀಕೃಷ್ಣ, ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ.  ಅನ್ಯಾಯ ವಿಜೃಂಭಿಸುವಾಗ, ನ್ಯಾಯ ಹಾಗೂ ಧರ್ಮ ಸ್ಥಾಪನೆಗೆ ಕುಟಿಲ ತಂತ್ರ ಅನುಸರಿಸುವುದು ತಪ್ಪಲ್ಲ. ನಮ್ಮ ಕರ್ತವ್ಯ ನಾವು ಮಾಡಬೇಕು, ಅದರ ಫಲಾಫಲ ಆ ದೇವರೇ ನಮಗೆ ನೀಡುತ್ತಾನೆ ಎಂದು ಭಗವದ್ಗೀತೆಯಲ್ಲಿ ಸಂದೇಶ ಸಾರಿದ್ದಾನೆ.  ಯಾದವ ಸಮಾಜವು ಹಲವಾರು ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಾಮಾಜಿಕ ನ್ಯಾಯ ಪಡೆಯಲು ಮುಂದಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದರು.
     ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಕನಕಗಿರಿ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಮಾಳೆ ಅವರು,  ಇಡೀ ಮಹಾಭಾರತದ ನಾವಿಕನಾಗಿದ್ದ ಶ್ರೀಕೃಷ್ಣ, ಅಧರ್ಮವನ್ನು ಮಣಿಸಿ, ಧರ್ಮದ ಸ್ಥಾಪನೆ ಮಾಡಲು ಸೂತ್ರ ಹೆಣೆದು,  ಜಾತಿ, ಜನಾಂಗ, ದೇಶವನ್ನು ದಾಟಿ ಇಡೀ ಜಗತ್ತಿನಲ್ಲಿ ಪೂಜಿಸಿಕೊಳ್ಳುವಂತಹ ದೈವವಾಗಿದ್ದಾನೆ ಅಲ್ಲದೆ ಸಮಸ್ತ ಮಾನವ ಕುಲಕ್ಕೆ ಧರ್ಮದ ಪ್ರೇರಣಾ ಶಕ್ತಿ ಶ್ರೀ ಕೃಷ್ಣ.  ಭಗವದ್ಗೀತೆಯು ಇಡೀ ಮನುಕುಲಕ್ಕೆ ನೀಡಿದ ಒಂದು ಮಹಾನ್ ಸಂದೇಶವಾಗಿದ್ದು, ಮಹಾತ್ಮರ ಜಯಂತಿಗಳು ಈ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ. ಅಂತಹ ಮಹಾತ್ಮರ ವಿಚಾರಧಾರೆಗಳನ್ನು ಕೇವಲ ಒಂದು ಸಮುದಾಯಕ್ಕೆ ಮಿತಿಗೊಳಿಸುವುದು
       ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಉಪಾಧ್ಯಕ್ಷ ಬಾಳಪ್ಪ ಬಾರಕೇರ,  ಹೈದ್ರಾಬಾದ್-ಕರ್ನಾಟಕ ಪ್ರದೇಶ ಯಾದವ ಸಮಾಜದ ಅಧ್ಯಕ್ಷ ಪಿ. ಗಾದೆಪ್ಪ, ಜಿಲ್ಲೆಯ ಸಮಾಜದ ಮುಖಂಡರಾದ ರವಿ ಕುರುಗೋಡ, ಯಂಕಣ್ಣ ಬಂಡಿ,  ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ತಹಸಿಲ್ದಾರ್ ಪುಟ್ಟರಾಮಯ್ಯ ಸೇರಿದಂತೆ ನಗರಸಭೆ ಸದಸ್ಯರುಗಳಳು, ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. 
     ಸಮಾರಂಭಕ್ಕೂ ಮುನ್ನ ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಯಿಂದ, ಶ್ರೀ ಕೃಷ್ಣನ ಫೋಟೋ ಸಹಿತ ವೈಭವದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ ಜಿ.ಎಲ್ ಅವರು ಚಾಲನೆ ನೀಡಿದರು.  ಮೆರವಣಿಗೆಯು   ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೂ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡು, ಆಕರ್ಷಕಗೊಳಿಸಿದವು.

ಸೂಕ್ತವಲ್ಲ.   ಜಗತ್ತಿನಲ್ಲಿ ಧರ್ಮಕ್ಕಿಂತಲೂ ಅಧರ್ಮವೇ ಹೆಚ್ಚಾದಾಗ, ಮತ್ತೆ ಹುಟ್ಟಿಬರುವೆನೆಂಬ ಸಂದೇಶವನ್ನು ಶ್ರೀಕೃಷ್ಣ ಮಹಾಭಾರತದಲ್ಲಿ ನೀಡಿದ್ದಾನೆ ಎಂದರು.

Advertisement

0 comments:

Post a Comment

 
Top