PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ- 08- ಭಾರತೀಯ ಜೀವ ವಿಮಾ ನಿಗಮ ಗಂಗಾವತಿ ಶಾಖೆಯಲ್ಲಿ ವಿಮಾ ಸಪ್ತಾಹ ಕಾರ್ಯಕ್ರಮ ಸಮಾರೋಪವನ್ನು ಪಡೆಯಿತು.. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಬಿ.ಜಿ.ಅರಳಿ ವಾಣಿಜ್ಯೋದ್ಯಮಿಗಳು ಕಾರಟಗಿ ಇವರು ಮಾತಾಡುತ್ತಾ, ಬಾರತೀಯ ಜೀವ ವಿಮಾ ನಿಗಮವು ಜನಸಾಮಾನ್ಯರ ಕಲ್ಯಾಣಕ್ಕೋಸ್ಕರ ಕಂಕಣ ಬದ್ಧವಾಗಿದೆ. ಮತ್ತು ದೇಶವನ್ನು ಆರ್ಥಿಕವಾಗಿ ಬಲ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಎಲ್.ಐ.ಸಿ. ಯ ಪ್ರಾಚಾರ್ಯರಾದ ಮಲ್ಲಿಕಾರ್ಜುನರವರು ನಿಗಮದ ಗುರಿ ಉದ್ದೇಶ ಮತ್ತು ಇತಿಹಾಸವನ್ನು ಹೇಳಿದರು. ಹಾಗೆಯೇ ಆಡಳಿತಾಧಿಕಾರಿಗಳಾದ ಸುದರ್ಶನರವರು ಮಾತನಾಡುತ್ತಾ ಪಾಲಸೀ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಇನ್ನೋರ್ವ ಆಡಳಿತಾಧಿಕಾರಿಗಳಾದ ಮಧು ನೇಲಪಟ್ಲ ರವರು ಸಪ್ತಾಹಗಳ ವರದಿಯನ್ನು ವಾಚನ ಮಾಡಿದರು.
    ಈ ಸಪ್ತಾಹದ ಅಂಗವಾಗಿ ನಡೆದ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಗಾಗಿನ ಹಲವು ಸ್ಪರ್ಧೆಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ವಿಶೇಷವಾಗಿ ಕೆಳಗಿನ ಇಬ್ಬರು ವಿದ್ಯಾರ್ಥಿಗಳನ್ನು
ಹತ್ತನೇ ತರಗತಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ .. ಮನೋಜ ಕುಮಾರ್. ತಂದೆ ಅನಿಲ್ ಕುಮಾರ್.
ಕನ್ನಡ ಮಾಧ್ಯಮದಲ್ಲಿ ಓದಿ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ.. ಹುಸೇನ್ ಬೀ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಆಡಳಿತಾಧಿಕಾರಿಗಳಾದ ಹೆಚ.ಸಿ.ಲೋಕೇಶ ವಹಿಸಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ಸ್ವಾಗತವನ್ನು ಗುರುಪ್ರಸಾದ್ ಅಭಿವೃದ್ಧಿ ಅಧಿಕಾರಿಗಳು ಮಾಡಿದರು. ಕುಮಾರಿ ಚೈತ್ರಾ ಮತ್ತು ಚೆಂದನಾ ಗಬ್ಬೂರು ರವರು ವಚನ ಗಾಯನ ಮಾಡಿ ಪ್ರಾರ್ಥಿಸಿದರು. ಪ್ರತಿನಿಧಿಗಳಾದ ನಾಗರಾಜ್ ಬಿ ರವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಬುಳ್ಳಾ, ಜೆ.ಸಿ.ಜಾಧವ್, ಕೆ.ಫಣಿರಾಜ್, ಬಿ.ರಾಮಪ್ಪ, ವೆಂಕಟಕುಮಾರ್, ವಿಜಯವಾಣಿ, ಶ್ರೀಲತಾ, ದೇವಕೀ, ಡಾ||ವಿಜಯಕುಮಾರ, ರಾಮಾಂಜಿನೇಯ, ವೆಂಕೋಬಾ.ಪೋ.ಪಾಟೀಲ್, ಸ್ವಪ್ರಕಾಶ್ ಹಿರೇಮಠ್, ಬಸವರಾಜ್ ಸಜ್ಜನ್, ಕಿಶನ್ ರಾವ್ ತಬರೇಜ್ ಮತ್ತು ಶ್ರೀನಿವಾಸ್ ಅರಸ್ ಉಪಸ್ಥಿತರಿದ್ದರು.


ಗೌರವಿಸಲಾಯಿತು. ಆಡಳಿತಾಧಿಕಾರಿಗಳಾದ ಮರಿಬಸ್ಸಪ್ಪರವರು ಬಹುಮಾನ ವಿತರಣೆಯನ್ನು ನಿರ್ವಹಿಸಿದರು.

Advertisement

0 comments:

Post a Comment

 
Top