PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-30- ತಾಲೂಕಿನ ಕುಣಕೇರಿ ಗ್ರಾಮದ ಶ್ರೀ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚಿಗೆ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕುಣಕೇರಿ ಕ್ಲಸ್ಟರನ ಸಮೂಹ ಸಮಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಪರುಶುರಾಮ ಅಂಟಾಳಮರದ ಸಸಿ ನೆಡುವುದರ ಮೂಲಕ ಚಾಲನೆ ಮಾಡಿ ಮಾತನಾಡುತ್ತ. ಹಚ್ಚ ಹಸುರಿಂದ ಕಂಗೊಳಿಸುವ ಮರಗಳನ್ನು ನಾಶಮಾಡುವುದು ಭೂಮಿ ತಾಯಿಯ ಚರ್ಮವನ್ನು ಕೀಳುವಂಥ ಹೇಯ ಕೃತ್ಯ ಮರಗಳ ಮಾರಣಹೋಮ ಮಾಡುವವರಿಗೆ ಈ ಬಗ್ಗೆ ಅರಿವು ಮೂಡಬೇಕು. ಇಂತಹ ಕಾರ್ಯಕ್ರಮ ಅವರಿಗೆ ಮಾದರಿಯಾಗಬೇಕು ಎಂದರು. ಮುಂದುವರೆದು ಮಕ್ಕಳೆ ಭಾರತದ ಭವಿಷ್ಯ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರ ನಾಶ ತಡೆಯುವುದು ನಿಮ್ಮ ಕೈಯಲ್ಲಿದೆ ಎಂದರು.
    ಮುಖ್ಯ ಅತಿಥಿಗಳಾದ ಸ.ಹಿ.ಪ್ರಾ. ಶಾಲೆ ಕರ್ಕಿಹಳ್ಳಿಯ  ಮುಖ್ಯೋಪಾದ್ಯಾಯ ಮಹಾದೇಶ್ವರನ್ ಪಿ, ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೊಂಪೂರ, ಶಾಂತಪ್ಪ ಕನ್ಯಾಳ, ಕಾರ್ಯದರ್ಶಿ ಈರಮ್ಮ ಸೊಂಪೂರ, ಚೆನ್ನಪ್ಪ ಸಂಗಮೇಶ್ವರ, ಹುಲಿಗೇಶ ಭೋವಿ, ಫಕಿರಮ್ಮ ತಳವಾರ ಉಪಸ್ಥಿತರಿದ್ದರು. ಫಕ್ಕಿರಪ್ಪ ಎನ್. ಅಜ್ಜಿ ನಿರೂಪಿಸಿದರು. ರುಕ್ಮಿಣಿ ವೈ.ಜೆ ಸ್ವಾಗತಿಸಿದರು. ಮರಿಯಮ್ಮ ವಂದಿಸಿದರು.

Advertisement

0 comments:

Post a Comment

 
Top