ಕೊಪ್ಪಳ-30- ಎಸ್.ಕೆ.ಎಲ್.ಇ ಐಟಿಐ ಕಾಲೇಜಿನಲ್ಲಿ ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೆಷನ್) ವತಿಯಿಂದ ೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಧರ್ಶಿಗಳಾದ ರಮೇಶ ವಂಕಲಕುಂಟಿಯವರು ಮಾತನಾಡುತ್ತಾ ಭಗತ್ ಸಿಂಗ್ ರವರು ಹುಟ್ಟದ್ದು ೧೯೦೭ ಸೆ. ೨೮ರಂದು ಇಂದಿನ ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಬಾಂಗ ಎಂಬ ಹಳ್ಳಿಯಲ್ಲಿ. ಬ್ರಿಟಿಷ ಸರಕಾರದ ದಬ್ಬಾಳಿಕೆಯ ವಿರುದ್ದ ಭಾರತದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತ ಹೋರಾಟದ ನಾಯಕರಲ್ಲಿ ಒಬ್ಬರಾಗಿದ್ದರು. ಚಿಕ್ಕ ವಯಸಿನ್ನಲ್ಲೇ ಈ ದೇಶವನ್ನು ಮತ್ತು ಜನರನ್ನು ಪ್ರೀತಿಮಾಡುತ್ತಾ ಉನ್ನತ ಸಂಸ್ಕೃತಿಯನ್ನು ಮತ್ತು ಉದಾತ ರಾಜಕೀಯ ಚಿಂತನೆಯನ್ನು ತಮ್ಮಾದಾಗಿಸಿಕೊಂಡಿದ್ದರು.
ಪ್ರಸಕ್ತ ಸಮಾಜದಲ್ಲಿನ ಅಸಮಾನತೆ, ಸ್ವ್ವಾರ್ಥ ಮನೋಭಾವ, ಕುಸಂಸ್ಕೃತಿ, ಸ್ವಜನಪಕ್ಷಪಾತ ದಂತ ಕಗ್ಗತ್ತಲಲ್ಲಿ ಭಗತ್ ಸಿಂಗರವರ ಆದರ್ಶ ಮಿಂಚಿನಂತೆ ಹೋಳೆಯುತ್ತಿದೆ. ಈ ದೇಶದ ಯುವಕರು ಇವರ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ನಿಜವಾದ ಗೌರವವನ್ನು ಭಗತರವರಿಗೆ ಕೊಟ್ಟಾಗೆ. ಎಂದು ಹೇಳಿದರು.
ಎ.ಐ.ಡಿ.ವೈ.ಓ ನ ಮತ್ತೋಬ್ಬ ಸಂಘಟನಕಾರರಾದ ಶರಣು ಗಡ್ಡಿ ಮಾತನಾಡಿ ಭಗತ್ ಸಿಂಗ್ ರವರು ಕೇವಲ ೨೩ ನೇ ವಯಸ್ಸಿನಲ್ಲಿ ದೇಶಕ್ಕಾಗಿ ನಗುನಗುತಲೆ ಗಲ್ಲುಗಂಬಕೇರಿ ಸ್ವಾಂತತ್ರ್ಯ ಸಂಗ್ರಾಮದ ಮಾಹಾನ ಕ್ರಾಂತಿಕಾರಿಯಾಗಿದ್ದರು. ಅಷ್ಟೆ ಅಲ್ಲ ಅವರು ಪದೇ ಪದೇ ಸಾರಿದಂತೆ ಬ್ರೀಟಿಷರನ್ನು ಭಾರತದಿಂದ ಬಿಟ್ಟು ಓಡಿಸುವದೋಂದೆ ನಮ್ಮ ಉದ್ದೇಶ ಅಲ್ಲ! ಆ ಸ್ಥಾನದಲ್ಲಿ ಈ ದೇಶದ ರೈತ-ಕಾರ್ಮಿಕರು ಅಧಿಕಾರ ವಹಿಸಿಕೊಳ್ಳಬೇಕ್ಕಾಗಿತ್ತು. ಎಂಬುದು ಅವರ ದೊಡ್ಡ ಕನಸ್ಸಾಗಿತ್ತು. ಆದರೆ ಅದು ಇಂದು ಕನಸ್ಸಾಗೆ ಉಳಿದಿದೆ. ೬೮ ವರ್ಷ ಕಳೆದರು ಈ ದೇಶದಲ್ಲಿ ನೀರುದ್ಯೋಗ, ಶಿಕ್ಷಣದ ವ್ಯಾಪಾರಿಕರಣ, ರೈತರ ಆತ್ಮಹತ್ಯಗಳು, ಕೋಮುವಾದದಂತ ಜ್ವಲಂತ ಸಮಸ್ಯೆಗಳು ನಮ್ಮನ್ನು ಆವರಿಕೋಂಡಿವೆ ಇವುಗಳು ಹೊರದುಡಲು ಹೋರಟಗಳು ಅನಿವಾರ್ಯ ಇದಕ್ಕೆ ಇನ್ನೊಂದು ಸಂಗ್ರಾಮಕ್ಕೆ ಯುವಕರು ಸನ್ನದ್ದರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್.ಕೆ.ಎಲ್.ಇ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸಂಗನಗೌಡರವರು ಮಾತನಾಡಿ ದೇಶದ ಬಗ್ಗೆ, ದೇಶಕ್ಕಾಗಿ ಸರ್ವವನ್ನು ತ್ಯಾಗಮಾಡಿದ ಮಾಹಾನ್ ವ್ಯಕ್ತಿಗಳ ಬಗ್ಗೆ ಇಂದು ಯುವಕರು ತಿಳಿದುಕೋಳ್ಳುವದು ಅವಶ್ಯಕ. ಮತ್ತು ಯುವಕರು ಬೇರಿಲ್ಲದ ರೀತಿಯಲ್ಲಿ ಅವರ ಜೀವನ ನಡೆಯುತ್ತಿದೆ ಅವರಿಗೆ ಮಾರ್ಗದರ್ಶಕರು ಇಂತಹ ಮಾಹನ ವ್ಯಕ್ತಿಗಳು ಆಗುವದರಿಂದ ಅವರ ಜೀವನ ಉಜ್ವಲವಾಗುವದರಲ್ಲಿ ಎರಡುಮಾತ್ತಿಲ್ಲ. ಇಂಥ ಸಂಘಟನೆಗಳು ಮಾಹಾನ ವ್ಯಕ್ತಿಗಳ ಜೀವನವನ್ನು ಯುವಕರಲ್ಲಿ ಕೊಂಡೊಯ್ಯೂತ್ತಿರುವುದು ಶ್ಲಾಘನೀಯ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಸಂಘಟಕಾರರಾದ ಗಡ್ಡಿ ರಾಯಣ್ಣ, ಶಿವು ಗಿಣಗೇರಾ, ಮಹಾಂತೇಶ, ಬಸವರಾಜ, ಮಂಜುಳಾ, ಮತ್ತು ವಿದ್ಯಾರ್ಥಿಗಳು ಉತ್ಸಹದಿಂದ ಭಾಗವಹಿಸಿದರು.

0 comments:
Post a Comment