PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-28- ನಮಗೆ ಸ್ವಾತಂತ್ರ್ಯ ಬಂದರೂ ದುಃಖ ಚಿಂತೆಗಳಿಂದ ಸ್ವತಂತ್ರ್ಯರಾಗಿಲ್ಲ. ಇಂತಹ ಸಮಯದಲ್ಲಿ ಮನುಷ್ಯ ಯಾವ ರೀತಿ ತನ್ನ ಮೇಲೆ ತಾನು ಎಚ್ಚರಿಕೆ ವಹಿಸಬೇಕು. ಸಮಾಜದ ಉನ್ನತಿಗೆ, ದೇಶದ ಉನ್ನತಿಗೆ, ಕುಟುಂಬದ ಉನ್ನತಿಗೆ ನಮ್ಮ ಕೊಡುಗೆ ಏನು? `ಮನಸ್ಸಿನ ಶುದ್ಧತೆ' ಎಲ್ಲರ ಪ್ರತಿ ಶುಭಭಾವನೆ ಶುಭಕಾಮನೆ ಇಟ್ಟುಕೊಳ್ಳಬೇಕು ಎಂದು ಕೇಂದ್ರ ಕಾರಾಗೃಹದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ `ರಕ್ಷಾ ಬಂಧನ' ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಮಾತನಾಡಿದರು. ಮುಂದುವರೆಸುತ್ತಾ, ಪೊಲ್ಯುಟೆಡ್ ಮೈಂಡ್ ಪೊಲ್ಯುಟ್ ದಿ ಎನ್ ವಿರಾನ್‌ಮೆಂಟ್ ಆಂತರಿಕವಾಗಿ ಮನಸ್ಸು ಶಾಂತಿ ಸಮಾಧಾನದಲ್ಲಿ ಇಲ್ಲ ಅಂದ್ರೆ ಶರೀರದ ಆರೋಗ್ಯವು ಅಸ್ಥವ್ಯಸ್ಥವಾಗುತ್ತದೆ. ಈಶ್ವರೀಯ ವಿಶ್ವ ಮಹಾವಿದ್ಯಾಲ
ಮೂಲತಃ ಯಾರೂ ಕೆಟ್ಟವರಲ್ಲ ಆದರೆ ವಾತಾವರಣ, ಪ್ರಭಾವ, ಸಂಗದಿಂದ ತಪ್ಪು ಕೆಲಸಗಳು ಆಗುತ್ತವೆ. ಆದರೆ ಅದಕ್ಕೆ ಶ್ರೇಷ್ಠ ಸಂಸ್ಕಾರ ಕೊಟ್ಟಾಗ ಎಂತಹ ವ್ಯಕ್ತಿಯೂ ಪರಿವರ್ತನೆಯಾಗಬಲ್ಲ ಎಂಬ ಭರವಸೆ ನೀಡಿದರು. `ರಕ್ಷಾಬಂಧನ' ಸೋದರ ಸೋದರಿ ಭಾವನೆಯನ್ನು ಜಾಗೃತಗೊಳಿಸುವ ಪವಿತ್ರ ಪರ್ವ. ಒಬ್ಬ ತಂದೆಯ ಮಕ್ಕಳು ನಾವೆಲ್ಲಾ ಆತ್ಮಗಳು ಪರಸ್ಪರ ಸೋದರ ಸೋದರಿಯರು ಎಂಬ ಸತ್ಯತೆ ಅರಿವಾದಾಗ ವಿಶ್ವ ಸೋದರತ್ವ, ವಿಶ್ವ ಭ್ರಾತೃತ್ವ ಒಡಮೂಡಲು ಸಾಧ್ಯ ಎಂದರು. ಕೈದಿಗಳಿಗೆ ಸಿಬ್ಬಂದಿಯವರಿಗೆ ರಾಖಿ ಕಟ್ಟಿ ಸಿಹಿ ಹಂಚಿದರು.  ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಂಜಯ್‌ರವರು ಮಾತನಾಡುತ್ತಾ, ಕೈದಿಗಳು ಇಲ್ಲಿಯ ಏಕಾಂತ ವಾತಾವರಣದ ಲಾಭವನ್ನು ಪಡೆದು ಸ್ವಯಂನ ತಪ್ಪಿನ ಅರಿವು ಮಾಡಿಕೊಂಡು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶುಭ ಆಶಿಸಿದರು.
ಯವು ಪ್ರತಿ ವರ್ಷ ಕಾರಾಗೃಹದಲ್ಲಿ ರಕ್ಷಾ ಬಂಧನವನ್ನು ಏರ್ಪಡಿಸುವ ಉದ್ದೇಶ `ಕೈದಿಗಳಲ್ಲಿ ಸಕರಾತ್ಮಕ ಪರಿವರ್ತನೆಯನ್ನು ತರುವುದಾಗಿದೆ' ತಪ್ಪು ತಿಳಿಯದೆ ತಿಳುವಳಿಕೆ  ಬೆಳೆಯದು ಎನ್ನುವಂತೆ ಪರಿಶೀಲನೆ ಮಾಡಿಕೊಂಡಾಗ ಪರಿವರ್ತನೆ ಕಾಣಲು ಸಾಧ್ಯ ಎಂದರು.

Advertisement

0 comments:

Post a Comment

 
Top