PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-28- ಶಿಕ್ಷಣದ ವ್ಯಾಪಾರೀಕರಣ, ಕೇಸರಿಕರಣ ವಿರೋಧಿಸಿ ಹಾಗೂ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ ಸೆಪ್ಟಂಬರ್ ೦೨ ರಂದು ಎಸ್.ಎಫ್.ಐ ರಾಷ್ಟ್ರವ್ಯಾಪಿ ಶೈಕ್ಷಣಿಕ ಬಂದ್ ಗೆ ಕರೆ ನೀಡುತ್ತಿದೆ ಎಂದು ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿದರು. ನಗರದ ಸಾಹಿತ್ಯ ಭವನದ ಮುಂದೆ ಎಸ್,ಎಫ್.ಐ ಸಂಘಟನೆ ಹಮ್ಮಿಕೊಂಡಿದ್ದ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,  ಕೇಂದ್ರ ಬಜೆಟ್ ನಲ್ಲಿ ಶಿಕ್ಷಣಕ್ಕೆ ಮೀಸಲಿದ್ದ ರೂ.೮೨,೭೭೧ಕೋಟಿ ಹಣವನ್ನು ರೂ.೬೬,೦೭೪ ಕೋಟಿಗೆ ಇಳಿಸಲಾಗಿದೆ.  ಶಿಕ್ಷಣದ ಸೇವಾ ತೆರಿಗೆಯನ್ನು ಶೇ.೧೪ರಷ್ಟು ಏರಿಸಲಾಗಿದೆ. ಮಧ್ಯಾಹ್ನ ಬಿಸಿ ಊಟ ಕಾರ್ಯಕ್ರಮಕ್ಕೆ ಶೇ.೪೦ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ದೇಶಾದ್ಯಂತ ಸಾವಿರಾರು ಸರ್ಕಾರಿ ಶಾಲೆಗಳನ್ನು ಪಿಪಿಪಿ ಹೆಸರಿನಲ್ಲಿ ಖಾಸಗಿಯವರಿಗೆ ನೀಡಲಾಗಿದೆ. ರೂಸಾ(ಖUSಂ), ಸಿಬಿಸಿಎಸ್ (ಅಃಅS) ಮುಂತಾದ ಶಿಕ್ಷಣ ನೀತಿಗಳನ್ನು ಜಾರಿಗೊಳಿಸಿ ಶಿಕ್ಷಣವನ್ನು ಒಂದು ಜಾಗತಿಕ ಸರಕನ್ನಾಗಿಸಲಾಗುತ್ತಿದೆ. ಈ ನೀತಿಗಳನ್ನು ಗಮನಿಸಿದರೆ ಇದು 'ಅಚ್ಛೆ ದಿನ್' ಅಥವಾ ಒಳ್ಳೆ ದಿನಗಳ ಲಕ್ಷಣಗಳೇ? ಅಥವಾ'ಬೂರೆ ದಿನ್' ಅಥವಾ ಕೆಟ್ಟ ದಿನಗಳು ನಮಗಾಗಿ ಕಾಯುತ್ತಿವೆಯೇ? ನಿಜ ಹೇಳಬೇಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಜಾಗತೀಕರಣ-ಖಾಸಗೀಕರಣ ನೀತಿಗಳಿಂದಾಗಿ ಇಂದು ಶಿಕ್ಷಣ ಖಾಸಗಿ ಲಾಬಿಗಳ ಹಿಡಿತzಲ್ಲಿ ಸಿಲುಕಿದೆ. ದುಬಾರಿ ಶುಲ್ಕಗಳು,  ಡೋನೇಷನ್-ಕ್ಯಾಪಿಟೇಶನ್ ಶುಲ್ಕಗಳಿಂದ ಪೋಷಕರು ತತ್ತರಿಸುತ್ತಿದ್ದಾರೆ. ಶಿಕ್ಷಣ ದುಡ್ಡುಳ್ಳವರಿಗೆ ಮಾತ್ರ ಎಂಬಂತಾಗಿದೆ. ಇನ್ನು ಮೆಡಿಕಲ್ ಮತು ಇಂಜಿನಿಯರಿಂಗ್ ಕೋಸುಗಳು ಬಡಮಕ್ಕಳಿಗೆ ಕನಸಿನಲ್ಲಿಯೂ ಸಿಗದ ಸ್ಥಿತಿಯಲ್ಲಿವೆ. ಪಾಸ್-ಫೇಲ್ ವ್ಯವಸ್ಥೆಯರದ್ಧತಿ ಹಾಗೂ ಇನ್ನಿತರ ಬದಲಾದ ಪರೀಕ್ಷಾ ಪದ್ಧತಿಗಳಿಂದ ಶಿಕ್ಷಣದ ಗುಣಮಟ್ಟ ಅಧೋಗತಿಗೆತಲುಪಿದೆ. ಸೆಮಿಸ್ಟರ್ ಪದ್ಧತಿಯಿಂದಾಗಿ ವಿದ್ಯಾರ್ಥಿಗಳು ಜ್ಞಾನ ಗಳಿPಯಿಂದ ವಂಚಿತರಾಗುತ್ತಿರುವುದು ಶಿಕ್ಷಣ ತಜ್ಞರಲ್ಲಿ,ಅಧ್ಯಾಪಕರಲ್ಲಿ ಆತಂಕ ಮೂಡಿಸಿದೆ. ಅದೇ ರೀತಿ ಶಿಕ್ಷಣದ ಕೋಮುವಾದಿಕರಣ ಹೆಚ್ಚಾಗತೊಡಗಿದೆ. ಪ್ರತಿಷ್ಠಿತ ಐಐಟಿ, ಎನ್.ಸಿ.ಇ.ಆರ್.ಟಿ, ಯುಜಿಸಿ, ಐಸಿಹೆಚ್‌ಆರ್ ಮುಂತಾದ ಸಂಸ್ಥೆಗಳಲ್ಲಿ ಬಿಜೆಪಿ ವಿಚಾರಗಳಿಗೆ ಬದ್ಧರಾಗಿವವರನ್ನು ಕೇಂದ್ರ ಸರ್ಕಾರ ಈಗಾಗಲೆ ತಂದು ಕೂಡಿಸಿದೆ. ಇದು ವಿದ್ಯಾರ್ಥಿಗಳ ಹಕ್ಕನ್ನು ಕಸಿಯುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.  ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ, ಸರಕಾರಿ ಶಾಲಾ-ಕಾಲೇಜ್- ಹಾಸ್ಟೇಲ್ ಗಳು ಸೌಲಭ್ಯವಂ
ಚಿತವಾಗಿವೆ. ಕೈದಿಗಳಿಗೆ ೧೨೦ರೂ ನಂತೆ ದಿನಕ್ಕೆ ಆಹಾರ ಭತ್ಯೆ ನೀಡುತ್ತಿರುವ ಸರಕಾರ ದೇಶದ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ವಿದ್ಯಾರ್ಥಿ ಸಮುದಾಯಕ್ಕೆ ದಿನಕ್ಕೆ ೩೩ ರೂ ನೀಡುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಅಗತ್ಯತೆಗೆ ಅನುಸಾರವಾಗಿ ಸರಕಾರಿ ಶಾಲಾ-ಕಾಲೇಜ್-ಹಾಸ್ಟೇಲ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಜಿಲ್ಲೆಯ ಎಲ್ಲಾ ಶಾಸಕರು ಮುಂದಾಗಬೇಕು. ಇಲ್ಲದೆ ಹೋದಲ್ಲಿ ಅವರ ಮನಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ಮಾತನಾಡಿ ಸೆಪ್ಟಂಬರ್ ೦೨ ರ ಶೈಕ್ಷಣಿಕ್ ಬಂದ್ ಯಶಸ್ವಿಗೊಳಿಸುವುದಕ್ಕಾಗಿ ವ್ಯಾಪಕ ಪ್ರಚಾರ ನಡೆಸಿ ವಿದ್ಯಾರ್ಥಿಗಳ ಬೆಂಬಲವನ್ನು ಪಡೆಯಲಾಗುವುದು. ಸಾರ್ವಜನಿಕರು ಶೈಕ್ಷಣಿಕ ಬಂದ್ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  ಈ ಸಂದರ್ಭದಲ್ಲಿ ಗ್ಯಾನೇಶ್ ಕಡಗದ್, ಉಮೇಶ್ ರಾಠೋಡ್, ಸುಬಾನ್ ಸಯ್ಯದ್, ಅಮರೇಶ್ ಕುರಿ, ರವಿ ರಾಠೋಡ್, ಹನ್ಮಂತ್ ಬಂಡಿಹರ್ಲಾಪುರು, ಹನಮಂತ್ ಭಜಂತ್ರಿ, ಕೃಷ್ಣ ರಾಠೋಡ್, ತಿರುಪತಿ, ರೋಹಿತ್, ಮರಿನಾಗ ಡಗ್ಗಿ, ಭಿಮೇಶ್, ಸೇರಿದಂತೆ ಅನೇಕರಿದ್ದರು.

Advertisement

0 comments:

Post a Comment

 
Top