PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೧೦ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿ ಉಳಿದಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ಅನುಗುಣವಾದ ಪ್ರಥಮ ಸೆಮಿಸ್ಟರ್‌ನ ಇಸಿ ವಿಭಾಗದ-೦೧ ಮತ್ತು ಸಿಎಸ್ ವಿಭಾಗದ-೩೭ ಸೀಟುಗಳ ಡಿಪ್ಲೋಮಾ ಪ್ರವೇಶಕ್ಕಾಗಿ ಆಫ್-ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
     ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು   Sಣಚಿಣe ಃಚಿಟಿಞ oಜಿ ಒಥಿsoಡಿe ಯಾವುದೇ ಶಾಖೆಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಚಾಲ್ತಿ ಖಾತೆ ಸಂಖ್ಯೆ: ೬೪೦೯೭೩೮೬೩೮೧ ಅಥವಾ Sಚಿಣe ಃಚಿಟಿಞ oಜಿ ಊಥಿಜeಡಿಚಿbಚಿಜ ನ ಯಾವುದೇ ಶಾಖೆಗಳಲ್ಲಿನ ಖಾತೆ ಇಆ-ಏಇಂ-ಆಅಇಖಿ-೨೦೧೫ ಂಠಿಠಿಟiಛಿಚಿಣioಟಿ ಈee ಅoಟಟeಛಿಣioಟಿ ಂಛಿಛಿouಟಿಣ ಓo. ೬೨೪೧೭೭೩೨೧೮೦ ಗೆ ಪಾವತಿಸಿ, ಬ್ಯಾಂಕ್ ಚಲನ್ (ಅouಟಿಣeಡಿಈoiಟ)ನ್ನು ಪಡೆದು, ಸರ್ಕಾರಿ ಪಾಟಿಟೆಕ್ನಿಕ್, ಕೊಪ್ಪಳ ಸಂಸ್ಥೆಯಲ್ಲಿ ಸಲ್ಲಿಸಿ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಆ.೧೪ ರ ಮಧ್ಯಾಹ್ನ ೨.೦೦ ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದ್ದು, ಪ್ರವರ್ಗ ೨ಎ, ೨ಬಿ, ೩ಎ, ೩ಬಿ ಅಭ್ಯರ್ಥಿಗಳಿಗೆ ರೂ.೧೦೦/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-೧ ಅಭ್ಯರ್ಥಿಗಳಿಗೆ ರೂ.೫೦/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Advertisement

0 comments:

Post a Comment

 
Top