PLEASE LOGIN TO KANNADANET.COM FOR REGULAR NEWS-UPDATES

ಭಾರತ ಸೇವಾದಳ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ  ರಾಷ್ಟ್ರದ್ವಜ ನೀತಿ ಸಂಹಿತೆ ಹಾಗೂ ರಾಷ್ಟಿಗೀತೆ ಮಾಹಿತಿ ಶಿಬಿರವನ್ನು ಮುಂಜಾನೆ ೧೦:೩೦ ಗಂಟೆಗೆ ಕುವೆಂಪು ಪ್ರೌಢಶಾಲೆ ಕೊಪ್ಪಳದಲ್ಲಿ ಆಯೋಜಿಸಲಾಗಿತ್ತು.
    ಈ ಶಿಭಿರದ ಅಧ್ಯಕ್ಷತೆಯನ್ನು ಭಾರತ ಸೇವಾದಳದ ತಾಲೂಕ ಅಧ್ಯಕ್ಷ ರಾಮನಗೌಡ ಪೊಲೀಸ್ ಪಾಟೀಲ ವಹಿಸಿದ್ದರು. ಮೂಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ದ್ಯಾಮಣ್ಣ ಚಿಲವಾಡಗಿ, ತಾಲೂಕ ಉಪಾದ್ಯಕ್ಷ ಶಿವಾನಂದ ಹೊದ್ಲೂರ, ದೈಹಿಕ ಶಿಕ್ಷಣಾದಿಕಾರಿ ವಾಯ್ ಸುದರ್ಶನರಾವ್, ರಾಜ್ಯ ಸಂಪಮ್ನೂಲ ವ್ಯಕ್ತಿ ಎಚ್. ಅಬ್ದುಲ್ ಅಜೀಜ್ ರವರು ಭಾಗವಹಿಸಿದ್ದರು.
    ದ್ಯಾಮಣ್ಣ ಚಿಲವಾಡಗಿ ಶಿಭಿರ ಉದ್ದೇಶಿಸಿ ಮಾತನಾಡಿ, ಶಿಕ್ಷಣ ನಿರಂತರವಾದುದು ಗುರುವಿನ ಪಾತ್ರ ದೊಡ್ಡದು ಎಂದು ಹೇಳುತ್ತಾ ರಾಷ್ಟ್ರ ನಾಯಕರ ಹೋರಾಟದ ಘಟನೆಗಳನ್ನು ನೆನಪಿಸಿಕೊಟ್ಟರು.
    ಸಂಪನ್ಮೂಲ ವ್ಯಕ್ತಿ ಅಬ್ದುಲ್ ಅಜೀಜ್ ಮಾತನಾಡಿ, ರಾಷ್ಟ್ರದ್ವಜದ ಇತಿಹಾಸ, ಬೆಳೆದು ಬಂದ ದಾರಿ, ದ್ವಜದ ನೀತಿ ಸಂಹಿತೆ ಮತ್ತು ರಾಷ್ಟ್ರ ಗೀತೆಯ ಬಗ್ಗೆ ವಿವರವಾಗಿ ಶಿಭಿರಾರ್ತಿಗಳಿಗೆ ಕೂಲಂಕುಶವಾಗಿ ತಿಳಿಸಿದರು.
    ಆಸ್ಕರ ನಾಯಕ, ಬಸನಗೌ ಪಾಟೀಲ, ಎಂ.ಡಿ. ದೇವರಮನಿ, ಕಳಕಪ್ಪ ಸರ್ವೆ ಮುಂತಾದವರು ಉಪಸ್ಥಿತರಿದ್ದರು.
    ಈ ಶಿಬಿರದಲ್ಲಿ ಕೊಪ್ಪಳ ನಗರದ ಸರಕಾರಿ ಖಾಸಗಿ ಶಾಲೆಗಳಿಂದ ಸುಮಾರು ೧೦೦ ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡು ಇದರ ಉಪಯೋಗವನ್ನು ಪಡೆದರು.
ಶೇಖರಯ್ಯ ಹಿರೇಮಠ ನಿರೂಪಿಸಿದರು. ಎಚ್. ಪ್ರಾಣೇಶ ಸ್ವಾಗತಿಸಿದರು, ಗಾದಿಲಿಂಗಪ್ಪ ವಂದಿಸಿದರು.

Advertisement

0 comments:

Post a Comment

 
Top