PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-


೨೪, ಕ್ಷೇತ್ರದ ಗಿಣಿಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹೊಸ ಕನಕಾಪುರ,ಹಳೇ ಕನಕಾಪುರ, ಕನಕಾಪುರ ತಾಂಡಾ, ಗಿಣಿಗೇರಿ, ಕುಟಗನಹಳ್ಳಿ, ಕಿಡದಾಳ, ಹಾಗೂ ಬೇಳವಿನಾಳ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-೦೨, ಯೋಜನೆಯಡಿಯಲ್ಲಿ ರೂ.೧೦೯.೯ ಲಕ್ಷದ ಡಾಂಬರ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಹಾಗೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳದ ಶಾಸPರಾದ ಕೆ.ರಾಘವೇಂದ್ರ ಹಿಟ್ನಾಳರವರು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತಿಗೆ ಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿಗಳಾದ ಸೇತುವೆ, ಏತ ನೀರಾವರಿ, ಬ್ರಿಜ್ ಕಮ್ ಬ್ಯಾರೇಜ್, ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳುವೇನು. ಶಾಸಕರು ಕೇವಲ ಫ್ಲೇಕ್ಸ್‌ನಲ್ಲಿ ಅಭಿವೃದ್ಧಿ ತೋರಿಸುತ್ತಾರೆವೆಂದು ಹೇಳುವರಿಗೆ ಈಗಾಗಲೇ ನನ್ನ ಅವದಿಯ ೨೪ ತಿಂಗಳಾದ ಕಾಮಗಾರಿಗಳನ್ನು ಅವಲೋಕನ ಮಾಡಿಕೊಳ್ಳಲಿ. ಗಿಣಿಗೇರಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಿ ಈ ಭಾಗದ ೧೦ ಹಳ್ಳಿಗಳ ಅಂತರ್ಜಲವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆನು. ಗಿಣಿಗೇರಿ ಗ್ರಾಮಕ್ಕೆ ಶೀಘ್ರವೇ ಕಾಲೇಜನ್ನು ನಿರ್ಮಾಣಮಾಡಲಾಗುವುದು. ಗಿಣಿಗೇರಿ ಗ್ರಾಮಗಳ ಮುಖ್ಯ ರಸ್ತೆಯನ್ನು ಅಗಲೀಕರಣ ಗೊಳಿಸಿ ವಿಭಜನೆಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಪಕ್ಷ ಬೇದ ಮರೆತು ಸರ್ವರೂ ಇದರ ಸದುಉಪಯೋಗ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಗೋಳಪ್ಪ ಹಲಗೇರಿ, ಮಾರುತೇಪ್ಪ ಹಲಗೇರಿ, ನಾಗರಾಜ ಚಳ್ಳೂಳ್ಳಿ, ಕರಿಯಪ್ಪ ಮೇಟಿ, ಬಾಳಪ್ಪ ಬಾರಕೇರ, ಸುಬ್ಬಣ್ಣ ಆಚಾರ, ಪಂಪಣ್ಣ, ಬಸವರಾಜ ಆಗೋಲಿ, ಉಮೇಶ, ಹನುಮಂತಪ್ಪ ಕಿಡದಾಳ, ಪಕೀರಪ್ಪ, ಪೀರಾ ನಾಯಕ್, ಮಲ್ಲಿಕಾರ್ಜುನ ಹಲಗೇರಿ, ತಾಲೂಕು ಅಧಿಕಾರಿಗಳು, ಗುತ್ತಿಗೆದಾರರು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Advertisement

0 comments:

Post a Comment

 
Top