PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - 28- ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಹುಲಿಹೈದರ್, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಮತ್ತು ಯಲಬುರ್ಗಾ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೆ ಆದೇಶ ನೀಡಲಾಗಿದೆ.  ಆಯಾ ತಾಲೂಕು ತಹಸಿಲ್ದಾರರು ಹಾಗೂ ಪಶುಸಂಗೋಪನೆ ಇಲಾಖೆಯವರು ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಸದ್ಯ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮೇವು ಬೆಳೆಯಲು ಉತ್ತೇಜಿಸಲು ಮೇವು ಬೀಜದ ಮಿನಿಕಿಟ್
ವಿತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಮೇವನ್ನು ಖರೀದಿಸುವ ಪೂರ್ವದಲ್ಲಿ ಮೇವಿನ ಗುಣಮಟ್ಟ ಸರಿ ಇರುವ ಕುರಿತು ಸ್ಥಳೀಯ ಪಶು ವೈದ್ಯಾಧಿಕಾರಿಗಳು ದೃಢೀಕರಣ ನೀಡಬೇಕು.  ಮೇವನ್ನು ರೈತರಿಂದ ಮಾತ್ರ ಖರೀದಿಸಬೇಕು.  ಮದ್ಯವರ್ತಿಗಳಿಂದ ಖರೀದಿಸುವಂತಿಲ್ಲ.  ಆಯಾ ತಹಸಿಲ್ದಾರರು ಮೇವು ಸಾಗಾಣಿಕೆದಾರರಿಂದ ಬರುವ ಮೇವಿನ ಪ್ರಮಾಣವನ್ನು ವೇ ಬ್ರಿಡ್ಜ್‌ನಲ್ಲಿ ತೂಕ ಮಾಡಿಸಿದ ನಂತರವೇ ಮೇವು ಬ್ಯಾಂಕಿಗೆ ಸರಬರಾಜು ಮಾಡಬೇಕು.  ಒಣ ಮೇವಿಗೆ ಪ್ರತಿ ಕೆ.ಜಿ.ಗೆ ರೂ. ೩ ರಂತೆ ದರ ನಿಗದಿಪಡಿಸಲಾಗಿದ್ದು, ಭೂ ರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರಿಗೆ ಆದ್ಯತೆ ಮೇರೆಗೆ ಮೇವನ್ನು ನೀಡಬೇಕು.  ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಹೊಂದಿದ ಬಗ್ಗೆ ದೃಢೀಕರಣ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಯಿಂದ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಎನ್ನುವ ಬಗ್ಗೆ ಮಾಹಿತಿ ಪಡೆದು ಮೇವು ವಿತರಿಸಬೇಕು.  ಮೇವಿನ ಖರೀದಿ ಅಥವಾ ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ಅಥವಾ ಬೇಜವಾಬ್ದಾರಿತನ ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ. ರಮಣದೀಪ್ ಚೌದರಿ ಎಚ್ಚರಿಕೆ ನೀಡಿದರು.

Advertisement

0 comments:

Post a Comment

 
Top