PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-
ಆ,೨೨ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಜರುಗಲಿರುವ ಜಿಲ್ಲಾ ಉತ್ಸವದ ಪ್ರಯುಕ್ತ ಶನಿವಾರ ನಗರದ ಗದಗ ರಸ್ತೆ ಬನ್ನಿಕಟ್ಟಿ ಹತ್ತಿರ ಶ್ರೀಗೌರಿಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ   ಜಿಲ್ಲಾ ಉತ್ಸವದ ಭವ್ಯ ಮೆರವಣಿಗೆಗೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಕನ್ನಡ ಬಾವುಟ ಹಾರಿಸುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಇಟಗಿಯಶ್ರೀಗಳು, ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಹೆಚ್.ನಾರಿನಾಳ, ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೂರನೂರ್, ಹಿರಿಯ ಸಾಹಿತಿ ಡಾ.ಮಾಹಾಂತೇಶ ಮಲ್ಲನಗೌಡರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶರಣಪ್ಪ ಲೇಬಗೇರಿ, ವೇದಿಕೆಯ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ, ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಪತ್ರಕರ್ತ ಹರೀಶ್ ಹೆಚ್.ಎಸ್. ವೈ.ಬಿ,ಜೂಡಿ, ವೀರಣ್ಣ ಕಳ್ಳಿಮನಿ, ಬದರಿನಾಥ ಪುರೋಹಿತ್ ಗಂಗಮ್ಮ ಗಳಗನಾಥ್, ಖಾಸೀಂಸಾಬ್ ಗಡಾದ್, , ಶಿವಕುಮಾರ್ ಗಂಗಾವತಿ, ನಾಗಲಿಂಗಯ್ಯ ಹಿರೇಮಠ, ಹಿರಿಯರಾದ ಮಾರುತಿರಾವ್ ಸುರ್ವೆ, ಛಾಯಾಗ್ರಾಹಕ ಉಮೇಶ್ ಪುಜಾರ್, ಡಾ.ರಾಜಶೇಖರ್ ನಾರಿನಾಳ, ಕಲಾವಿದ ಶಂಕರಪ್ಪ, ಗುಡದಪ್ಪ ಹಲಗೇರಿ, ಉಮಾ ಜನಾದ್ರಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹಲಗೇರಿಯ ಗುಡದಪ್ಪ ಬಾನಪ್ಪನವರ್ ನೇತೃತ್ವದಲ್ಲಿ ಡೊಳ್ಳುಕುಣಿತ, ಲಂಬಾಣಿ ಕುಣಿತ, ಹುಲಿವೇಶ ಧಾರಿಗಳ ನೃತ್ಯ, ವಿವಿಧ ವಾದ್ಯಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಭವ್ಯ ಮೆರವಣಿಗೆ ಸಾಹಿತ್ಯ ಭವನ ತಲುಪಿತು.
22 Aug 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top