ಕೊಪ್ಪಳ- 24- ಹರಿದಾಸ ಕೂಟದಿಂದ ನಡೆಯುತ್ತಿರುವ ಈ ಚಾತುರ್ಮಾಸ್ಯೆದಲ್ಲಿ ಇಂದು ಕೊಪ್ಪಳ-ಬಾಗಲಕೋಟೆ-ಬೆಳಗಾವಿ ಗ್ರಾಮೀಣ ಭಾಗದ ೬ ನೇ ಭಜನಾಮಂಡಳಿಗಳು ಆಗಮಿಸಿ ದಿನವಿಡಿ ಕಾರ್ಯಕ್ರಮ ನಡೆಸಿದವು. ಲೋಕಕಲ್ಯಾಣಕ್ಕಾಗಿ ಇಂದು ಕೃಷ್ಣ ಮಂತ್ರ ಹೋಮ ನಡೆದು ೩ ರೀತಿಯ ರಸಪ್ರಶ್ನೆಗಳು ಸಾಮೂಹಿಕ ಭಜನೆಗಳು ನಡೆದವು. ಪ್ರಸಿದ್ಧ ವಿದ್ವಾಂಸರಾದ ಖ್ಯಾತ ಸಂಶೋಧಕರಾದ ಡಾ. ಪ್ರಭಂಜನಾಚಾರ್ಯ ವ್ಯಾಸನಕೇರಿಯವರು ೩ ದಿನಗಳವರೆಗೆ ಗೀತೆಯ ಮಹಿಮೆಗಳನ್ನು ವಿವಿಧ ಪುರಾಣಗಳಲ್ಲಿಯ ಕಥೆಗಳನ್ನು ಆರಿಸಿ ಸುಂದರವಾಗಿ ಬಣ್ಣಿಸಿದರು. ಅನೇಕ ಜಿಜ್ಞಾಸುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿ ಪರೋಪಕಾರ, ಸಮಾಜಸೇವೆ, ಆಸ್ತಿಕ ಬುದ್ಧಿಯನ್ನು ಪಡೆಯುವಂತೆ ಮಾಡಿದರು. ಅಧ್ಯಕ್ಷೀಯ ಭಾಷಣವನ್ನು ನೀಡಿದ ಪರಮ ಪೂಜ್ಯ ವಿದ್ಯೇಶತೀರ್ಥ ಶ್ರೀಗಳವರು, ನಿರಂತರ ಭಜನೆ, ವಿವಿಧ ಸ್ಪರ್ಧೆಗಳಲ್ಲಿ ಭಾ
ಗವಹಿಸಿ ಜ್ಞಾನರೂಪ ಪ್ರಸಾದ ಪಡೆಯುವುದು ದೇವರಿಗೆ ಸಲ್ಲಿಸುವ ದೊಡ್ಡದಾದ ಪೂಜೆ ಎಂದರು. ನಿತ್ಯ ಉಪದೇಶಿಸುತ್ತಿರುವ ಕೃಷ್ಣಮಾಲ ಪ್ರವಚನದಲ್ಲಿ ಸರ್ವ ಸಂತರಿಗೂ ಹಿಂಸೆಯನ್ನು ಕೊಟ್ಟುದರ ಫಲದಿಂದ ಗೌರವ ಪಡೆಯುವುದು ಜರಾಸಂಧನ ಸ್ವಾಭಾವ ಅದಕ್ಕೆ ಪ್ರೋತ್ಸಾಹ ನೀಡುವರು ದೈತ್ಯರು. ಅಂತಹ ಸ್ವಭಾವದವರನ್ನು ಸಂಹರಿಸಿ ಅದು ಸಮಾಜಕ್ಕೆ ದೇಶಕ್ಕೆ ಮಾರಕ ಎಂದು ಸೂಚಿಸಿದವನು ಶ್ರೀ ಕೃಷ್ಣ ಪರಮಾತ್ಮ. ಪುಷ್ಕರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ವಿರಕ್ತರಾದ ಪಂತರನ್ನು ಹೆದರಿಸಿ ಆಶ್ರಮಗಳನ್ನು ಹಾಳು ಮಾಡಿದ ಹಂಸ- ಡಿಂಬಕರನ್ನು ನಾಶಪಡಿಸಿದವನು ಶ್ರೀಕೃಷ್ಣ. ಆದ್ದರಿಂದ ಸತ್ಸಂಗ ಮಾಡಿ ಅವರನ್ನು ಸೇವಿಸಿದರೆ ಕೃಷ್ಣನ ಅನುಗ್ರಹವಾಗುವುದು ಅವರಿಗೆ ಹಿಂಸಿಸಿದರೆ ಅವರನ್ನು ನಿಗ್ರಹಿಸುವ ಶ್ರೀಕೃಷ್ಣ ಎಂದು ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು. ಕೊನೆಯಲ್ಲಿ ತುಲಾಭಾರ ಕಾರ್ಯಕ್ರಮ ಸುಂದರವಾಗಿ ನಡೆಯಿತು.

0 comments:
Post a Comment